For Quick Alerts
ALLOW NOTIFICATIONS  
For Daily Alerts
 

RCB ಬತ್ತಳಿಕೆಯಲ್ಲಿದೆ 5 ಭಯಾನಕ ಬ್ರಹ್ಮಾಸ್ತ್ರ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 19ನೇ ಆವೃತ್ತಿ ಮಾರ್ಚ್ 28 ರಿಂದ ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ. ಈ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ)ಟ್ರೋಫಿ ಡಿಫೆಂಡ್‌ ಮಾಡಿಕೊಳ್ಳುವ ಕನಸನ್ನು ಹೊಂದಿದೆ. ಆರ್‌ಸಿಬಿ ಟ್ರೋಫಿಯನ್ನು ಮತ್ತೆ ಎತ್ತುವಲ್ಲಿ ಈ ಆಲ್‌ರೌಂಡರ್‌ಗಳ ಪ್ರದರ್ಶನ ಬಹಳ ಮುಖ್ಯ. ಆರ್‌ಸಿಬಿ ತಂಡದಲ್ಲಿ ಐದು ಆಲ್‌ರೌಂಡರ್‌ಗಳು ಅಬ್ಬರಿಸಿದರೆ ಎರಡನೇ ಬಾರಿ ಟ್ರೋಫಿ ಎತ್ತುವ ಕನಸು ನನಸಾಗುತ್ತದೆ.

ಟಿ20 ಕ್ರಿಕೆಟ್‌ ಅಂದರೆ ಹೊಡಿ ಬಡಿ ಆಟ. ಈ ಆಟದಲ್ಲಿ ಬ್ಯಾಟರ್ ಹಾಗೂ ಬೌಲರ್‌ಗಳಿಗಿಂತಲೂ ಹೆಚ್ಚಿನ ಪ್ರಧಾನ್ಯತೆ ಆಲ್‌ರೌಂಡರ್‌ಗಳಿಗೆ ನೀಡಲಾಗುತ್ತದೆ. ಆರ್‌ಸಿಬಿ ತಂಡದಲ್ಲಿ ಸಾಲು ಸಾಲು ಆಲ್‌ರೌಂಡರ್‌ಗಳು ಇದ್ದಾರೆ. ಈ ಸ್ಟಾರ್ ಆಟಗಾರರು ಅಬ್ಬರಿಸಿದರೆ ಟ್ರೋಫಿ ಗೆಲ್ಲುವ ಆಸೆ ಫಲಿಸುತ್ತದೆ.

RCB

ಕೃನಾಲ್ ಪಾಂಡ್ಯ

ಆರ್‌ಸಿಬಿ ತಂಡದ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ. ಇವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ಅಪಾರವಾಗಿದೆ. ಇವರು ಆರ್‌ಸಿಬಿ ತಂಡದ ಸಂಯೋಜನೆಗೆ ನೆರವಾಗಬಲ್ಲ ಆಟಗಾರ. ಇವರು ಮಿಡ್ಲ್‌ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇವರು ಬ್ಯಾಟಿಂಗ್‌ನಲ್ಲಿ ರನ್‌ ಕಲೆ ಹಾಕಿ ಆರ್‌ಸಿಬಿ ಆಧಾರವಾಗಬಲ್ಲ ಪ್ರತಿಭೆ. ಇವರು ಬಿಗ್ ಹಿಟ್‌ ಮೂಲಕ ರನ್‌ ವೇಗಕ್ಕೆ ಚುರುಕು ಸಹ ಮುಟ್ಟಿಸಬಲ್ಲರು.

ಮಾತಿನ ಚಕಮಕಿ, ಫಿಕ್ಸಿಂಗ್ ಕಪ್ಪುಚುಕ್ಕೆ: ಐಪಿಎಲ್‌ ಇತಿಹಾಸದ ಪುಟ ಸೇರಿದ ವಿವಾದಾಗಳುಮಾತಿನ ಚಕಮಕಿ, ಫಿಕ್ಸಿಂಗ್ ಕಪ್ಪುಚುಕ್ಕೆ: ಐಪಿಎಲ್‌ ಇತಿಹಾಸದ ಪುಟ ಸೇರಿದ ವಿವಾದಾಗಳು

ಟೀಮ್ ಡೇವಿಡ್

ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಟೀಮ್ ಡೇವಿಡ್‌ ಅವರಿಗೂ ಸ್ಥಾನ. ಇವರು ಡೆತ್‌ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಮಧ್ಯಮ ವೇಗದ ಬೌಲಿಂಗ್‌ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು. ಇವರು ಸಿಕ್ಸರ್‌ಗಳನ್ನು ಸುಲಭವಾಗಿ ಬಾರಿಸಬಲ್ಲ ಕ್ಷಮತೆ ಹೊಂದಿದ್ದು, ಆರ್‌ಸಿಬಿಗೆ ಇವರು ದೊಡ್ಡ ಆಸ್ತಿ.

ರೊಮಾರಿಯೊ ಶೆಫರ್ಡ್

ವೆಸ್ಟ್‌ ಇಂಡೀಸ್ ತಂಡದ ಸ್ಟಾರ್ ಆಟಗಾರ ರೊಮಾರಿಯೊ ಶೆಫರ್ಡ್ ತಮ್ಮ ವೇಗದ ದಾಳಿ ಹಾಗೂ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿ. ಇವರು ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಹೊಂದಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಇವರು ಮಹತ್ವದ ಪಂದ್ಯಗಳಲ್ಲಿ ಆರ್‌ಸಿಬಿಗೆ ದೊಡ್ಡ ಬಲ ನೀಡುವ ಆಟಗಾರ.

IPL ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿIPL ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ

ಜಾಕಬ್ ಬೆಥೆಲ್

ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಜಾಕಬ್ ಬೆಥೆಲ್‌, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ಅಲ್ಲದೆ ಇವರು ಲೆಫ್ಟ್ ಆರ್ಮ್‌ ಸ್ಪಿನ್ ಬೌಲಿಂಗ್ ಸಹ ನಡೆಸಬಲ್ಲರು. ಇವರು ಪರಿಸ್ಥಿತಿಗೆ ಅನುಸಾರವಾಗಿ ಆಡುವುದರಿಂದ ಇವರನ್ನು ಆರ್‌ಸಿಬಿ ಚೆನ್ನಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ.

ವೆಂಕಟೇಶ್ ಅಯ್ಯರ್

ಈ ಬಾರಿ ಹರಾಜಿನಲ್ಲಿ ಆರ್‌ಸಿಬಿ ವೆಂಕಟೇಶ್ ಅಯ್ಯರ್‌ ಅವರನ್ನು ಖರೀದಿಸಿತು. ಇವರ ಆಗಮನ ಆರ್‌ಸಿಬಿ ಟಾಪ್‌ ಆರ್ಡರ್ ಬ್ಯಾಟಿಂಗ್ ಲೈನ್‌ ಅಪ್‌ಗೆ ಆನೆ ಬಲ ನೀಡಲಿದೆ. ಇವರು ಆಕ್ರಮಣಕಾರಿ ಆಟದಿಂದ ತಂಡಕ್ಕೆ ಒಳ್ಳೆಯ ಆರಂಭವನ್ನು ನೀಡಬಲ್ಲರು. ಇವರು ಬೌಲಿಂಗ್‌ನಲ್ಲಿ ಜೊತೆಯಾಟಗಳನ್ನು ಬೇರ್ಪಡಿಸುವಲ್ಲಿ ನೆರವಾಗಬಲ್ಲರು.

Story first published: Tuesday, March 24, 2026, 8:20 [IST]
Other articles published on Mar 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+