RCB Squad WPL 2023: ಹರಾಜಿನ ನಂತರ ಬಲಿಷ್ಠ ಆರ್‌ಸಿಬಿ ಮಹಿಳಾ ತಂಡ ಹೀಗಿದೆ

ಸೋಮವಾರ, ಫೆಬ್ರವರಿ 13ರಂದು ಮುಂಬೈನಲ್ಲಿ ನಡೆದ 2023ರ ಮಹಿಳಾ ಪ್ರೀಮಿಯರ್ ಲೀಗ್ (WPL) 2023 ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೆ ಅತ್ಯಧಿಕ 3.40 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತಿ ಹೆಚ್ಚು ಖರ್ಚು ಮಾಡಿದ ತಂಡಗಳಲ್ಲಿ ಒಂದಾಗಿದೆ. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗೆ ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರನ್ನು ಸಹ ದೊಡ್ಡ ಮೊತ್ತಕ್ಕೆ ಆಯ್ಕೆ ಮಾಡಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2023ರ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಸ್ಮೃತಿ ಮಂಧಾನ ಅವರನ್ನು ಮಹಿಳಾ ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಮೊತ್ತ ನೀಡಿ ಖರೀದಿಸಿದ ಮೊದಲ ತಂಡವಾಯಿತು.

ಸ್ಮೃತಿ ಮಂಧಾನಗೆ 3.40 ಕೋಟಿ ರೂ. ನೀಡಿದ ಆರ್‌ಸಿಬಿ
ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಡೆದ ಬಿಡ್ ಪೈಪೋಟಿಯಲ್ಲಿ ಅಂತಿಮವಾಗಿ, 3.40 ಕೋಟಿ ರೂ. ನೀಡಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿತು.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳಿದ್ದು, ಪ್ರತಿ ತಂಡವು ಒಟ್ಟು 12 ಕೋಟಿ ರೂ.ಗಳ ಪರ್ಸ್ ಬೆಲೆ ಹೊಂದಿದ್ದು, ಆರು ವಿದೇಶಿ ಆಟಗಾರರು ಸೇರಿದಂತೆ ಕನಿಷ್ಠ 15 ಆಟಗಾರರು ಮತ್ತು ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬಹುದು.

ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಮತ್ತು ಬೆಲೆ
ಸ್ಮೃತಿ ಮಂಧಾನ (3.4 ಕೋಟಿ ರೂ.), ಸೋಫಿ ಡಿವೈನ್ (50 ಲಕ್ಷ ರೂ.), ಎಲ್ಲಿಸ್ ಪೆರಿ (1.7 ಕೋಟಿ ರೂ.), ರೇಣುಕಾ ಸಿಂಗ್ (1.5 ಕೋಟಿ ರೂ.), ರಿಚಾ ಘೋಷ್ (1.9 ಕೋಟಿ ರೂ.), ಎರಿನ್ ಬರ್ನ್ಸ್ (30 ಲಕ್ಷ ರೂ.), ದಿಶಾ ಕಸತ್ (10 ಲಕ್ಷ ರೂ.), ಇಂದ್ರಾಣಿ ರಾಯ್ (10 ಲಕ್ಷ ರೂ.), ಶ್ರೇಯಾಂಕ ಪಾಟೀಲ್ (10 ಲಕ್ಷ ರೂ.), ಕನಿಕಾ ಅಹುಜಾ (35 ಲಕ್ಷ ರೂ.), ಆಶಾ ಶೋಬನಾ (10 ಲಕ್ಷ ರೂ.), ಹೀಥರ್ ನೈಟ್ (40 ಲಕ್ಷ ರೂ.), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ ರೂ.), ಪ್ರೀತಿ ಬೋಸ್ (30 ಲಕ್ಷ ರೂ.), ಪೂನಂ ಖೇಮ್ನಾರ್ (10 ಲಕ್ಷ ರೂ.), ಕೋಮಲ್ ಜಂಜಾದ್ (25 ಲಕ್ಷ ರೂ.).

ಆರ್‌ಸಿಬಿ ತಂಡದ ಬಲಾಬಲ
ಬ್ಯಾಟರ್ಸ್: ಸ್ಮೃತಿ ಮಂಧಾನ, ದಿಶಾ ಕಸತ್
ಬೌಲರ್‌ಗಳು: ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್
ವಿಕೆಟ್ ಕೀಪರ್‌ಗಳು: ರಿಚಾ ಘೋಷ್, ಇಂದ್ರಾಣಿ ರಾಯ್
ಆಲ್‌ರೌಂಡರ್‌ಗಳು: ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications