
ಶುಕ್ರವಾರ, ಫೆಬ್ರವರಿ 17ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2023ರ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.
16ನೇ ಋತುವಿನ ಮೊದಲ ಪಂದ್ಯವು ಮಾರ್ಚ್ 31ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಪಿಎಲ್ 2023ರಲ್ಲಿ 12 ವಿವಿಧ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ. ಈ ವರ್ಷದ ಲೀಗ್‌ನಲ್ಲಿ ಪ್ರತಿ 10 ತಂಡಗಳು 7 ಪಂದ್ಯಗಳನ್ನು ಎದುರಾಳಿ ನೆಲದಲ್ಲಿ ಮತ್ತು 7 ಪಂದ್ಯಗಳನ್ನು ತವರಿನ ಅಂಗಳದಲ್ಲಿ ಆಡಲಿವೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ
1) ಆರ್‌ಸಿಬಿ vs ಮುಂಬೈ ಇಂಡಿಯನ್ಸ್- ಎಪ್ರಿಲ್ 2, ಬೆಂಗಳೂರು
2) ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ - ಎಪ್ರಿಲ್ 6, ಕೋಲ್ಕತ್ತಾ
3) ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ - ಎಪ್ರಿಲ್ 10, ಬೆಂಗಳೂರು
4) ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ಎಪ್ರಿಲ್ 15, ಬೆಂಗಳೂರು
5) ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ - ಎಪ್ರಿಲ್ 17, ಬೆಂಗಳೂರು
6) ಆರ್‌ಸಿಬಿ vs ಪಂಜಾಬ್ ಕಿಂಗ್ಸ್ - ಎಪ್ರಿಲ್ 20, ಮೊಹಾಲಿ
7) ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ - ಎಪ್ರಿಲ್ 23, ಬೆಂಗಳೂರು
8) ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ - ಎಪ್ರಿಲ್ 26, ಬೆಂಗಳೂರು
9) ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ - ಮೇ 1, ಲಕ್ನೋ
10) ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ಮೇ 6, ನವದೆಹಲಿ
11) ಆರ್‌ಸಿಬಿ vs ಮುಂಬೈ ಇಂಡಿಯನ್ಸ್- ಮೇ 9, ಮುಂಬೈ
12) ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ - ಮೇ 14, ಜೈಪುರ
13) ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ - ಮೇ 18
14) ಆರ್‌ಸಿಬಿ vs ಗುಜರಾತ್ ಟೈಟನ್ಸ್ - ಮೇ 21, ಬೆಂಗಳೂರು