Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ತಂಡವನ್ನು ಮುನ್ನಡೆಸಿದ ನಾಯಕರು ಯಾರು ಯಾರು? ಅವರ ಸಾಧನೆ ಏನು?

ಐಪಿಎಲ್‌ 2025ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB) ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈ ವೇಳೆ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸನ್ನು ಸಹ ಕಾಣುತ್ತಿದೆ. ಆರ್‌ಸಿಬಿ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಫಾಫ್‌ ಅವರನ್ನೇ ಹರಾಜಿನ ಅಂಗಳಕ್ಕೆ ಕೈ ಬಿಟ್ಟಿತ್ತು. ಅಲ್ಲದೆ ಅವರನ್ನು ಕೊಳ್ಳವ ಪ್ರಯತ್ನವನ್ನು ಸಹ ಮಾಡಲಿಲ್ಲ. ಆರ್‌ಸಿಬಿ ಬಟ್ಟು 17 ಆವೃತ್ತಿಗಳಲ್ಲಿ ಕಣಕ್ಕಿಳಿದು ಅಭಿಮಾನಿಗಳನ್ನು ರಂಜಿಸುವಲ್ಲಿ ಸಫಲವಾಗಿದೆ. ಆದರೆ ತನ್ನ ಶೋಕೆಸ್‌ನಲ್ಲಿ ಐಪಿಎಲ್‌ ಟ್ರೋಫಿ ಇಡುವಲ್ಲಿ ವಿಫಲವಾಗಿದೆ.

ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ನ ಶ್ರೀಮಂತ ತಂಡಗಳಲ್ಲಿ ಆರ್‌ಸಿಬಿ ಸಹ ಒಂದು. ಇದಕ್ಕೆ ಅಪಾರ ಅಭಿಮಾನಿಗಳ ಬಳಗವೂ ಇದೆ. ಈ ತಂಡದ ಪರ ಹಲವು ಸ್ಟಾರ್ ಆಟಗಾರರು ಆಟವಾಡಿ ಸೈ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಬೆಂಗಳೂರು ತಂಡ ಐಪಿಎಲ್‌ನಲ್ಲಿ ಐದು ಬಾರಿ ಪ್ಲೇ ಆಫ್‌, ಮೂರು ಬಾರಿ ರನ್ನರ್‌ ಅಪ್‌, ಒಂದು ಬಾರಿ ಮೂರನೇ ಸ್ಥಾನವನ್ನು ಪಡೆದಿದೆ. ಆದರೆ ಈ ತಂಡಕ್ಕೆ ಚಾಂಪಿಯನ್‌ ಪಟ್ಟವನ್ನು ತೊಡಿಸುವ ನಾಯಕ ಇನ್ನು ಸಿಕ್ಕಿಲ್ಲ ಎಂಬುದೇ ಬೇಸರದ ಸಂಗತಿ.

RCB s New Era in IPL 2025 A Look Back at 17 Seasons and Leadership History

17 ಆವೃತ್ತಿಗಳು ಈಗ ಇತಿಹಾಸದ ಪುಟವನ್ನು ಸೇರಿವೆ. ಹಾಗಿದ್ದರೆ ಆರ್‌ಸಿಬಿ ತಂಡವನ್ನು ಎಷ್ಟು ಜನ ನಾಯಕರು ಮುನ್ನಡೆಸಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

ದ್ರಾವಿಡ್‌ ಮೊದಲ ನಾಯಕ

ಆರ್‌ಸಿಬಿ 17 ಆವೃತ್ತಿಗಳಲ್ಲಿ ಕಣಕ್ಕೆ ಇಳಿದಿದ್ದು, 7 ನಾಯಕರನ್ನು ಕಂಡಿದೆ. ಆರ್‌ಸಿಬಿ ತಂಡದ ಮೊದಲ ನಾಯಕ ಎಂಬ ಖ್ಯಾತಿ ಮಾಜಿ ಆಟಗಾರ ರಾಹುಲ್ ದ್ರಾವಿಡ್‌ ಅವರಿಗೆ ಸಲ್ಲುತ್ತದೆ. ಇವರು 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು ಈ ವೇಳೆ ತಂಡ 4 ರಲ್ಲಿ ಜಯ ಸಾಧಿಸಿದೆ. ಇನ್ನು ಇದೇ ಅವಧಿಯಲ್ಲಿ ಕೇವಿನ್‌ ಪೀಟರ್ಸನ್‌ ಸಹ ಆರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಅನಿಲ್‌ ಕುಂಬ್ಳೆ ಸಾರಥ್ಯ

ಆರ್‌ಸಿಬಿಯ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದು ಅನಿಲ್‌ ಕುಂಬ್ಳೆ. ಇವರ ಅವಧಿಯಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು. ಇನ್ನು ಇವರು 35 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದು 54.3ರ ಸರಾಸರಿಯಲ್ಲಿ 19 ಗೆಲುವು ದಾಖಲಿಸಿದ್ದಾರೆ. ಕುಂಬ್ಳೆ ಬಳಿಕ ಆರ್‌ಸಿಬಿ ತಂಡವನ್ನು ಡೇನಿಯಲ್ ವೆಟ್ಟೋರಿ ಮುನ್ನಡೆಸಿದ್ದರು. ಇವರ ಅಧಿಕಾರ ಅವಧಿಯಲ್ಲಿ ಆರ್‌ಸಿಬಿ ಒಂದು ಬಾರಿ ಫೈನಲ್‌ ಪ್ರವೇಶಿಸಿ ಸಾಧನೆ ಮಾಡಿದ್ದು, ಇವರ ಗೆಲುವಿನ ಸರಾಸರಿ 53.6 ಆಗಿದೆ.

RCB s New Era in IPL 2025 A Look Back at 17 Seasons and Leadership History

10 ವರ್ಷ ಆರ್‌ಸಿಬಿ ಮುನ್ನಡೆಸಿರುವ ವಿರಾಟ್‌

ಡೇನಿಯಲ್ ವೆಟ್ಟೋರಿ ಬಳಿಕ ವಿರಾಟ್ ಕೊಹ್ಲಿ ತಂಡದ ಚುಕ್ಕಾಣಿ ಹಿಡಿದರು. 2011 ರಿಂದ 2021ರ ವರೆಗೆ ವಿರಾಟ್‌ ಕೊಹ್ಲಿ 10 ವರ್ಷ ಆರ್‌ಸಿಬಿ ತಂಡದ ನಾಯಕರಾಗಿ ಕೆಲಸ ಮಾಡಿದ್ದಾರೆ. ವಿರಾಟ್ ನಾಯಕತ್ವದಲ್ಲಿ 140 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ 64 ಗೆಲುವು ಕಂಡಿದೆ. ಇವರ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಫೈನಲ್‌ ಪ್ರವೇಶಿಸಿತ್ತು.

ಆಸ್ಟ್ರೇಲಿಯಾದ ಶೇನ್‌ ವ್ಯಾಟ್ಸನ್‌ ಸಹ ಆರ್‌ಸಿಬಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಫಾಫ್ ಡುಪ್ಲೇಸಿಸ್ ಮುನ್ನಡೆಸಿದ್ದರು. ಇವರ ಮುಂದಾಳತ್ವದಲ್ಲಿ ಆರ್‌ಸಿಬಿ ಆಡಿದ 16 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿದೆ.

Story first published: Wednesday, December 4, 2024, 9:00 [IST]
Other articles published on Dec 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+