Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಫಿಲ್‌ ಸಾಲ್ಟ್‌ಗೆ ಬಿಡ್‌ ಮಾಡಿದ್ದು ಏಕೆ?: ಇಲ್ಲಿದೆ ಡಿಕೆ ಉತ್ತರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದೆ. ಈ ವೇಳೆ ಅಭಿಮಾನಿಗಳ ಮನದಲ್ಲಿ ಕೆಲವು ಪ್ರಶ್ನೆಗಳು ಇದ್ದಿರುವುದು ಸಹಜ. ಅಭಿಮಾನಿಗಳ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಆರ್ ಸಿಬಿ ಮೆಂಟರ್‌ ದಿನೇಕ್‌ ಕಾರ್ತಿಕ್ ಉತ್ತರ ನೀಡಿದ್ದಾರೆ. ಐಪಿಎಲ್ ಹರಾಜು ಬಳಿಕ ಹಲವು ವಿಷಯಗಳ ಬಗ್ಗೆ ಡಿಕೆ ತುಟಿ ಬಿಚ್ಚಿದ್ದಾರೆ. ಹಾಗಿದ್ದರೆ ಏನೆಲ್ಲಾ ಮಾತನಾಡಿದ್ದಾರೆ ಇಲ್ಲಿದೆ ಮಾಹಿತಿ.

ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಫಿಲ್‌ ಸಾಲ್ಟ್‌ ಅವರ ಮೇಲೆ ಹಣವನ್ನು ಹೂಡಿತು. ಈ ವೇಳೆ ವಿಕೆಟ್‌ ಕೀಪರ್‌ ಬ್ಯಾಟರ್‌ ಫಿಲ್‌ ಸಾಲ್ಟ್‌ಗೆ ಬರೋಬ್ಬರಿ 11.5 ಕೋಟಿ ರೂಪಾಯಿ ಹಣ ನೀಡಲಾಯಿತು. ಈ ಪ್ಲೇಯರ್‌ನನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಯಾವುದೇ ಪ್ರಶ್ನೆಗಳು ಇಲ್ಲ. ಆದರೆ ಹಲವು ಸ್ಟಾರ್ ಆಟಗಾರರನ್ನು ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ದಿನೇಶ್ ಕಾರ್ತಿಕ್ ಉತ್ತರ ನೀಡಿದ್ದಾರೆ.

RCB Secures Phil Salt for 11 5 Crore in IPL Mega Auction DK Explains Team s Strategy

ದಿನೇಶ್‌ ಕಾರ್ತಿಕ್ ಹೇಳಿದ್ದೇನು?

ಆರ್‌ಸಿಬಿ ತನ್ನ ಸಾಮಾಜಿಕ ತಾಣದಲ್ಲಿ ವಿಡಿಯೋ ಒಂದನ್ನು ರಿಲೀಸ್‌ ಮಾಡಿದೆ. ಈ ವಿಡಿಯೋದಲ್ಲಿ ದಿನೇಶ್‌ ಕಾರ್ತಿಕ್ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಕಾರ್ತಿಕ್‌ ಬ್ಯಾಟಿಂಗ್‌ ಆರ್ಡರ್‌ ನಿರ್ಧರಿಸುವಲ್ಲಿ ಮಘ್ನರಾಗಿರುವುದನ್ನು ಈ ವೇಳೆ ಕಾಣಬಹುದಾಗಿದೆ. ಇದೇ ವೇಳೆ ಕಾರ್ತಿಕ್‌ ತಮ್ಮ ಯೋಜನೆಯ ಬಗ್ಗೆ ತುಟಿ ಬಿಚ್ಚಿದ್ದಾರೆ.

ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ಈ ವೇಳೆ ಸ್ಟ್ರೈಕ್‌ ರೇಟ್‌ ನೋಡಿಕೊಂಡು ದೊಡ್ಡ ಇನಿಂಗ್ಸ್‌ ಕಟ್ಟುವ ಸ್ಟಾರ್ ಆಟಗಾರರ ಅವಶ್ಯಕತೆ ಇತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್‌ಗಳನ್ನು ಜೋಸ್‌ ಬಟ್ಲರ್ ಹಾಗೂ ಫಿಲ್‌ ಸಾಲ್ಟ್‌ ಕಟ್ಟಿದ್ದಾರೆ.

RCB Secures Phil Salt for 11 5 Crore in IPL Mega Auction DK Explains Team s Strategy

ಭಾರತದ ಪರ ಇಶಾನ್‌ ಕಿಶನ್‌ ಬಿಗ್ ಸ್ಕೋರ್‌ಗಳನ್ನು ಸಲೀಸಾಗಿ ಕಲೆ ಹಾಕಬಲ್ಲ ಪ್ಲೇಯರ್‌. ಆದರೆ ನಮ್ಮ ತಂಡ ಆರಂಭಿಕರಾಗಿ ವಿದೇಶಿ ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿತ್ತು ಎಂದು ಸ್ಪಷ್ಟ ಪಡಿಸಿದ್ದಾರೆ.

ದಿನೇಶ್ ಕಾರ್ತಿಕ್‌ ಫಿಲ್ ಸಾಲ್ಟ್‌ ಅವರ ಆಟದ ಧಾಟಿಯ ಬಗ್ಗೆ ಬೆಳಕು ಚೆಲ್ಲಿದರು. ಪಂದ್ಯದಲ್ಲಿ ಸಾಲ್ಟ್‌ ಪ್ರತಿ ಓವರ್‌ಗೆ 6 ರಿಂದ 8 ರನ್‌ಗಳನ್ನು ಶೇಕಡಾ 28 ರಷ್ಟು ಬಾರಿ ಬಾರಿಸಿದ್ದಾರೆ. ಇನ್ನು ಪ್ರತಿ ಓವರ್‌ಗೆ 12 ರಿಂದ 15 ರನ್‌ಗಳನ್ನು ಶೇಕಡಾ 30ಕ್ಕಿಂತ ಹೆಚ್ಚು ಬಾರಿ ಸಿಡಿಸಿದ್ದಾರೆ. ಅವರು ತಾವು ಬ್ಯಾಟ್ ಮಾಡುವ ಪ್ರತಿ ನಾಲ್ಕನೇ ಓವರ್‌ನಲ್ಲಿ 12 ರಿಂದ 16 ರನ್‌ ಗಳಿಸುತ್ತಾರೆ ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಫಿಲ್ ಸಾಲ್ಟ್ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫಿಲ್ ಸಾಲ್ಟ್‌ ಆಡಿದ 21 ಪಂದ್ಯಗಳಲ್ಲಿ 653 ರನ್‌ ಸಿಡಿಸಿದ್ದಾರೆ. ಇದರಲ್ಲಿ ಆರು ಅರ್ಧಶತಕಗಳು ಸೇರಿವೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಇವರು ತಾವಾಡಿದ 38 ಪಂದ್ಯಗಳ 35 ಇನಿಂಗ್ಸ್‌ಗಳಲ್ಲಿ 165ರ ಸ್ಟ್ರೈಕ್‌ ರೇಟ್‌ನಲ್ಲಿ 1106 ರನ್‌ ಸಿಡಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 4 ಅರ್ಧಶತಕಗಳು ಸೇರಿವೆ.

Story first published: Thursday, December 12, 2024, 15:56 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+