ಕೊನೆಗೂ ಟೆಸ್ಟ್ ಕ್ರಿಕೆಟ್ ನಿವೃತ್ತಿ ಕುರಿತು ತುಟಿ ಬಿಚ್ಚಿದ ರವೀಂದ್ರ ಜಡೇಜಾ

ಇತ್ತೀಚಿಗಿನ ಕೆಲ ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಪಡೆಯಲು ಚಿಂತಿಸುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ವರದಿಗಳನ್ನು ಮಾಡಿದ್ದವು. ಇದೇ ರೀತಿ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಲ್ ರೌಂಡರ್ ಆಟಗಾರನಾದ ರವೀಂದ್ರ ಜಡೇಜಾ ಕೂಡ ಟೆಸ್ಟ್ ಕ್ರಿಕೆಟ್‍ನಿಂದ ದೂರ ಉಳಿಯಲು ಚಿಂತನೆಯನ್ನು ನಡೆಸುತ್ತಿದ್ದು ಆದಷ್ಟು ಬೇಗ ಟೆಸ್ಟ್ ಕ್ರಿಕೆಟ್‍ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿತ್ತು.
ಹೌದು, 33 ವರ್ಷದ ರವೀಂದ್ರ ಜಡೇಜಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರವೀಂದ್ರ ಜಡೇಜಾ ಮುಂಗೈ ಗಾಯದ ಸಮಸ್ಯೆಯಿಂದ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಪ್ರಥಮ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೊಳಗಾಗಿದ್ದ ರವೀಂದ್ರ ಜಡೇಜಾ ವಿಶ್ರಾಂತಿಗೆಂದು ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು ಮಾತ್ರವಲ್ಲದೇ ಇತ್ತೀಚೆಗಷ್ಟೇ ಬಿಸಿಸಿಐ ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟಿಸಿದ 18 ಆಟಗಾರರ ಭಾರತ ಟೆಸ್ಟ್ ತಂಡದಲ್ಲಿಯೂ ಕೂಡ ರವೀಂದ್ರ ಜಡೇಜಾ ಅವರ ಹೆಸರು ಇರಲಿಲ್ಲ.
ಹೀಗೆ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾದ ಭಾರತ ತಂಡದಲ್ಲಿಯೂ ಸ್ಥಾನ ನೀಡದೇ ಇರುವುದರ ಕುರಿತಾಗಿ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿದ್ದವು. ರವೀಂದ್ರ ಜಡೇಜಾ ಸೀಮಿತ ಓವರ್ ಮಾದರಿಗಳತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸುವ ಚಿಂತನೆಯನ್ನು ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಈ ಎಲ್ಲ ಸುದ್ದಿಗಳ ಕುರಿತು ಇದುವರೆಗೂ ಮಾತನಾಡದೇ ಇದ್ದ ರವೀಂದ್ರ ಜಡೇಜಾ ಇದೀಗ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕೆಳಕಂಡಂತೆ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯ ವಿಷಯದ ಕುರಿತಾಗಿ ಹರಿದಾಡುತ್ತಿದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

ನಿಜವಾದ ಸ್ನೇಹಿತರು ವದಂತಿಗಳಿಗೆ ಕಿವಿ ಕೊಡುವುದಿಲ್ಲ ಎಂದು ಬರೆದುಕೊಂಡ ಜಡೇಜಾ
ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಯಥೇಚ್ಚವಾಗಿ ಹರಿದಾಡುತ್ತಿರುವ ಸುದ್ದಿಯ ಕುರಿತು ಸ್ವತಃ ರವೀಂದ್ರ ಜಡೇಜಾ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದು "ನಕಲಿ ಸ್ನೇಹಿತರು ವದಂತಿಗಳಲ್ಲಿ ನಂಬಿಕೆ ಇಡುತ್ತಾರೆ ಆದರೆ ನಿಜವಾದ ಸ್ನೇಹಿತರು ನಿಮ್ಮಲ್ಲಿ ನಂಬಿಕೆಯನ್ನು ಇಡುತ್ತಾರೆ" ಎಂಬ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವದಂತಿಗಳಿಗೆ ತಲೆಕೆಡಿಸಿಕೊಳ್ಳದೇ ಸತ್ಯಾಂಶವನ್ನು ತಿಳಿಯಿರಿ ಎಂಬರ್ಥದಲ್ಲಿ ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ.

ಇನ್ನೂ ತುಂಬಾ ಸಮಯವಿದೆ ಎಂದ ರವೀಂದ್ರ ಜಡೇಜಾ
ನಿಜವಾದ ಸ್ನೇಹಿತರಾರು ವದಂತಿಗಳಿಗೆ ಕಿವಿಗೊಡುವುದಿಲ್ಲ ಎಂದು ಬರೆದುಕೊಂಡಿರುವ ರವೀಂದ್ರ ಜಡೇಜಾ ತಾವು ಟೆಸ್ಟ್ ಜೆರ್ಸಿ ತೊಟ್ಟಿರುವ ಫೋಟೋವೊಂದನ್ನು ನಂತರದ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು ಇನ್ನೂ ದೊಡ್ಡ ಅಂತರದ ಹಾದಿ ಮುಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾನು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಇನ್ನೂ ಹೆಚ್ಚಿನ ಸಮಯದವರೆಗೆ ಕಣಕ್ಕಿಳಿಯಲಿದ್ದೇನೆ ಎಂಬುದನ್ನು ರವೀಂದ್ರ ಜಡೇಜಾ ಪರೋಕ್ಷವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಜಡೇಜಾ ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಎಲ್ಲಾ ವದಂತಿಗಳಗೆ ರವೀಂದ್ರ ಜಡೇಜಾ ಅಂತ್ಯ ಹಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ರವೀಂದ್ರ ಜಡೇಜಾ ಅಂಕಿ ಅಂಶ
ರವೀಂದ್ರ ಜಡೇಜಾ 3 ಮಾದರಿಯಲ್ಲಿಯೂ ಭಾರತ ತಂಡದ ಪರ ಆಲ್ ರೌಂಡರ್ ಆಟಗಾರನಾಗಿ ಸದಾ ಉತ್ತಮ ಪ್ರದರ್ಶನವನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಹೀಗಾಗಿಯೇ ಯಾವುದೇ ಸರಣಿಗೆ ಭಾರತ ತಂಡ ಪ್ರಕಟವಾದಾಗ ಅಲ್ಲಿ ರವೀಂದ್ರ ಜಡೇಜಾ ಹೆಸರು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಟೀಮ್ ಇಂಡಿಯಾಗೆ ಯಾವುದೇ ಹೊಸ ಪ್ರತಿಭಾವಂತ ಆಲ್ ರೌಂಡರ್ ಆಟಗಾರ ಬಂದರೂ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ಒಳಗಾಗಿ ವಿಶ್ರಾಂತಿ ಪಡೆಯಲೆಂದು ಹೊರ ಹೋದರೆ ಮಾತ್ರ ಆ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಹೊರತು ರವೀಂದ್ರ ಜಡೇಜಾ ಇದ್ದಾಗ ಆ ಮತ್ತೋರ್ವ ಆಟಗಾರನಿಗೆ ಸ್ಥಾನ ಸಿಗುವುದು ಸುಲಭದ ಮಾತಲ್ಲ. ಹೀಗೆ ಭಾರತ ತಂಡದಲ್ಲಿ ಖಾಯಂ ಸದಸ್ಯನಾಗಿರುವ ರವೀಂದ್ರ ಜಡೇಜಾ ಇದುವರೆಗೂ ಟೀಮ್ ಇಂಡಿಯಾ ಪರ 57 ಟೆಸ್ಟ್ ಪಂದ್ಯಗಳನ್ನಾಡಿದ್ದು 2195 ರನ್ ಗಳಿಸಿದ್ದಾರೆ ಮತ್ತು 232 ವಿಕೆಟ್‍ಗಳನ್ನು ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications