ಮೊದಲ ಎಸೆತದಲ್ಲೇ ತನ್ನ ವಿಕೆಟ್ ಪಡೆದ ಬೇಬಿ AB ಕುರಿತು ಹೊಗಳಿದ ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಭರ್ಜರಿ ಫರ್ಪಾಮೆನ್ಸ್ ನೀಡುತ್ತಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 4 ಪಂದ್ಯಗಳಲ್ಲಿ 3 ಗೆಲುವು ಮತ್ತು ಒಂದು ಪಂದ್ಯ ಸೋತಿರುವ ಆರ್‌ಸಿಬಿ ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಮಿಂಚಿದ 152ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 18.3 ಓವರ್‌ಗಳಲ್ಲಿಯೇ ಗುರಿ ತಲುಪುವ ಮೂಲಕ ಪಂದ್ಯವನ್ನ ಜಯಿಸಿತು. ಕೇವಲ ಮೂರು ವಿಕೆಟ್ ಕಳೆದುಕೊಂಡು ಮುಂಬೈ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಗೆಲುವಿನ ಇನ್ನಿಂಗ್ಸ್ ಆಡಿದರು.
ಫಾಫ್ ಡುಪ್ಲೆಸಿ್ 16ರನ್‌ಗೆ ಔಟಾದ ಬಳಿಕ ಅನುಜ್ ರಾವತ್ ಜೊತೆಗೂಡಿದ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನ ಗೆಲುವಿನ ಗೆರೆ ದಾಟಿಸುವತ್ತ ಸಮೀಸಿದ್ರು. 36 ಎಸೆತಗಳಲ್ಲಿ 48 ರನ್‌ಕಲೆಹಾಕಿದ್ದ ಕೊಹ್ಲಿ 5 ಬೌಂಡರಿಯೊಂದಿಗೆ ಉತ್ತಮ ಲಯದಲ್ಲಿಯೇ ಆಟವಾಡುತ್ತಿದ್ರು.
ಆದ್ರೆ 19ನೇ ಓವರ್‌ನಲ್ಲಿ ವಿವಾದಾತ್ಮಕ ತೀರ್ಪಿನಿಂದ ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರೂ ಸಹ ಎದುರಾಳಿ ಬೌಲರ್ ಬಗ್ಗೆ ವಿರಾಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಯುವ ಬ್ಯಾಟ್ಸ್‌ಮನ್, ಬೇಬಿ ಎಬಿಡಿ ಡೇವಾಲ್ಡ್ ಬ್ರೆವಿಸ್ ಐಪಿಎಲ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಶ್ವಶ್ರೇಷ್ಟ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿದ್ದಾರೆ.
ಪಂದ್ಯ ಮುಗಿದ ಬಳಿಕ ಡೆವಾಲ್ಡ್ ಬ್ರೇವಿಸ್ ಜೊತೆಗೆ ಮಾತನಾಡಿರುವ ವಿರಾಟ್ ಕೊಹ್ಲಿ '' ಹೇ ಯಂಗ್ ಮ್ಯಾನ್, ನಮ್ಮಿಬ್ಬರ ಮೊದಲ ಭೇಟಿ ಚೆನ್ನಾಗಿತ್ತು, ಮೊದಲ ಎಸೆತದಲ್ಲೇ ನನ್ನ ವಿಕೆಟ್ ಪಡೆದ ಅನುಭವ ಹೇಗಿತ್ತು'' ಎಂದು ಕೊಹ್ಲಿ ಡೇವಾಲ್ಡ್ ಬ್ರೇವಿಸ್‌ರನ್ನ ನಗುಮುಖದಿಂದ ಪ್ರಶ್ನಿಸಿದ್ದಾರೆ.
ಈ ಕುರಿತಾದ ವೀಡಿಯೋವನ್ನ ತನ್ನ ಅಧಿಕೃತ ಟ್ಟಿಟ್ಟರ್ ಅಕೌಂಟ್‌ನಲ್ಲಿ ಪ್ರಕಟಿಸಿರುವ ಮುಂಬೈ ಇಂಡಿಯನ್ಸ್ ಡೆವಾಲ್ಡ್ ಕುರಿತಾಗಿ ವಿರಾಟ್ ಕೊಹ್ಲಿ ಹೊಗಳಿರುವ ಕುರಿತಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪ್ರಸ್ತುತ ಸೀಸನ್‌ನಲ್ಲಿ ಆಡಿದ 4 ಪಂದ್ಯಗಳಲ್ಲೂ ಸೋಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ತಳ ಮುಟ್ಟಿದೆ. ಪಾಯಿಂಟ್ಸ್ ಟೇಬಲ್ ಕುರಿತಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications