ರಾಹುಲ್‌ಗೆ ಬಳಸದ ಹಣವನ್ನು ಯಾರಿಗೆ ಎತ್ತಿಟ್ಟಿದ್ದೀರಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳ ಭರವಸೆಯನ್ನು ಹುಸಿಯಾಗಿಸಿದೆ. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಹಣವನ್ನು ಹೂಡುವಲ್ಲಿ ಹಿಂದೆ ಬಿದ್ದಿದ್ದು, ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಕನ್ನಡಿಗರಿಗೆ ಮೊದಲ ದಿನ ಹಣವನ್ನು ಹೂಡುವಲ್ಲಿ ಹಿಂದೆ ಬಿದ್ದಿರುವ ಆರ್‌ಸಿಬಿ, ಇನ್ನು ಯಾರಿಗಾಗಿ ಹಣವನ್ನು ಹೂಡಲು ಇಟ್ಟುಕೊಂಡಿದೆ ಎಂಬ ಒಂದು ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ತೊರೆದಾಗ ಇವರನ್ನು ಆರ್‌ಸಿಬಿ ಖರೀದಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ನಿಟ್ಟಿನಲ್ಲಿ ಆರ್‌ಸಿ ಪ್ರಯತ್ನ ಸಹ ಮಾಡಲಿಲ್ಲ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಕೊಳ್ಳಲು ಬೇರೆ ತಂಡಗಳು ಹಣವನ್ನು ಹೂಡಲು ಮುಂದಾದವು. ಆದರೆ ಆರ್‌ಸಿಬಿ 10 ಕೋಟಿ ರೂಪಾಯಿ ಮಾರ್ಕ್‌ನಿಂದ ಮೇಲೆ ಹೋಗಲೇ ಇಲ್ಲ. ನಾಯಕನ ಹುಡುಕಾಟದಲ್ಲಿದ್ದ ಆರ್‌ಸಿಬಿ ಈ ಪ್ಲೇಯರ್ ಒಬ್ಬ ಬೆಸ್ಟ್ ಕ್ಯಾಪ್ಟನ್ ಆಗುತ್ತಿದ್ದರು. ಆದರೆ ಇವರ ಮೇಲೆ ಮ್ಯಾನೇಜ್ಮೆಂಟ್ ಭರವಸೆ ಮೂಡಿಸದೆ ಇರುವುದು ನಿಜಕ್ಕೂ ಬೇಸರ ಮೂಡಿಸಿದೆ.

ಯಾರಿಗೆ ಹಣ ಎತ್ತಿಟ್ಟಿದ್ದೀರಿ?
ಈ ವೇಳೆ ಅಭಿಮಾನಿಗಳು ತಮ್ಮ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯ ಟೀಮ್ ಇಂಡಿಯಾದ ಮಾಜಿ ಆಟಗಾರ ದೊಡ್ಡ ಗಣೇಶ್ ಅವರು ಮಾಡಿದ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಕೆಎಲ್ ರಾಹುಲ್ ಅವರಿಗೆ ಹಣವನ್ನು ಹೂಡುವಲ್ಲಿ ಹಿಂದೇಟು ಹಾಕಿದ್ದಕ್ಕೆ ಗಣೇಶ್ ಟ್ವೀಟ್ ಮಾಡಿದ್ದಾರೆ. ರಾಹುಲ್‌ಗೆ ಬಳಸದ ಹಣವನ್ನು ನೀವು ಯಾರಿಗಾಗಿ ಎತ್ತಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್ ಈಗ ಸಖತ್ ಸದ್ದು ಮಾಡುತ್ತಿದೆ.
ಕರ್ನಾಟಕದ ಸ್ಟಾರ್ ಆಟಗಾರರಿಗೆ ಪೋಷಿಸಬೇಕಿದ್ದ ಆರ್‌ಸಿಬಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಹಿಂದೆ ಬಿದ್ದಿದೆ. ತನ್ನ ಹಳೆಯ ಪರಂಪರೆಯನ್ನು ಆರ್‌ಸಿಬಿ ಈ ಹರಾಜಿನಲ್ಲೂ ಮುಂದುವರೆಸಿದ್ದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ನು ಕೆಎಲ್ ರಾಹುಲ್ ಅವರು ಕರ್ನಾಟಕದ ಸೂಪರ್ ಸ್ಟಾರ್ ಬ್ಯಾಟರ್. ಇವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಮಣೆ ಹಾಕಿದೆ. ಅದು ಸಹ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿದ್ದಾರೆ. ಇವರನ್ನು ಕೊಳ್ಳಲು ಆರ್‌ಸಿಬಿ 10 ಕೋಟಿಗೂ ಹೆಚ್ಚಿನ ಹಣವನ್ನು ಹೂಡಲು ಮನಸ್ಸು ಮಾಡಲಿಲ್ಲ. ಇವರನ್ನು ಕೊಳ್ಳಲು ಕೆಕೆಆರ್ ನಂತರ ಗ್ರೌಂಡ್‌ಗೆ ಎಂಟ್ರಿ ಮಾಡಿತು. ಪರಿಣಾಮ ಇವರ ಮೌಲ್ಯ ಹೆಚ್ಚಾಯಿತು. ಕೊನೆಯಲ್ಲಿ ಡೆಲ್ಲಿ ಇವರನ್ನು ಪಡೆದು ಬಾಜಿ ಗೆದ್ದಿದಿದೆ.
ವೆಂಕಟೇಶ್ ಅಯ್ಯರ್ ಮೇಲೆ ಅಷ್ಟೋಂದು ಭರವಸೆ ಏಕೆ?
ಕರ್ನಾಟಕದ ಆಟಗಾರರನ್ನು ಕೊಳ್ಳುವಾಗ ಇರದ ಭರವಸೆಯ ವೆಂಕಟೇಶ್ ಅಯ್ಯರ್ ಅವರನ್ನು ಕೊಳ್ಳುವಾಗ ಹೇಗಿ ಇತ್ತು ಎಂಬ ಪ್ರಶ್ನೆಯನ್ನು ಸಹ ದೊಡ್ಡ ಗಣೇಶ್ ಎತ್ತಿದ್ದಾರೆ. ಇವರು ವೆಂಕಟೇಶ್ ಅಯ್ಯರ್ ಅವರಿಗೆ ಆರ್‌ಸಿಬಿ 23 ಕೋಟಿ ರೂಪಾಯಿ ಬಾಜಿ ಕಟ್ಟಿದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ಕರ್ನಾಟಕದ ಪ್ರತಿಭೆ ಅಭಿನವ್ ಮನೋಹರ್, ಕರುಣ್ ನಾಯರ್ ಅವರಿಗೆ ಹಣ ಹೂಡದ ಮ್ಯಾನೇಜ್ಮೆಂಟ್ ವೆಂಕಟೇಶ್ ಅವರಿಗೆ ಭಾರಿ ಮೊತ್ತ ಹೂಡಲು ಮುಂದಾಗಿದ್ದು ಏಕೆ ಎಂಬ ಪ್ರಶ್ನೆಗಳು ಸಹಜವಾಗಿ ಎದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications