ಏಷ್ಯಾ ಕಪ್‌ನಿಂದ ಜಡೇಜಾ ಔಟ್; ಸೂಪರ್ 4 ಪಂದ್ಯದಲ್ಲಿ ಪಂತ್/ಅಕ್ಷರ್ ನಡುವೆ ಯಾರು ಆಯ್ಕೆ?

ಮೊಣಕಾಲಿನ ಗಾಯದಿಂದಾಗಿ ಸದ್ಯ ನಡೆಯುತ್ತಿರುವ ಏಷ್ಯಾ ಕಪ್ 2022ರಿಂದ ಹೊರಗುಳಿದ ರವೀಂದ್ರ ಜಡೇಜಾ ಆಲ್‌ರೌಂಡರ್ ರೂಪದಲ್ಲಿ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಬದಲಿಯಾಗಿ ಮತ್ತೊಬ್ಬ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯುವಂತಿಲ್ಲ.
ಅಕ್ಷರ್ ಪಟೇಲ್ ಅವರು ಮೀಸಲು ಆಟಗಾರನಾಗಿ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು ಮತ್ತು ಸೆಪ್ಟೆಂಬರ್ 4ರಂದು ಪಾಕಿಸ್ತಾನ ಅಥವಾ ಹಾಂಗ್‌ಕಾಂಗ್ ವಿರುದ್ಧ ಸೂಪರ್ 4 ಪಂದ್ಯಕ್ಕೆ ಮುಂಚಿತವಾಗಿ ತಂಡವನ್ನು ಸೇರಿಕೊಂಡಿದ್ದಾರೆ.
ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿರುವುದರಿಂದ, ಭಾರತ ತಂಡದ ಆಡುವ 11ರ ಬಳಗದಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಮತ್ತೊಮ್ಮೆ ಅವಕಾಶ ಸಿಗುತ್ತದೆಯೇ ಅಥವಾ ಅಕ್ಷರ ಪಟೇಲ್‌ಗೆ ದಾರಿ ಮಾಡಿಕೊಡುತ್ತಾರಾ? ಎಂಬುದು ಭಾನುವಾರವೇ ಗೊತ್ತಾಗಲಿದೆ.

ಅಕ್ಷರ್ ಪಟೇಲ್ ಅಥವಾ ರಿಷಭ್ ಪಂತ್ ನಡುವೆ ಆಯ್ಕೆ ಯಾರು?
ಭಾನುವಾರ ನಡೆಯಲಿರುವ ಭಾರತದ ಮೊದಲ ಸೂಪರ್ 4 ಹಣಾಹಣಿಯಲ್ಲಿ ಭಾರತ ಯಾರ ವಿರುದ್ಧ ಆಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಪಾಕಿಸ್ತಾನವು ಸೂಪರ್ 4ಗೆ ಬಂದರೆ, ಭಾರತಕ್ಕೆ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಬೇಕಾಗಿರುವುದರಿಂದ ಅಕ್ಷರ್ ಪಟೇಲ್ ಆಡಿಸುವುದನ್ನು ನಾವು ನೋಡಬಹುದು, ಅದು ಹೆಚ್ಚು ಸಂಭವಿಸುವ ಸಾಧ್ಯತೆಯಿದೆ.

ಐಪಿಎಲ್‌ನಲ್ಲಿ ದೊಡ್ಡ ಸಿಕ್ಸರ್‌ಗಳನ್ನು ಹೊಡೆದಿರುವ ಅಕ್ಷರ್
ಭಾರತಕ್ಕಾಗಿ ವೈಟ್-ಬಾಲ್ ಪಂದ್ಯಗಳಲ್ಲಿ ಸಿಕ್ಕಿರುವ ಸೀಮಿತ ಅವಕಾಶಗಳಲ್ಲಿ ಅಕ್ಷರ್ ಪಟೇಲ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಆ ದೊಡ್ಡ ಸಿಕ್ಸರ್‌ಗಳನ್ನು ಹೊಡೆದು ತಮ್ಮ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು ಎಂದು ತೋರಿಸಿದ್ದಾರೆ. ಅಕ್ಷರ್ ಪಟೇಲ್ ಉನ್ನತ ದರ್ಜೆಯ ಸ್ಪಿನ್ನರ್ ಮತ್ತು ಬ್ಯಾಟ್ಸ್‌ಮನ್ ಆಗಿಯೂ ಮಿಂಚಿದ್ದಾರೆ.
ರಿಷಭ್ ಪಂತ್ ಅವರು ಈಗ ನಿಧಾನವಾಗಿ ಈ ಸ್ವರೂಪದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಭಾರತದ ಆಡುವ 11ರ ಬಳಗದಲ್ಲಿ ಖಂಡಿತವಾಗಿಯೂ ಕಾಣಿಸಿಕೊಳ್ಳಬೇಕು ಎಂದು ಅನೇಕ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಿಷಭ್ ಪಂತ್‌ನನ್ನು ಕೈಬಿಡುವುದು ಒಳ್ಳೆಯದಲ್ಲ ಎಂದಿದ್ದಾರೆ.

ಪಂತ್‌ಗಿಂತ ದಿನೇಶ್ ಕಾರ್ತಿಕ್‌ಗೆ ಆದ್ಯತೆ
ಆದರೆ ನಾಯಕ ರೋಹಿತ್ ಶರ್ಮಾ ಅ ವರು ರಿಷಭ್ ಪಂತ್‌ಗಿಂತ ದಿನೇಶ್ ಕಾರ್ತಿಕ್‌ರನ್ನು ವಿಕೆಟ್‌ಕೀಪರ್‌ಗೆ ಆದ್ಯತೆ ನೀಡಿದ ಕಾರಣ, ಪಂತ್ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಕಳೆದುಕೊಂಡರು. ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆದಾಗ ಹಾಂಗ್‌ಕಾಂಗ್ ವಿರುದ್ಧದ ಪಂದ್ಯಕ್ಕೆ ರಿಷಭ್ ಪಂತ್ ಮರಳಿದರು. ಇದೀಗ ಏಷ್ಯಾ ಕಪ್‌ನಿಂದ ರವೀಂದ್ರ ಜಡೇಜಾ ಔಟಾಗುವುದರೊಂದಿಗೆ ಆಡುವ 11ರ ಬಳಗ ಪ್ರವೇಶಿಸಲು ರಿಷಭ್ ಪಂತ್ ಅವರಿಗೆ ಅವಕಾಶಗಳು ಇವೆ.
ರಿಷಭ್ ಪಂತ್ ಅವರೂ ಎಡಗೈ ಬ್ಯಾಟರ್ ಆಗಿರುವುದರಿಂದ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಬಹುದು. ಭಾರತವು ಪೂರ್ಣ ಬ್ಯಾಟರ್‌ಗಾಗಿ ಬೌಲಿಂಗ್ ಆಯ್ಕೆಯನ್ನು ಬಿಡಲು ಇಷ್ಟಪಡುವುದಿಲ್ಲ. ಹಾಂಕಾಂಗ್ ವಿರುದ್ಧವೂ ಭಾರತ 5 ಪೂರ್ಣ ಬೌಲರ್‌ಗಳೊಂದಿಗೆ ಆಡಿದಾಗ, ವೇಗಿ ಅವೇಶ್ ಖಾನ್ ದೊಡ್ಡ ರನ್‌ಗಳಿಗೆ ಹೋಗುವುದರಿಂದ ತಂಡವು ತೊಂದರೆಗೊಳಗಾಗಿತ್ತು.

ಏಷ್ಯಾ ಕಪ್‌ಗಾಗಿ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಹಾಲ್, ಅರ್ಶದೀಪ್ ಸಿಂಗ್, ದೀಪಕ್ ಹೂಡಾ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್.
ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಶ್ರೇಯಸ್ ಅಯ್ಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications