Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಆಲ್‌ರೌಂಡರ್ ದಾಖಲೆ ಅಳಿಸಿದ ನ್ಯೂಜಿಲೆಂಡ್ ಆಲ್‌ರೌಂಡರ್‌

ಸದ್ಯ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ. ಈ ನಡುವೆ ನ್ಯೂಜಿಲೆಂಡ್‌ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ನೇಪಿಯರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ 73 ರನ್‌ಗಳ ಅಮೋಘ ಜಯ ದಾಖಲಿಸಿದೆ. ಈ ಜಯದ ಮೂಲಕ ಆತಿಥೇಯ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಯುವ ಆಟಗಾರ, ಭಾರತ ತಂಡದ ಭರವಸೆಯ ಆಟಗಾರನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 344 ರನ್‌ ಸಿಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ 44.1 ಓವರ್‌ಗಳಲ್ಲಿ 271 ರನ್‌ ಸಿಡಿಸಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಯುವ ಬ್ಯಾಟರ್ ದಾಖಲೆ ಬರೆದಿದ್ದಾರೆ.

RCB All-Rounder s Record Broken as New Zealand s Mohammad Abbas Smashes Fastest Fifty on ODI Debut

ಪಾಕಿಸ್ತಾನ ಮೂಲಕ ಕ್ರಿಕೆಟ್‌ ಆಟಗಾರ ನ್ಯೂಜಿಲೆಂಡ್‌ ಪರ ಅಬ್ಬರದ ಬ್ಯಾಟಿಂಗ್ ನಡೆಸಿದರು, ತಮ್ಮ 21ನೇ ವಯಸ್ಸಿನಲ್ಲಿ ಚೊಚ್ಚಲ ಏಕದಿನ ಕ್ರಿಕೆಟ್‌ ಆಡಿದ ಮೊಹಮ್ಮದ್ ಅಬ್ಬಾಸ್ ಬಿರುಸಿನ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ವರ್ಲ್ಡ್ ರೆಕಾರ್ಡ್‌ ಬರೆದರು. ಚೊಚ್ಚಲ ಏಕದಿನ ಪಂದ್ಯದಲ್ಲಿ ಅಬ್ಬಾಸ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೊಲಕ ಅಬ್ಬಾಸ ಪದಾರ್ಪಣೆ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಮೊಹಮ್ಮದ್ ಅಬ್ಬಾಸ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಕೃನಾಲ್‌ ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಸಾಧನೆ ಮಾಡಿದರು. ಈ ಪಂದ್ಯ 2021ರಲ್ಲಿ ನಡೆದಿತ್ತು.

ಮಾಜಿ ಕ್ರಿಕೆಟಿಗನ ಮಗ

ನ್ಯೂಜಿಲೆಂಡ್ ತಂಡದ ಭರವಸೆಯ ಆಟಗಾರ ಮೊಹಮ್ಮದ್ ಅಬ್ಬಾಸ ಪಾಕ್‌ ಮೂಲದ ಕ್ರಿಕೆಟ್ ಆಟಗಾರ ಅಜರ್ ಅಬ್ಬಾಸ್‌ ಅವರ ಮಗ. ಇವರು ಲಾಹೋರ್‌ ನಿವಾಸಿ. ಇವರ ತಂದೆ ಪಾಕ್‌ ಪರ ಕ್ರಿಕೆಟ್ ಆಡಿದ ಬಳಿಕ ನ್ಯೂಜಿಲೆಂಡ್‌ಗೆ ಸ್ಥಳಾಂತರ ಗೊಂಡರು. ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಬ್ಬಾಸ ಚೊಚ್ಚಲ ಪಂದ್ಯದಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 26 ಎಸೆತಗಳಲ್ಲಿ 52 ರನ್‌ ಸಿಡಿಸಿದರು.

ಪದಾರ್ಪಣೆ ಪಂದ್ಯದಲ್ಲಿ ವೇಗದ ಅರ್ಧಶತಕ

  1. ಮೊಹಮ್ಮದ್ ಅಬ್ಬಾಸ್ (ನ್ಯೂಜಿಲೆಂಡ್), ಪಾಕಿಸ್ತಾನ ವಿರುದ್ಧ, 24 ಎಸೆತ
  2. ಕೃನಾಲ್ ಪಾಂಡ್ಯ (ಭಾರತ), ಇಂಗ್ಲೆಂಡ್‌ ವಿರುದ್ಧ, 26 ಎಸೆತ
  3. ಅಲಿಕ್‌ ಅಥನಾಜೆ (ವೆಸ್ಟ್‌ ಇಂಡೀಸ್‌), ಯುಎಇ ವಿರುದ್ಧ, 26 ಎಸೆತ
  4. ಇಶಾನ್‌ ಕಿಶನ್ (ಭಾರತ), ಶ್ರೀಲಂಕಾ ವಿರುದ್ಧ, 33 ಎಸೆತಗ
  5. ಜಾನ್‌ ಮಾರಿಸ್‌ (ಇಂಗ್ಲೆಂಡ್), ನ್ಯೂಜಿಲೆಂಡ್ ವಿರುದ್ಧ, 35 ಎಸೆತ

Story first published: Saturday, March 29, 2025, 12:54 [IST]
Other articles published on Mar 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+