Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ನಾಯಕನಾಗಬೇಕು ಎಂದ ಸುನಿಲ್ ಗವಾಸ್ಕರ್‌

Sunil gavaskar

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ ಮೆಗಾ ಹರಾಜು ಮುಕ್ತಾಯವಾಗಿದೆ. 10 ಫ್ರಾಂಚೈಸಿಗಳು ತಮ್ಮ ಸ್ಟ್ರಾಟರ್ಜಿಗೆ ಅನುಗುಣವಾಗಿ ತಂಡವನ್ನ ಸಿದ್ಧಗೊಳಿಸಿವೆ. ಇದ್ರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರನ್ನ ಕ್ಯಾಪ್ಟನ್ ಮಾಡಬೇಕು ಎಂಬ ಗೊಂದಲಕ್ಕೆ ಒಳಗಾಗಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್‌ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮಾಜಿ ಆಟಗಾರರನ್ನ ಮತ್ತೆ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಆದ್ರೆ ಅಂತಿಮವಾಗಿ ಡುಪ್ಲೆಸಿಸ್ ಬೆಲೆಯನ್ನ ಏಳು ಕೋಟಿ ರೂಪಾಯಿಗೆ ಆರ್‌ಸಿಬಿ ಬಿಡ್ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬಿಡ್‌ ನಿಂದ ಹಿಂದೆ ಸರಿಯಿತು.

ಮೇಲ್ನೋಟಕ್ಕೆ ಆರ್‌ಸಿಬಿ ಫಾಫ್ ಡುಪ್ಲೆಸಿಸ್‌ಗೆ ನಾಯಕತ್ವ ನೀಡಬಹುದೆಂದು ಹೇಳಲಾಗುತ್ತಿದೆ. ಆದ್ರೆ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್‌ ಪ್ರಕಾರ ಆರ್‌ಸಿಬಿ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ನಾಯಕತ್ವ ನೀಡಬೇಕು ಎಂದು ಸ್ಪೋರ್ಟ್ಸ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮುನ್ನಡೆಸದಿದ್ದರೂ ಸಹ , ಬಿಗ್ ಬ್ಯಾಶ್ ಲೀಗ್ ಟಿ20 ಲೀಗ್‌ನಲ್ಲಿ ತಂಡವೊಂದನ್ನ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಭವಿಷ್ಯದ ದೃಷ್ಟಿಯಿಂದ ಫಾಫ್ ಡುಪ್ಲೆಸಿಸ್‌ಗೆ ನಾಯಕತ್ವ ನೀಡಲು ಸಾಧ್ಯವಾಗುವುದಿಲ್ಲ. ಆದ್ರೆ ಮ್ಯಾಕ್ಸ್‌ವೆಲ್‌ಗೆ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶವಿದ್ದು ಆರ್‌ಸಿಬಿಯನ್ನ ಮುನ್ನಡೆಸಿದ್ದೇ ಆದಲ್ಲಿ ಹೊಸ ಹುರುಪು ಸಿಗಲಿದೆ ಎಂಬುದು ಗವಾಸ್ಕರ್ ಅಭಿಪ್ರಾಯವಾಗಿದೆ.

ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರರು
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್‌ವೆಲ್
ಮೊಹಮ್ಮದ್ ಸಿರಾಜ್

India vs West Indies, 1st T20I: ಮೊದಲನೇ T20 ಪಂದ್ಯದಲ್ಲಿ ಭಾರತಕ್ಕೆ ಗಾಯದ ಸಮಸ್ಯೆ | Oneindia Kannada

ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿ
ಫಿನ್ ಅಲೆನ್: 80 ಲಕ್ಷ ರೂಪಾಯಿ
ಶೆರ್ಫಾನೆ ರುದರ್‌ಫೋರ್ಡ್‌ : 1 ಕೋಟಿ ರೂಪಾಯಿ
ಜೇಸನ್‌ ಬೆಹ್ರನ್‌ಡ್ರಾಫ್‌ : 75 ಲಕ್ಷ ರುಪಾಯಿ
ಸುಯಾಶ್‌ ಪ್ರಭುದೇಸಾಯಿ : 30 ಲಕ್ಷ ರೂಪಾಯಿ
ಚಾಮಾ ಮಿಲಿಂದ್: 25 ಲಕ್ಷ ರೂಪಾಯಿ
ಅನೀಶ್ವರ್ ಗೌತಮ್: 20 ಲಕ್ಷ ರೂಪಾಯಿ
ಜೇಸನ್ ಬೆಹ್ರೆನಡೊರ್ಫ್: 75 ಲಕ್ಷ ರೂಪಾಯಿ
ಕರ್ಣ್‌ ಶರ್ಮಾ: 50 ಲಕ್ಷ ರೂಪಾಯಿ
ಡೇವಿಡ್ ವಿಲೆ: 2 ಕೋಟಿ ರೂಪಾಯಿ

Story first published: Tuesday, February 15, 2022, 9:36 [IST]
Other articles published on Feb 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+