Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ-ಅನುಷ್ಕಾ ಜೊತೆಗೆ ಫೋಟೋ ಕ್ಲಿಕ್ಕಿಸಲು RCB ಫೋಟೋಗ್ರಾಫರ್ ಪರದಾಟ

Rcbs Photographer On His Struggle To Get Clicked With Kohli And Anushka Sharma

ಎಲಿಮಿನೇಟರ್‌ನಲ್ಲಿ ಎಸ್‌ಆರ್‌ಎಚ್ ವಿರುದ್ಧ ಸೋತ ಆರ್‌ಸಿಬಿ ಶುಕ್ರವಾರ ಐಪಿಎಲ್ 2020 ರಿಂದ ಹೊರಬಿದ್ದಿದೆ. ಆದಾಗ್ಯೂ, ಮೂರು ಸೀಸನ್‌ಗಳ ನಂತರ ಅವರು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿರುವುದು ತಂಡಕ್ಕೆ ಒಂದು ಸಾಧನೆಯಾಗಿದೆ.

ಪ್ಲೇ ಆಫ್ ಪಂದ್ಯ ಆಡುವುದಕ್ಕೂ ಮೊದಲು ನವೆಂಬರ್ 6 ರಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರ ಜನ್ಮದಿನವಾಗಿತ್ತು. ಹೀಗಾಗಿ ನವೆಂಬರ್ 5ರ ರಾತ್ರಿಯೇ ಕೊಹ್ಲಿ ಬರ್ತ್‌ಡೇ ಆಚರಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್‌ ಬರ್ತ್‌ಡೇ ಫೋಟೋಗಳು ಸಾಕಷ್ಟು ಹರಿದಾಡಿದವು.

ಕೇಕ್ ಕಟ್ಟಿಂಗ್ ವೇಳೆ ಅನುಷ್ಕಾ ಶರ್ಮಾ ಮತ್ತು ಕೊಹ್ಲಿಯ ಸುಂದರವಾದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಪ್ರತಿಕ್ರಿಯೆ ಪಡೆದಿದ್ದವು. ತಂಡದ ಎಲ್ಲಾ ಆಟಗಾರರ ಸಂಭ್ರಮವು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಹಿಟ್ ಆಯಿತು.

ಆದರೆ ಈ ಎಲ್ಲ ಫೋಟೋ ಸಂಭ್ರಮದ ನಡುವೆ ಒಂದು ಕುತೂಹಲಕಾರಿ ವಿಷಯ ಇಲ್ಲಿದೆ ನೋಡಿ. ವಿರುಷ್ಕಾ ಜೋಡಿಯ ಮುದ್ದಾದ ಫೋಟೋ ತೆಗೆದಿದ್ದ ಛಾಯಾಗ್ರಾಹಕ ಹೇಗಾದರೂ ಮಾಡಿ ತಾನೂ ಕೊಹ್ಲಿ-ಅನುಷ್ಕಾರೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟು ಹೇಗೋ ಫೋಟೋ ತೆಗೆಸಿಕೊಂಡಿದ್ದಾರೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಛಾಯಾಗ್ರಾಹಕ ಮೋಹಿತ್ ಕಶ್ಯಪ್ ಅವರು ತಮ್ಮ ಫೋಟೋಗಳನ್ನು ಎಂದಿಗೂ ಹಂಚಿಕೊಳ್ಳದಿರುವ ಬಗ್ಗೆ ತಮಾಷೆಯ ಶೀರ್ಷಿಕೆಯನ್ನು ನೀಡಿದರು. ಛಾಯಾಗ್ರಾಹಕ ಎಲ್ಲರಿಗೂ ಉತ್ತಮ ಕ್ಲಿಕ್ ನೀಡಿದರೆ, ಅವನು ಸ್ವತಃ ಕ್ಲಿಕ್ ಮಾಡಬೇಕಾದರೆ ಇಂತಹ ಅನಾಹುತವಾಗುತ್ತದೆ ಎಂದು ಫೋಟೋ ಹಂಚಿಕೊಂಡಿದ್ದಾರೆ.

ಮೋಹಿತ್‌ರ ಚಿತ್ರ ಹೆಚ್ಚು ಫ್ಲಾಶ್ ಆದ ಕಾರಣ ವಿರುಷ್ಕಾ ಜೊತೆಗಿನ ಫೋಟೋ ಸರಿ ಬಂದಿಲ್ಲ. ಹೀಗಾಗಿ ಯಾವ ಜನರು ಈ ಹಿಂದೆ ಏಕೆ ವಿರುಷ್ಕಾ ಜೊತೆಗೆ ನೀನು ಇದುವರೆಗೂ ಫೋಟೋ ತೆಗಿಸಿಕೊಂಡಿಲ್ವಾ ಎಂದು ಕೇಳಿದರೆ, ಅವರಿಗೆ ಸಾಮಾನ್ಯವಾಗಿ ನನ್ನ ಉತ್ತರ ಎಂದರೆ ನನಗೆ ಯಾರೂ ಉತ್ತಮ ಫೋಟೋಗಳನ್ನು ತೆಗೆದುಕೊಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

Story first published: Saturday, November 7, 2020, 14:02 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+