ಐಪಿಎಲ್: ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್‌ಗೆ ಕಿಂಗ್ಸ್ ಚಾಲೆಂಜ್

ಬೆಂಗಳೂರು, ಏಪ್ರಿಲ್ 24: ಪ್ಲೇ ಆಫ್ಸ್ ಹಾದಿಯಲ್ಲಿ ಜೀವಂತವಾಗಿ ಉಳಿಯಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 2019ರ ತನ್ನ 11ನೇ ಲೀಗ್ ಪಂದ್ಯದಲ್ಲಿ ಅಪಾಯಕಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಎದುರಿಸಲಿದೆ.
ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವಿನೊಂದಿಗೆ 6 ಅಂಕಗಳನ್ನು ಗಳಿಸಿರುವ ಚಾಲೆಂಜರ್ಸ್ ಅಂಕಪಟ್ಟಿಯಲ್ಲಿ ಪಾತಾಳದಲ್ಲಿದೆ. ಆದರೂ, ತನ್ನ ಪಾಲಿನ ಇನ್ನುಳಿದ ನಾಲ್ಕು ಪಂದ್ಯಗಳನ್ನು ಗೆದ್ದು ನಾಕ್‌ಔಟ್ ಹಂತಕ್ಕೇರುವ ಅಲ್ಪ ಅವವಕಾಶವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಕೂಡ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲಾಗದೆ ಫ್ಲೇಆಫ್ಸ್ ಹಂತಕ್ಕೇರಲು ಚಡಪಡಿಸುತ್ತಿದೆ. ಆಡಿದ 10 ಪಂದ್ಯಗಳಲ್ಲಿ ತಲಾ 5 ಜಯ ಮತ್ತು ಸೋಲುಂಡಿರುವ ಕಿಂಗ್ಸ್ ತಂಡ ಕಳೆದ ಬಾರಿ ಚಾಲೆಂಜರ್ಸ್ ವಿರುದ್ಧ ಸೋಲನುಭವಿಸಿತ್ತು. ಇದೀಗ ಆರ್‌ಸಿಬಿ ಅವರದ್ದೇ ಅಂಗಣದಲ್ಲಿ ಸೋಲುಣಿಸಿ ಜಯದ ಹಾದಿ ಕಂಡುಕೊಳ್ಳಲು ಎದುರು ನೋಡುತ್ತಿದೆ.
ಆರ್‌ಸಿಬಿ ಸಂಭಾವ್ಯ 11
ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ, ಎಬಿ ಡಿ'ವಿಲಿಯರ್ಸ್, ಆಕಾಶ್‌ದೀಪ್ ನಾಥ್, ಮಾರ್ಕಸ್ ಸ್ಟೋಯ್ನಿಸ್, ಮೊಯೀನ್ ಅಲಿ, ಪವನ್ ನೇಗಿ, ಉಮೇಶ್ ಯಾದವ್, ಡೇಲ್ ಸ್ಟೇನ್, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.
ಕಿಂಗ್ಸ್ ಇಲೆವೆನ್ ಸಂಭಾವ್ಯ 11
ಕ್ರಿಸ್ ಗೇಲ್, ಲೋಕೇಶ್ ರಾಹುಲ್ (ವಿಕೆ), ಮಯಾಂಕ್ ಅಗರ್ವಾಲ್, ಮನ್ದೀಪ್ ಸಿಂಗ್, ಡೇವಿಡ್ ಮಿಲ್ಲರ್, ಹಾರ್ಡಸ್ ವಿಲ್ಜೋಯೆನ್ / ನಿಕೋಲಸ್ ಪೂರಾನ್, ಸ್ಯಾಮ್ ಕರನ್, ಹರ್ಪ್ರೀತ್ ಬ್ರಾರ್ / ಅರ್ಷ್‌ದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್, ಸಿ. ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications