ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಮೇಲೆ ಆರ್‌ಸಿಬಿ ಕಣ್ಣು
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭರವಸೆಯ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಐಪಿಎಲ್‌ನ ಮಾಲೀಕರ ಚಿತ್ತ ಕದಿಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಹಲವು ಆಟಗಾರರು ಎದ್ದು ಕಾಣುತ್ತಾರೆ. ಆದರೆ ಈ ಎಲ್ಲ ಹೆಸರುಗಳಿಗಿಂತ ಮುಂಚಿತವಾಗಿ ಕಾಣಿಸಿಕೊಳ್ಳುವವರೇ ಮೈಸೂರು ತಂಡದ ಆಲ್‌ರೌಂಡರ್.
ಮೈಸೂರು ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ನಾಯಕ ಕರುಣ್ ನಾಯರ್ ಸೇರಿದಂತೆ ಹಲವು ಆಟಗಾರರು ಕಾಣಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತಂಡ ಈ ಬಾರಿ ಸಂಘಟಿತ ಆಟದ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಈ ಗೆಲುವಿನಲ್ಲಿ ಮೈಸೂರು ತಂಡದ ಆಲ್‌ರೌಂಡರ್ ಒಬ್ಬರು ಮಿಂಚಿದ್ದಾರೆ. ಈಗಾಗಲೇ ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಇವರು, ಲೀಗ್‌ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಮೈಸೂರು ಆಲ್‌ರೌಂಡರ್ ಕಮಾಲ್
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ ಆಟಗಾರ ಜೆ.ಸುಚಿತ್.. ಇವರು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸರಸಾರಿಯಲ್ಲಿ ರನ್ ಕಲೆ ಹಾಕಬಲ್ಲರು. ಸುಚಿತ್ ಆಡಿದ 12 ಪಂದ್ಯಗಳಲ್ಲಿ 26.83ರ ಸರಾಸರಿಯಲ್ಲಿ 161 ರನ್ ಸಿಡಿಸಿದ್ದಾರೆ. ಇದರಲ್ಲಿ 9 ಬೌಂಡರಿ, 11 ಸಿಕ್ಸರ್ ಸೇರಿವೆ.
ಸುಚಿತ್ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ಆಡಿದ 12 ಪಂದ್ಯಗಳಲ್ಲಿ 7.54ರ ಏಕಾನಮಿಯಲ್ಲಿ 12 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವ ಸುಚಿತ್ ಫೀಲ್ಡಿಂಗ್‌ನಲ್ಲೂ ಸ್ಟಾರ್ ಪ್ಲೇಯರ್. ಇವರ ಕಣ್ಣಂಚಿನ ಆಚೆ ಈಚೆ ಚೆಂಡು ಅಲೆದಾಡಲು ಸಾಧ್ಯವೇ ಇಲ್ಲ.
ಐಪಿಎಲ್‌ನಲ್ಲಿ ಮಿಂಚು
ಐಪಿಎಲ್‌ನಲ್ಲಿ ಈಗಾಗಲೇ ತಮ್ಮ ಗುರುತು ಬಿಟ್ಟಿರುವ ಬೌಲರ್ ಸುಚಿತ್ ಆಡಿರುವ 22 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಇವರ ಏಕಾನಮಿ 8.60 ಆಗಿದೆ. ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಈ ಸ್ಟಾರ್ ಪ್ಲೇಯರ್ ಮೇಲೆ ಮಾಲೀಕರು ಚಿತ್ತ ನೆಟ್ಟಿರುತ್ತಾರೆ.

ಆರ್‌ಸಿಬಿ ಕಣ್ಣು
ಮಹಾರಾಜ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಜೆ.ಸುಚಿತ್ ಅವರ ಮೇಲೆ ಆರ್‌ಸಿಬಿ ಸಹ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ತಂಡಕ್ಕೆ ಉತ್ತಮ ದೇಶೀಯ ಆಲ್‌ರೌಂಡರ್ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಆರ್‌ಸಿಬಿ ಇವರ ಮೇಲೆ ಬಾಜಿ ಕಟ್ಟಲು ಪ್ಲ್ಯಾನ್ ಮಾಡಿಕೊಂಡಿದೆ.
ಈ ಬಾರಿ ಮೇಗಾ ಹರಾಜು ನಡೆಯಲಿದ್ದು, ಆರ್‌ಸಿಬಿ ಯುವ ದೇಶೀಯ ಆಟಗಾರರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದ ಮರ್ಮವನ್ನು ಅರಿತುಕೊಂಡಿರುವ ಪ್ಲೇಯರ್ ಇದ್ದರೆ ಇನ್ನು ಒಳ್ಳೆಯದು ಎಂಬ ಲೆಕ್ಕಾಚಾರ ಆರ್‌ಸಿಬಿ ತಂಡದ್ದಾಗಿದೆ. ಈ ನಿಟ್ಟಿನಲ್ಲಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸುಚಿತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications