Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಹಾಗೂ ಬಹುಮಾನ ಮೊತ್ತ

19ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಬಿದ್ದಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್‌ ಸೇರಿಸಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಬಳಿಕ ವರ್ಣರಂಜಿತ ಪ್ರಶಸ್ತಿ ಸಮಾರೋಪ ಸಮಾರಂಭ ನಡೆಯಿತು. ಯಾವೆಲ್ಲ ಆಟಗಾರರಿಗೆ ಪ್ರಶಸ್ತಿ ಲಭಿಸಿದೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

RCB Beats GT


ಫೈನಲ್ ಪಂದ್ಯದ ಪ್ರಶಸ್ತಿಗಳು

ಐಪಿಎಲ್‌ ಫೈನಲ್‌ ಪಂದ್ಯದ ಶ್ರೇಷ್ಠ ಆಟಗಾರ : ವಿರಾಟ್ ಕೊಹ್ಲಿ ಬಹುಮಾನ ಮೊತ್ತ: ₹5 ಲಕ್ಷ
ಸೀಸನ್‌ನ ಸೂಪರ್ ಸ್ಟ್ರೈಕರ್ : ವೆಂಕಟೇಶ್ ಅಯ್ಯರ್ (ಆರ್‌ಸಿಬಿ) ಸ್ಟ್ರೈಕ್ ರೇಟ್: 200, ಬಹುಮಾನ ಮೊತ್ತ: ₹1 ಲಕ್ಷ
ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ: ವಿರಾಟ್ ಕೊಹ್ಲಿ (ಆರ್‌ಸಿಬಿ) - 9 ಬೌಂಡರಿ, ಬಹುಮಾನ ಮೊತ್ತ: ₹1 ಲಕ್ಷ
ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್: ವಿರಾಟ್ ಕೊಹ್ಲಿ (ಆರ್‌ಸಿಬಿ), 3 ಸಿಕ್ಸರ್‌, ಬಹುಮಾನ ಮೊತ್ತ: ₹1 ಲಕ್ಷ
ಟಾಟಾ ಐಪಿಎಲ್ ಗ್ರೀನ್ ಡಾಟ್ ಬಾಲ್ಸ್; ಭುವನೇಶ್ವರ್ ಕುಮಾರ್ (ಆರ್‌ಸಿಬಿ), 11 ಡಾಟ್ ಬಾಲ್‌ಗಳು, ಬಹುಮಾನ ಮೊತ್ತ: ₹1 ಲಕ್ಷ

ಐಪಿಎಲ್ 2026ರ ಆವೃತ್ತಿಯ ಪ್ರಶಸ್ತಿಗಳು ಮತ್ತು ಬಹುಮಾನದ ಮೊತ್ತ

  1. ಐಪಿಎಲ್ ವಿಜೇತರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (₹20 ಕೋಟಿ)

  2. ರನ್ನರ್ಸ್-ಅಪ್: ಗುಜರಾತ್ ಟೈಟಾನ್ಸ್ (₹12.5 ಕೋಟಿ)

  3. ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್): ವೈಭವ್ ಸೂರ್ಯವಂಶಿ, 776 ರನ್ (₹10 ಲಕ್ಷ)

  4. ಪರ್ಪಲ್ ಕ್ಯಾಪ್ (ಅತಿ ಹೆಚ್ಚು ವಿಕೆಟ್): ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್), 29 ವಿಕೆಟ್‌ (₹10 ಲಕ್ಷ)

  5. ಈ ಆವೃತ್ತಿಯ ಅತ್ಯಮೂಲ್ಯ ಆಟಗಾರ: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್), (₹15 ಲಕ್ಷ)

  6. ಈ ಆವೃತ್ತಿಯಲ್ಲಿ ಅತಿ ಹೆಚ್ಚು ಬೌಂಡರಿ: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್), 75 ಬೌಂಡರಿಗಳು (₹10 ಲಕ್ಷ)

  7. ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್: ವೈಭವ್ ಸೂರ್ಯವಂಶಿ - 72 ಸಿಕ್ಸರ್‌ಗಳು (₹10 ಲಕ್ಷ)

  8. ಆವೃತ್ತಿಯ ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) - ಸ್ಟ್ರೈಕ್ ರೇಟ್: 237.30 (ಬಹುಮಾನ: ಟಾಟಾ ಸಿಯೆರಾ ಕಾರು ಮತ್ತು ಟ್ರೋಫಿ)

  9. 19ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳು: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್), 172 ಡಾಟ್ ಬಾಲ್‌ಗಳು (₹10 ಲಕ್ಷ)

  10. ಆವೃತ್ತಿಯ ಅತ್ಯುತ್ತಮ ಕ್ಯಾಚ್: ಮನೀಶ್ ಪಾಂಡೆ (ಕೆಕೆಆರ್) (₹10 ಲಕ್ಷ)

  11. ಉದಯೋನ್ಮುಖ ಆಟಗಾರ: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್), (₹10 ಲಕ್ಷ)

ಪಿಚ್ ಮತ್ತು ಮೈದಾನ ಪ್ರಶಸ್ತಿಗಳು

5 ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಯೋಜಿಸಿದ ಮೈದಾನ: ಈಡನ್ ಗಾರ್ಡನ್ಸ್, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಬಹುಮಾನ ಮೊತ್ತ: ₹50 ಲಕ್ಷ)
4 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಯೋಜಿಸಿದ ಮೈದಾನ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ, ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಬಹುಮಾನ ಮೊತ್ತ: ₹25 ಲಕ್ಷ)

ಫೇರ್ ಪ್ಲೇ ಪ್ರಶಸ್ತಿ : ಪಂಜಾಬ್ ಕಿಂಗ್ಸ್‌

Story first published: Monday, June 1, 2026, 1:16 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+