For Quick Alerts
ALLOW NOTIFICATIONS  
For Daily Alerts
 

Ravindra Jadeja: ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ 58 ರನ್‌ ಬಾರಿಸುತ್ತಿದ್ದಂತೆ ಜಡೇಜಾ ಇತಿಹಾಸ

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆ ಭಾರತ ತಂಡದ್ದಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೇಲ್ಪಂಕ್ತಿಯಲ್ಲಿ ಶುಭಮನ್‌ ಗಿಲ್ ಹಾಗೂ ಕೆಎಲ್ ರಾಹುಲ್‌ ರನ್‌ ಕಲೆ ಹಾಕಿ ತಂಡಕ್ಕೆ ಆಸರೆಯಾಗಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಹಾಗೂ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ನಾಲ್ಕನೇ ಟೆಸ್ಟ್‌ನಲ್ಲಿ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸುವ ಮುನ್ನ ಟೀಮ್ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಅವರಿಗೆ ಸ್ಥಾನ ಲಭಿಸುತ್ತದಾ ಎಂಬ ಪ್ರಶ್ನೆಗಳು ಇದ್ದವು. ಆದರೆ ಜಡ್ಡು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಇವರು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿರುವ ಆಟಗಾರ. ಇವರು ಈಗಾಗಲೇ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ 4 ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಮ್ಯಾಂಚೆಸ್ಟರ್‌ ಮೈದಾನದಲ್ಲೂ ಇಂತಹದ್ದೇ ಸಾಧೆನ ಮಾಡಿದ್ದಲ್ಲಿ ಜಡ್ಡು ದಾಖಲೆಯ ಪುಟಕ್ಕೆ ನೇರವಾಗಿ ಎಂಟ್ರಿ ಪಡೆಯಲಿದ್ದಾರೆ.

Ravindra Jadeja Nears Historic Milestone in England Ahead of Crucial 4th Test

ಆಂಡರ್ಸನ್‌, ತೆಂಡುಲ್ಕರ್ ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ ರವೀಂದ್ರ ಜಡೇಜಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಲಾರ್ಡ್ಸ್‌ ಅಂಗಳದಲ್ಲಿ ಜಡೇಜಾ ಮಾಡಿದ ಬ್ಯಾಟಿಂಗ್ ಧಾಟಿ ವಿಶ್ವದ ಚಿತ್ತ ಕದ್ದಿದೆ. ಈ ವೇಳೆ ಜಡೇಜಾ ತಮ್ಮಲ್ಲಿರುವ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈಗ ಇವರು ಮ್ಯಾಂಚೆಸ್ಟರ್‌ನಲ್ಲಿ ಇಂತಹದ್ದೇ ದೊಡ್ಡ ಸಾಧನೆ ಮಾಡುವ ನಿಟ್ಟನಲ್ಲಿ ಚಿತ್ತ ನೆಟ್ಟಿದ್ದಾರೆ. ಇವರು ಮ್ಯಾಂಚೆಸ್ಟರ್‌ನಲ್ಲಿ ಇವರ ಬ್ಯಾಟ್‌ನಿಂದ ಅರ್ಧಶತಕ ಅಥವಾ ಬಿಗ್ ಇನಿಂಗ್ಸ್‌ ಮೂಡಿ ಬಂದರೆ, ಇತಿಹಾಸ ನಿರ್ಮಿಸಲಿದ್ದಾರೆ.

ದೊಡ್ಡ ದಾಖಲೆಯ ಸನಿಹ

ಇಂಗ್ಲೆಂಡ್‌ನಲ್ಲಿ 6 ನೇ ಸ್ಥಾನದಲ್ಲಿ ಅಥವಾ ಅದಕ್ಕಿಂತ ಕಡಿಮೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 1 ಸಾವಿರ ರನ್‌ಗಳ ಮಾರ್ಕ್‌ ದಾಟಲು ಜಡೇಜಾಗೆ ಇನ್ನು 58 ರನ್ ಅವಶ್ಯಕತೆ ಇದೆ. ಒಂದು ವೇಳೆ ಇವರು ಈ ಸಾಧನೆಯನ್ನು ಮಾಡಿದಲ್ಲಿ, ಇಂಗ್ಲೆಂಡ್ ನೆಲದಲ್ಲಿ 6 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾವಿರ ರನ್‌ಗಳ ಕಲೆ ಹಾಕಿದ ಎರಡನೇ ವಿದೇಶಿ ಆಟಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಗ್ಯಾರಿ ಸೋಬರ್ಸ್ ಮಾತ್ರ ಪ್ರವಾಸಿ ಬ್ಯಾಟ್ಸ್‌ಮನ್‌ ಆಗಿ ಅತಿ ಹೆಚ್ಚು ರನ್ ಕಲೆ ಹಾಕಿದ ಹಿರಿಮೆ ಹೊಂದಿದ್ದಾರೆ.

Ravindra Jadeja Nears Historic Milestone in England Ahead of Crucial 4th Test

ಇಂಗ್ಲೆಂಡ್‌ನಲ್ಲಿ 6 ನೇ ಸ್ಥಾನದಲ್ಲಿ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜಡೇಜಾ 942 ರನ್ ಗಳಿಸಿದ್ದಾರೆ. ಈ ಸರಣಿಯಲ್ಲಿ ಜಡ್ಡು ಆಡಿರುವ 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 109 ಸರಾಸರಿಯಲ್ಲಿ 327 ರನ್ ಸಿಡಿಸಿದ್ದು, ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಕುತೂಹಲಕಾರಿ ವಿಷಯವೆಂದರೆ ಈ ನಾಲ್ಕು ಅರ್ಧಶತಕಗಳು ಸತತ 4 ಇನ್ನಿಂಗ್ಸ್‌ಗಳಲ್ಲಿ ಬಂದಿವೆ. ಮ್ಯಾಂಚೇಸ್ಟರ್‌ನಲ್ಲೇ ಜಡ್ಡು ದಾಖಲೆ ಬರೆಯುತ್ತಾರಾ? ಕೊನೆಯ ಟೆಸ್ಟ್ ವರೆಗೂ ಕಾಯಬೇಕಾ? ಎಂಬುದನ್ನು ಕಾದು ನೋಡಬೇಕಿದೆ.

Story first published: Sunday, July 20, 2025, 17:20 [IST]
Other articles published on Jul 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+