ರವೀಂದ್ರ ಜಡೇಜಾ ಇನ್‌ಸ್ಟಾಗ್ರಾಮ್ ಖಾತೆ ಕಣ್ಮರೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಿದ್ಧತೆಗಳು ಈಗಾಗಲೆ ಆರಂಭವಾಗಿವೆ. ಈ ಲೀಗ್‌ನಲ್ಲಿ ಭಾಗವಹಿಸಲಿರುವ 10 ತಂಡಗಳು ಈಗಾಗಲೇ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಲು ನವೆಂಬರ್ 15 ಕೊನೆಯ ದಿನವಾಗಿದೆ. ಈ ಹಿನ್ನೆಲೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ರೇಡ್ ಮಾಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
ರಾಜಸ್ಥಾನ ರಾಯಲ್ಸ್ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈಗೆ ಟ್ರೇಡ್ ಮಾಡಲಿದ್ದು, ಇವರ ಬದಲಿಗೆ ಚೆನ್ನೈ ತಂಡದ ಇಬ್ಬರು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೆನ್ನೈನಿಂದ ಸ್ಯಾಮ್ ಕರನ್, ರವೀಂದ್ರ ಜಡೇಜಾ ಅವರನ್ನು ಆರ್‌ಆರ್ ಟ್ರೇಡ್ ಮಾಡಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ಪರ ರವೀಂದ್ರ ಜಡೇಜಾ ಅವರು ಈ ಮೊದಲೇ ಐಪಿಎಲ್ ಆಡಿದ್ದಾರೆ.

ಈ ಚರ್ಚೆಗಳು ಆರಂಭವಾದ ಬೆನ್ನಲ್ಲೆ ಇನ್‌ಸ್ಟಾಗ್ರಾಮ್‌ನಿಂದ ರವೀಂದ್ರ ಜಡೇಜಾ ಅವರ ಖಾತೆ ಕಣ್ಮರೆಯಾಗಿದೆ. ಇದು ಸಾಮಾಜಿಕ ತಾಣದಲ್ಲಿ ಸಖತ್ ಊಹಾಪೋಹಗಳನ್ನು ಸೃಷ್ಟಿಸಿದೆ. ರವೀಂದ್ರ ಜಡೇಜಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ಪ್ರೊಫೈಲ್ ಲಿಂಕ್ ನಾಪತ್ತೆಯಾಗಿದೆ. ಆದಾಗ್ಯೂ, ಜಡೇಜಾ ಸ್ವತಃ ತಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೋ, ಇದಕ್ಕೆ ಬೇರೆ ಯಾರಾದ್ರೂ ಕಾರಣವೋ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.
ಜಡ್ಡು ಸಾಧನೆ
ರವೀಂದ್ರ ಜಡೇಜಾ ಈಗಾಗಲೇ 19ನೇ ವಯಸ್ಸಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದಾರೆ. ಆಗ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಮತ್ತೊಮ್ಮೆ ಆರ್‍ಆರ್ ಪ್ರಶಸ್ತಿ ಗೆಲ್ಲಲು ಆ ಬಳಿಕ ಸಾಧ್ಯವೇ ಆಗಿಲ್ಲ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2010 ರಲ್ಲಿ ಜಡೇಜಾ ಅವರನ್ನು ಒಂದು ವರ್ಷ ನಿಷೇಧಿಸಲಾಗಿತ್ತು. ಆ ಬಳಿಕವೇ ಜಡ್ಡು ಚೆನ್ನೈ ತಂಡದ ಪರ ಕಾಣಿಸಿಕೊಂಡಿದ್ರು. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ₹18 ಕೋಟಿ ರೂ ನೀಡಿ ಉಳಿಸಿಕೊಂಡಿತ್ತು. 19ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಇವರನ್ನು ರಿಲೀಸ್ ಮಾಡುವ ಯೋಚನೆ ಸಿಎಸ್‌ಕೆ ತಂಡದ್ದಾಗಿದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ 254 ಪಂದ್ಯಗಳನ್ನು ಆಡಿದ್ದು 27ರ ಸರಾಸರಿಯಲ್ಲಿ 3260 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಅರ್ಧಶತಕ ಸೇರಿವೆ. ಇನ್ನು 170 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications