Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾಮಾಜಿಕ ತಾಣದಲ್ಲಿ ಜೋರಾಯಿತು RCB ಹವಾ: ಸಿಎಸ್‌ಕೆಗಿಂತ ಹೆಚ್ಚಿನ ಹಿಂಬಾಲಕರು

18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಆರಂಭವನ್ನು ಮಾಡಿದೆ. ತಾನಾಡಿದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಆರ್‌ಸಿಬಿ ಅಬ್ಬರಿಸಿದೆ. ಆರ್‌ಸಿಬಿ ತಂಡ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿದರೆ, 17 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ಸೋಲಿಸಿ ಇತಿಹಾಸ ಬರೆದಿದೆ. ಆರ್‌ಸಿಬಿ ಮೈದಾನದಲ್ಲಿ ಈ ಸಾಧನೆಯನ್ನು ಮಾಡ್ತಾ ಇದ್ದರೆ, ಅಭಿಮಾನಿಗಳ ಸಂಖ್ಯೆ ಸಾಮಾಜಿಕ ತಾಣದಲ್ಲಿ ಹೆಚ್ಚಾಗುತ್ತಿದೆ. ಈಗ ಮತ್ತೊಂದು ದಾಖಲೆಯಲ್ಲೂ ಆರ್‌ಸಿಬಿ, ಸಿಎಸ್‌ಕೆ ಹಿಂದಿಕ್ಕಿದೆ.

ಆರ್‌ಸಿಬಿ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಈ ತಂಡದ ಮುಕಟಕ್ಕೆ ಮತ್ತೊಂದು ಗರಿ ಬಂದಿದೆ. ಬ್ಯಾಕ್‌ ಟು ಬ್ಯಾಕ್‌ ಎರಡು ಗೆಲುವು ದಾಖಲಿಸಿರುವ ಆರ್‌ಸಿಬಿ ಇನ್‌ಸ್ಟಾಗ್ರಾಮ್‌ನಲ್ಲಿ ಅಬ್ಬರಿಸುತ್ತಿದೆ. ಈಗ ಆರ್‌ಸಿಬಿ ಗೆಲುವಿನ ಖಾತೆಯ ಜೋಶ್‌ನ್ನು ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ.

RCB Overtakes CSK as Most Followed IPL Team on Instagram After Historic Win

ಸಾಮಾಜಿಕ ತಾಣದಲ್ಲಿ RCB ಹವಾ

ಚೆನ್ನೈ ವಿರುದ್ಧದ ಪಂದ್ಯ ಗೆದ್ದು ನಾಲ್ಕೇ ದಿನದಲ್ಲಿ ಆರ್‌ಸಿಬಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕೆದೆ. ಈ ಸುದ್ದಿ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಸಮಾಧಾನ ತರಿಸಿದೆ. 17 ವರ್ಷಗಳ ಕಾಯುವಿಕೆ ಶುಕ್ರವಾರ ಕೊನೆಗೊಂಡಿದ್ದು, ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಹಿಂಬಾಲಕರ ಸಂಖ್ಯೆ 17.8 ಆಗಿದೆ. ಈ ಮೂಲಕ ಆರ್‌ಸಿಬಿ ಸಿಎಸ್‌ಕೆಯನ್ನು ಹಿಂದಿಕ್ಕಿದೆ. ಈ ವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಸ್‌ಕೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ತಂಡ ಎಂಬ ಹಿರಿಮೆ ಹೊಂದಿತ್ತು. ಆದರೆ ಸೋಮವಾರದಿಂದ ಈ ಕೀರ್ತಿ ಸಹ ಬೆಂಗಳೂರು ತಂಡದ ಪಾಲಾಗಿದೆ.

ಇನ್ನು ಇನ್‌ಸ್ಟಾಗ್ರಾಮನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್‌ ಪಾಲಾಗಿದೆ. ಮುಂಬೈ 5 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಇದರ ಹಿಂಬಾಲಕರ ಸಂಖ್ಯೆ 16.2 ಮಿಲಿಯನ್ ಆಗಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಹಿಂಬಾಲಕರು ಸಂಖ್ಯೆ ಸಹ 7 ಮಿಲಿಯನ್ ಇದೆ.

RCB Overtakes CSK as Most Followed IPL Team on Instagram After Historic Win

ಯಾವ ತಂಡಕ್ಕೆ ಎಷ್ಟು ಹಿಂಬಾಲಕರು

ಆರ್‌ಸಿಬಿ- 17.8 ಮಿ.
ಸಿಎಸ್‌ಕೆ- 17.7 ಮಿ.
ಮುಂಬೈ- 16.2 ಮಿ.
ಕೆಕೆಆರ್‌- 7 ಮಿ.
ಎಆರ್‌ಎಚ್‌- 5.1 ಮಿ.
ರಾಜಸ್ಥಾನ- 4.7 ಮಿ.
ಗುಜರಾತ- 4.5 ಮಿ.
ಡೆಲ್ಲಿ- 4.3 ಮಿ.
ಪಂಜಾಬ್- 3.7 ಮಿ.
ಎಲ್‌ಎಸ್‌ಜಿ- 3.5 ಮಿ.

ಈ ವೇಳೆ ಬಳಕೆದಾರ ತರಹೆವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾನೆ. ಆರ್‌ಸಿಬಿ ಅಭಿಮಾನಿ, "ಸಿಎಸ್‌ಕೆ ಎರಡು, ಮುಂಬೈ ಎರಡು ಪಂದ್ಯ ಸೋತಿದೆ. ಆರ್‌ಸಿಬಿ ಎರಡು ಪಂದ್ಯ ಗೆದ್ದಿದೆ. ಆರ್‌ಸಿಬಿ ಸಿಎಸ್‌ಕೆ ತಂಡವನ್ನು ಓವರ್‌ ಟೆಕ್ ಮಾಡಿದೆ. ಈ ಬಾರಿ ಕಪ್‌ ನಮ್ದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಇದೇ ವೇಳೆ ಬರೆದುಕೊಂಡಿದ್ದು, ನಮಗೆ 5 ಟ್ರೋಫಿ ಅವಶ್ಯಕತೆ ಇಲ್ಲ, ನಮ್ಮ ತಂಡ ದೊಡ್ಡದು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಬಗ್ಗೆ ಬರೆದಿದ್ದು, "ಒಂದು ವೇಳೆ ಆರ್‌ಸಿಬಿ ಈ ಬಾರಿ ಟ್ರೋಫಿ ಗೆದ್ದಲ್ಲಿ ಈ ಸಂಖ್ಯೆ 20 ಮಿಲಿಯನ್ ಆಗಲಿದೆ ಎಂದು ತಿಳಿಸಿದ್ದಾರೆ.

Story first published: Monday, March 31, 2025, 12:37 [IST]
Other articles published on Mar 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+