RCB ಇನ್‌ಸೈಡರ್: ಕೋಳಿ ಸಾರಿನ ಚರ್ಚೆಯಲ್ಲಿ ಹೆಟ್ಮಾಯೆರ್!

ಬೆಂಗಳೂರು, ಮೇ 10: ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮದ ನಿರೂಪಕ ಮಿಸ್ಟರ್ ನ್ಯಾಗ್ಸ್ ಹೊಸದಾಗಿ ಬಿಡುಗಡೆ ಮಾಡಿರುವ ವಿಡಿಯೊ ಒಂದರಲ್ಲಿ ವೆಸ್ಟ್ ಇಂಡೀಸ್‌ನ ಯುವ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮಾಯೆರ್ ಅವರ ಕಾಲೆಳೆದಿದ್ದು, ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ.
ಶಿಮ್ರಾನ್ ಅವರ ಹೆರನ್ನು ಶಾರುಖ್ ಖಾನ್ ನಟನೆಯ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ 'ದಿಲ್‌ವಾಲೆ ದುಲ್ಹನಿಯ ಲೇಜಾಯೇಂಗೆ' (ಡಿಡಿಎಲ್‌ಜೆ)ಯ ಕಥಾನಾಯಕಿ ಸಿಮ್ರನ್‌ಗೆ (ಕಾಜಲ್ ಈ ಪಾತ್ರದಲ್ಲಿ ನಟಿಸಿದ್ದಾರೆ) ಹೋಲಿಸಿ ಕೀಟಲೆ ಆರಂಭಿಸುವ ಮಿಸ್ಟರ್ ನ್ಯಾಗ್ಸ್, ಕೋಳಿ ಸಾರಿನಿಂದ ಹಿಡಿದು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ವಿಂಡೀಸ್‌ನ ಬ್ಯಾಟ್ಸ್‌ಮನ್‌ಗೆ ಸಿಕ್ಕಾಪಟ್ಟೆ ಬೌನ್ಸರ್‌ಗಳನ್ನು ಎಸೆಯುತ್ತಾರೆ.
ಅಂದಹಾಗೆ ಆರ್‌ಸಿಬಿ ಅಭಿಮಾನಿಗಳಿಗೆ ಕ್ರಿಕೆಟ್ ಫೀಲ್ಡ್‌ನಿಂದ ಆಚೆಗೂ ಭರಪೂರ ಮನರಂಜನೆ ನೀಡುತ್ತಿರುವ ಆರ್‌ಸಿಬಿ ಇನ್‌ಸೈಡರ್ ಶೂ, ನೆಟ್ಟಿಗರ ಅದರಲ್ಲೂ ಆರ್‌ಸಿಬಿಯನ್ನರ ಅಚ್ಚುಮೆಚ್ಚಿನ ಕಾರ್ಯಕ್ರಮ. ಕ್ರಿಕೆಟ್ ಮೈದಾನದಿಂದಾಚಗೆ ಆರ್‌ಸಿಬಿ ತಂಡದ ಆಟಗಾರರೊಡನೆ ಸಂದರ್ಶನ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜನಪ್ರಿಯ ನಿರೂಪಕ ಹಾಗೂ ನಟ ದಾನಿಶ್ ಸೇಠ್, ಇನ್‌ಸೈಡರ್ ಕಾರ್ಯಕ್ರಮದ ಮೂಲಕ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಚಿಕ್ಕು ಕ್ರಿಸ್ ಗೇಲ್
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ 22 ವರ್ಷದ ಯುವ ಪ್ರತಿಭೆ ಹೆಟ್ಮಾಯೆರ್ ಅವರನ್ನು ಜೂನಿಯರ್ ಕ್ರಿಸ್ ಗೇಲ್ (ಚಿಕ್ಕು ಕ್ರಿಸ್‌ಗೇಲ್) ಎಂದೇ ಕರೆಯಲಾಗುತ್ತಿದೆ. ಈ ಕುರಿತಾಗಿ ಮಿಸ್ಟರ್ ನ್ಯಾಗ್ಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶಿಮ್ರಾನ್, "ಕ್ರಿಸ್ ಗೇಲ್‌ಗೆ ಹೋಲಿಸುವುದು ಒತ್ತಡ ತರುತ್ತದೆ. ಏಕೆಂದರೆ ಅವರ ಹೆಸರಿಗೆ ತಕ್ಕ ಆಟವಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ನನ್ನ ಸಾಮರ್ಥ್ಯವನ್ನಷ್ಟೇ ಪ್ರದರ್ಶಿಸಿ ಅದಕ್ಕೆ ತಕ್ಕ ರೀತಿಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೇನೆ,'' ಎಂದಿದ್ದಾರೆ. ಇದೇ ವೆಸ್ಟ್ ಇಂಡೀಸ್ ಒಂದು ದೇಶವಲ್ಲ. ದಕ್ಷಿಣ ಅಮೆರಿಕಾ ಭಾಗದಲ್ಲಿ ಕ್ರಿಕೆಟ್ ಆಡುವ ರಾಷ್ಟ್ರಗಳನ್ನು ಒಗ್ಗೂಡಿಸಿ ವೆಸ್ಟ್ ಇಂಡೀಸ್ ತಂಡವನ್ನು ರಚಿಸಲಾಗಿದೆ ಎಂಬ ವಿಷಯವನ್ನು ಹೆಟ್ಮಾಯೆರ್ ವಿವರಿಸಿದ್ದಾರೆ.

ಚಿಕನ್ ಕರಿನೂಬೇಡ, ಕರಿ ಚಿಕನ್ನೂ ಬೇಡ, ಕೋಳಿ ಸಾರು ಸಾಕು
ಇನ್ನು ವೆಸ್ಟ್ ಇಂಡೀಸ್‌ನ ಗಯಾನ ಮತ್ತು ಟ್ರಿನಿಡಾಡ್ ದೇಶಗಳಲ್ಲಿ ಚಿಕನ್ ಕರಿ ಮತ್ತು ಕರಿ ಚಿಕನ್ ನಡುವೆ ವಾದ ಜೋರಾಗಿದೆ. ಈ ವಾದದ ಕುರಿತಾಗಿ ಮಾತನಾಡಿದ ಶಿಮ್ರಾನ್, "ಗಯಾನದಲ್ಲಿ ಚಿಕನ್ ಕರಿ ಎಂದು ಕರೆಯಲಾಗುತ್ತದೆ. ಟ್ರಿನಿಡಾಡ್‌ನಲ್ಲಿ ಕರಿ ಚಿಕನ್ ಎನ್ನಲಾಗಉತ್ತದೆ. ಅಂದಹಾಗೆ ಎರಡರ ನಡುವೆ ಅಂಥದ್ದೇನು ವ್ಯತ್ಯಾಸವಿಲ್ಲ. ಆದರೂ, ಈ ರೀತಿ ವಿಭಿನ್ನವಾಗಿ ಕರೆಯಲಾಗುತ್ತದೆ,'' ಎಂದು ಹೇಳಿದರು. ಈ ವಾದಕ್ಕೆ ಇತ್ಯರ್ಥ ನೀಡುವುದಾಗಿ ಹೇಳಿದ ನ್ಯಾಗ್ಸ್, "ಚಿಕನ್ ಕರಿನೂಬೇಡ, ಕರಿ ಚಿಕನ್ನೂ ಬೇಡ, ಕೋಳಿ ಸಾರು ಎಂದು ಕರೆಯಿರಿ ಸಾಕು. ಚಿಕನ್ ಎಂದರೆ ಕೋಳಿ, ಕರಿ ಎಂದರೆ ಸಾರು. ಸೋ ಕೋಳಿ ಸಾರು ಸಾಕು,'' ಎಂದಿದ್ದಾರೆ. ಬಳಿಕ ನನಗೆ ಕೋಳಿ ಸಾರು ಇಷ್ಟವಿಲ್ಲ ಎಂದು ಹೆಟ್ಮಾಯೆರ್ ಉತ್ತರಿಸಿದರೆ, 'ಬ್ರೇಕಿಂಗ್ ನ್ಯೂಸ್. ಹೆಟ್ಮಾಯೆರ್‌ಗೆ ವಿರಾಟ್ ಕೋಳಿ ಸಾರು ಇಷ್ಟವಿಲ್ಲವಂತೆ' ಎಂದು ನ್ಯಾಗ್ಸ್ ಕೀಟಲೆ ಮಾಡಲು ಆರಂಭಿಸುತ್ತಿದ್ದಂತೆಯೇ, ಶರಣಾಗತಿ ಬಯಸಿದ ಶಿಮ್ರಾನ್ ಕೋಳಿ ಸಾರನ್ನು ಒಪ್ಪಿಕೊಳ್ಳುತ್ತಾರೆ.

ಹೇರ್‌ಸ್ಟೈಲ್‌ಗೆ ಹೈಡ್ರೋಜನ್ ಪೆರಾಕ್ಸೈಡ್
ಏನು ನಡಿಯುತ್ತಿದೇ ಎಂಬುದೇ ಅರಿಯದೆ ಕಂಗಾಲಾಗಿ ಕುಳಿತು ಕೊಳ್ಳುವ ಶಿಮ್ರಾನ್‌ಗೆ ಕಾಲೆಳೆಯುವುದನ್ನು ಮುಂದುವರಿಸಿರುವ ನ್ಯಾಗ್ಸ್, "ಶೋಕ್ ನಗರ್ ಮತ್ತು ಈಜಿಪುರದ ಶಿಮ್ರಾನ್ ಫ್ಯಾನ್ಸ್ ಅಸೋಸಿಯೇಷನ್‌ನಿಂದ ಸಂದೇಶ ಬಂದಿದ್ದು, ಅವರೆಲ್ಲಾ ನಿಮ್ಮ ಹೇರ್ ಸ್ಟೈಲ್ ಅನುಕರಿಸಲು ಹೈಡ್ರೋಜನ್ ಪೆರಾಕ್ಸಡ್ ಬಳಸುತ್ತಿದ್ದಾರೆ,'' ಎಂದು ಕೀಟಲೆ ಮಾಡುತ್ತಾರೆ. ಈ ವಿಚಾರವಾಗಿ ಈಜಿಪುರದ ಅಭಿಮಾನಿಗಳಿಗೆ ಸಂದೇಶ ನೀಡಿದ ಶಿಮ್ರಾನ್, "ಹೆಟಿ ಹೇರ್ ನಿಮ್ಮ ಸ್ಟೈಲ್ ಹೆಚ್ಚಿಸುತ್ತದೆ,'' ಎನ್ನುತ್ತಾರೆ. ಇದಕ್ಕೂ ಮುನ್ನ ಬೆಂಗಳೂರಿನ ವಾತಾವರಣ ಬೇರೆಲ್ಲೂ ಸಿಗುವುದಿಲ್ಲ ಎಂದು ಗಾರ್ಡನ್ ಸಿಟಿ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಗಯಾನ ಆರ್‌ಸಿಬಿ ಅಭಿಮಾನಿಗಳ ಸಂಘ
ಗಯಾನದಲ್ಲಿ ಆರ್‌ಸಿಬಿ ಅಭಿಮಾನಿಗಳು ಇದ್ದಾರೆಯೇ ಎಂದು ನ್ಯಾಗ್ಸ್ ಕೇಳುವ ತರ್ಲೆ ಪ್ರಶ್ನೆಗೆ ಗಂಭೀರವಾಗಿಯೇ ನನಗೆ ಗೊತ್ತಿಲ್ಲ ಎಂದು ಉತ್ತರಿಸುವ ಶಿಮ್ರಾನ್, ಬೇಕಿದ್ದರೆ ಗಯಾನಾ ಆರ್‌ಸಿಬಿ ಅಭಿಮಾನಿಗಳ ಸಂಘಕ್ಕೆ ಅಧ್ಯಕ್ಷನಾಗುತ್ತೇನೆ ಎನ್ನುತ್ತಾರೆ. ಕೂಡಲೇ ಅಧ್ಯಕ್ಷ ನಾನು ನಿಮಗೆ ಕಾರ್ಯದರ್ಶಿ ಸ್ಥಾನ ಕೊಡುತ್ತೇನೆ ಎಂದು ನ್ಯಾಗ್ಸ್ ಕೀಟಲೆ ಮುಂದುವರಿಸುತ್ತಾರೆ. ಕಾರ್ಯಕ್ರಮ ಮುಗಿದರೇ ಸಾಕು ಎಂಬಂತೆ ನೋಡುತ್ತಿದ್ದ ಶಿಮ್ರಾನ್ ಕೊನೆಗೂ ಅಲ್ಲಿಂದ ಕಾಲ್ಕೀಳುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications