ಐಪಿಎಲ್: ಕೊಹ್ಲಿ, ವ್ಯಾಟ್ಸನ್ ನಂತರ ಆರ್‌ಸಿಬಿ ನಾಯಕನಾದ ಫಾಫ್; ಆರ್‌ಸಿಬಿಯ ಎಲ್ಲಾ ನಾಯಕರ ಪಟ್ಟಿ ಇಲ್ಲಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಅತಿ ದೊಡ್ಡ ಮಟ್ಟದ ಅಭಿಮಾನಿ ಬಳಗ ಹಾಗೂ ಕ್ರೇಜ್ ಹೊಂದಿರುವ ತಂಡವಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಹಿಂಬಾಲಕರು ಇತರೆ ಯಾವುದೇ ಕ್ರಿಕೆಟ್ ಫ್ರಾಂಚೈಸಿ ತಂಡಕ್ಕೂ ಕೂಡ ಇಲ್ಲ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಪಾರುಪತ್ಯವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡದ ಕುರಿತಾಗಿ ಯಾವುದೇ ಹೊಸ ವಿಷಯಗಳನ್ನು ಹಂಚಿಕೊಂಡರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಬಿಡುತ್ತದೆ.
ಅದೇ ರೀತಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ ನಂತರ ತನ್ನ ತಂಡವನ್ನು ಯಾರು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬುದನ್ನು ಘೋಷಿಸುವ ಸಲುವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಹೌದು, ಇಂದು ( ಮಾರ್ಚ್ 12 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ನೂತನ ನಾಯಕನನ್ನು ಘೋಷಣೆ ಮಾಡಿದ್ದು, ಈ ಬಾರಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 7 ಕೋಟಿಗೆ ಖರೀದಿಸಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ನೂತನ ನಾಯಕನೆಂದು ಘೋಷಿಸಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಯಾರು ಮುನ್ನಡೆಸಬಹುದು ಎಂಬುದರ ಕುರಿತು ಅಭಿಮಾನಿಗಳಲ್ಲಿ ಇದ್ದ ಗೊಂದಲಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತೆರೆ ಎಳೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಫಾಫ್ ಡು ಪ್ಲೆಸಿಸ್ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಇಲ್ಲಿಯವರೆಗೂ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಎಲ್ಲಾ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ಓದಿ..

ಆರ್‌ಸಿಬಿಯ ನಾಯಕರ ಪಟ್ಟಿ
ಐಪಿಎಲ್ ಉದ್ಘಾಟನಾ ಆವೃತ್ತಿಯಿಂದ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿರುವ ನಾಯಕರ ಪಟ್ಟಿ ಈ ಕೆಳಕಂಡಂತಿದೆ.
ರಾಹುಲ್ ದ್ರಾವಿಡ್ (2008)
ಕೆವಿನ್ ಪೀಟರ್ಸನ್ (2009)
ಅನಿಲ್ ಕುಂಬ್ಳೆ (2009-10)
ಡೇನಿಯಲ್ ವೆಟ್ಟೋರಿ (2011-12)
ವಿರಾಟ್ ಕೊಹ್ಲಿ (2011-21)
ಶೇನ್ ವ್ಯಾಟ್ಸನ್ (2017)
ಫಾಫ್ ಡು ಪ್ಲೆಸಿಸ್ (2022 *)

2017ರಲ್ಲಿ 3 ಪಂದ್ಯಗಳ ನಾಯಕನಾಗಿದ್ರು ವ್ಯಾಟ್ಸನ್
2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 3 ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾಗ ಶೇನ್ ವ್ಯಾಟ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ 3 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಹಾಗೂ ಆ ಟೂರ್ನಿಯ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿಯೇ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.

ನಾಯಕನಾಗಿ ಆರ್‌ಸಿಬಿಯನ್ನು ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದವರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ವಿರಾಟ್ ಕೊಹ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. 140 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೊಹ್ಲಿ ಮುನ್ನಡೆಸಿದ್ದರೆ, ಅನಿಲ್ ಕುಂಬ್ಳೆ 35 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ, ಡೇನಿಯಲ್ ವೆಟ್ಟೋರಿ 28 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ, ರಾಹುಲ್ ದ್ರಾವಿಡ್ 14 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ, ಕೆವಿನ್ ಪೀಟರ್ಸನ್ 6 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ ಹಾಗೂ ಶೇನ್ ವ್ಯಾಟ್ಸನ್ 3 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications