WI vs AUS Test: ಆಸ್ಟ್ರೇಲಿಯಾ ತಂಡಕ್ಕೆ ಕಾಡಿದ RCB ಮಾಜಿ ವೇಗಿ
ವೆಸ್ಟ್ ಇಂಡೀಸ್ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಆಲೌಟ್ ಆಗಿದೆ. ವಿಂಡೀಸ್ ತಂಡದ ಸ್ಟಾರ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ 4 ವಿಕೆಟ್ ಪಡೆದು ಮಿಂಚಿದ್ದಾರೆ. ಎರಡನೇ ದಿನದಾಟದಲ್ಲಿ ಆತಿಥೇಯ ವಿಂಡೀಸ್ ತಂಡ ಬ್ಯಾಟಿಂಗ್ ಆರಂಭಿಸಲಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿತು. ಆಸೀಸ್ ತಂಡದ ಪರ ಸ್ಯಾಮ್ ಕಾನ್ಸ್‌ಟಸ್ (25) ಹಾಗೂ ಭರವಸೆಯ ಬ್ಯಾಟರ್ ಉಸ್ಮಾನ್ ಖವಾಜ (16) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 47 ರನ್ ಜೊತೆಯಾಟ ನೀಡಿದರೂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕರು ಔಟ್ ಆದ ಬಳಿಕ ಕ್ರೀಸ್‌ಗೆ ಬಂದ ಸ್ಟೀವನ್ ಸ್ಮಿತ್ (3) ಭರವಸೆಗೆ ತಕ್ಕಂತೆ ಬ್ಯಾಟ್ ಮಾಡುವಲ್ಲಿ ಎಡವಿದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕ್ಯಾಮರೂನ್ ಗ್ರೀನ್ (26) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ 3 ಬೌಂಡರಿ ನೆರವಿನಿಂದ 29 ರನ್ ಬಾರಿಸಿ ಔಟ್ ಆದರು. 110 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬ್ಲ್ಯೂ ವೆಬ್‌ಸ್ಟರ್ ಹಾಗೂ ಅಲೆಕ್ಸ್ ಕ್ಯಾರಿ ಆಧಾರವಾದರು.
ಭರ್ಜರಿ ಜೊತೆಯಾಟ
ಆರನೇ ವಿಕೆಟ್‌ಗೆ ಅಲೆಕ್ಸ್ ಕ್ಯಾರಿ ಹಾಗೂ ವೆಬ್‌ಸ್ಟರ್ ತಂಡಕ್ಕೆ ಆಧಾರವಾದರು. ಈ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ 150 ಎಸೆತಗಳಲ್ಲಿ 112 ರನ್ ಸೇರಿಸಿತು. ಅಲೆಕ್ಸ್ ಕ್ಯಾರಿ 81 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸೇರಿದಂತೆ 63 ರನ್ ಬಾರಿಸಿ ಔಟ್ ಆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಲ್ಯೂ ವೆಬ್‌ಸ್ಟರ್ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.

ನಾಯಕ ಪ್ಯಾಟ್ ಕಮಿನ್ಸ್ (17), ಮಿಚೆಲ್ ಸ್ಟಾರ್ಕ್ (6), ನಾಥನ್ ಲಿಯಾನ್ (11), ಜೋಶ್ ಹ್ಯಾಜಲ್‌ವುಡ್ (10) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಜೋಸೆಫ್ 4 ವಿಕೆಟ್
ವೆಸ್ಟ್ ಇಂಡೀಸ್ ತಂಡದ ಪರ ಅಲ್ಜರಿ ಜೋಸೆಫ್ 15.5 ಓವರ್‌ಗಳಲ್ಲಿ 61 ರನ್ ನೀಡಿ 4 ವಿಕೆಟ್ ಪಡೆದರು. ಉಳಿದಂತೆ ಜೇಡನ್ ಸೀಲ್ಸ್ 2, ಶಮರ್ ಜೋಸೆಫ್, ಆಂಡರ್ಸನ್ ಫಿಲಿಪ್, ಜಸ್ಟಿನ್ ಗ್ರೀವ್ಸ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications