ಮೆಗಾ ಹರಾಜು: ಕೊಹ್ಲಿ, ಎಬಿಡಿ, ಕೋಚ್ ಅಲ್ಲ, ಇವರು ಹೇಳುವ ಆಟಗಾರರನ್ನೇ ಖರೀದಿಸಲಿದೆ ಆರ್‌ಸಿಬಿ!

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿದ್ದು, ಟೂರ್ನಿಯ ಕುರಿತಾದ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿವೆ. ಕಳೆದ ವರ್ಷ ನೂತನ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಲಕ್ನೋ ಮತ್ತು ಅಹಮದಬಾದ್ ಫ್ರಾಂಚೈಸಿಗಳು ಹೊರಹೊಮ್ಮಿದವು. ಹೀಗೆ ನೂತನ ಫ್ರಾಂಚೈಸಿಗಳ ಸೇರ್ಪಡೆಯ ಮೂಲಕ ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿಕೊಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿರುವುದು ವಿಶೇಷವಾಗಿರಲಿದೆ.
ಹೀಗೆ ದಿನದಿಂದ ದಿನಕ್ಕೆ, ಚಟುವಟಿಕೆಗಳಿಂದ ಚಟುವಟಿಕೆಗಳಿಗೆ ಕುತೂಹಲ ಹಾಗೂ ನಿರೀಕ್ಷೆಗಳ ಮಟ್ಟವನ್ನು ಹೆಚ್ಚಾಗುವಂತೆ ಮಾಡುತ್ತಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುವುದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಈ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಹರಾಜಿನಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವಾರು ದೇಶಗಳ 1214 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹೀಗೆ ನೋಂದಾಯಿಸಿಕೊಂಡಿದ್ದ ಆಟಗಾರರ ಪೈಕಿ ಒಟ್ಟು 590 ಆಟಗಾರರನ್ನು ಅಂತಿಮವಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಹೀಗೆ ನಡೆಯಲಿರುವ 590 ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಾಯಕತ್ವ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿರುವಂತಹ ಆಟಗಾರರು ಕೂಡ ಭಾಗವಹಿಸಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಮೆಗಾ ಹರಾಜಿನಲ್ಲಿ ನಾಯಕನ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಖರೀದಿಸುವ ಯೋಜನೆಯಲ್ಲಿದೆ. ಅದರ ಜತೆಗೆ ತಂಡಕ್ಕೆ ಬೇಕಾಗಿರುವ ವಿವಿಧ ವಿಭಾಗಗಳ ಸೂಕ್ತ ಆಟಗಾರರನ್ನು ಆಯ್ದುಕೊಳ್ಳುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ಚಿತ್ತವನ್ನು ನೆಟ್ಟಿದ್ದು, ಯಾವ ಸ್ಥಾನಗಳಿಗೆ ಯಾವ ಆಟಗಾರರನ್ನು ಆಯ್ಕೆ ಮಾಡಿಕೊಂಡರೆ ಉತ್ತಮವಾಗಿರಲಿದೆ ಎಂಬ ಸಲಹೆಯನ್ನು ಇತರರಿಂದ ಪಡೆದು ನಂತರ ಹೆಜ್ಜೆ ಇಡಲು ಸಿದ್ಧವಾಗಿದೆ. ಹಾಗಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಟಗಾರರನ್ನು ಆಯ್ಕೆ ಮಾಡುವುದರ ಕುರಿತಾಗಿ ಯಾರ ಸಲಹೆಯನ್ನು ಪಡೆದುಕೊಳ್ಳಲಿದೆ ಎನ್ನುವ ಪ್ರಶ್ನೆಗೆ ಈ ಕೆಳಕಂಡಂತೆ ಉತ್ತರ ಲಭಿಸಿದೆ.

ಆಟಗಾರರನ್ನು ಖರೀದಿಸಲು ಸಲಹೆ ಪಡೆಯಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ತಂಡಗಳಲ್ಲಿ ಪ್ರಮುಖವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ತನ್ನ ಅಭಿಮಾನಿಗಳಿಗೆ ವಿಶೇಷವಾದ ಜವಾಬ್ದಾರಿಯೊಂದನ್ನು ನೀಡಲು ಮುಂದಾಗಿದೆ. ಹೌದು, ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಎಂಬುದರ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಭಿಮಾನಿಗಳಿಂದ ಸಲಹೆಗಳನ್ನು ಪಡೆದುಕೊಳ್ಳಲಿದೆಯಂತೆ. ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೂಚಿಸಲಿರುವ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಯತ್ನ ನಡೆಸಲಿದೆ.

ಅಭಿಮಾನಿಗಳ ಸಲಹೆ ಫ್ರಾಂಚೈಸಿಗೆ ಸಹಕಾರಿಯಾಗಬಹುದು
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಭಿಮಾನಿಗಳಿಂದ ಸಲಹೆ ಪಡೆದುಕೊಂಡು ಆಟಗಾರರನ್ನು ಖರೀದಿಸುವ ತೀರ್ಮಾನವನ್ನು ಕೈಗೊಂಡಿರುವುದು ಫ್ರಾಂಚೈಸಿಗೆ ಹೆಚ್ಚು ಸಹಕಾರಿಯಾಗಲಿದೆ ಎನ್ನಬಹುದು. ಏಕೆಂದರೆ ಫ್ರಾಂಚೈಸಿ ಓರ್ವ ಆಟಗಾರನನ್ನು ಖರೀದಿಸಿದಾಗ ಆ ಆಟಗಾರ ಕೊಟ್ಟ ಹಣಕ್ಕೆ ಪ್ರತಿಫಲವನ್ನು ಒದಗಿಸುತ್ತಾನಾ ಅಥವಾ ಇಲ್ಲವಾ ಎಂಬುದನ್ನು ಬಹುತೇಕ ಅಭಿಮಾನಿಗಳು ಮೊದಲೇ ಊಹಿಸಿ ಬಿಡುತ್ತಾರೆ. ಹಾಗೂ ಪಂದ್ಯಗಳ ವೇಳೆ ಈ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಾನಾ ಹಾಗೂ ಈತ ವಿಫಲನಾಗುತ್ತಾನಾ ಎಂಬುದನ್ನು ಕೂಡ ಪ್ರೇಕ್ಷಕರು ಸರಿಯಾಗಿ ಊಹಿಸಿರುತ್ತಾರೆ.

ನಾಯಕತ್ವ ಯಾರ ಹೆಗಲಿಗೆ?
ಇನ್ನು ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಂತರ ಸ್ವ ಇಚ್ಛೆಯಿಂದ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಿದ್ದು, ಈ ವರ್ಷದಿಂದ ನೂತನ ನಾಯಕನ ನೇಮಕವಾಗಲಿದೆ. ಸದ್ಯ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿದ್ದು, ಮುಂಬರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಖರೀದಿಸಲು ಫ್ರಾಂಚೈಸಿ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications