ಪತ್ನಿ ಡೇನಿಯಲ್ ಮತ್ತು ಮಗನನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಬಿಡಿ

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್ ತಲುಪಲು ಇನ್ನೊಂದು ಹೆಜ್ಜೆ ಬಾಕಿ ಉಳಿದಿದೆ. ಹೇಗಾದರೂ ಮಾಡಿ ಈ ಬಾರಿ ಕಪ್ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕೊಹ್ಲಿ ಪಡೆಯು ಉತ್ತಮ ಫಾರ್ಮ್‌ನಲ್ಲಿದೆ.
ಈಗಾಗಲೇ ಆಡಿರುವ ಹತ್ತು ಪಂದ್ಯಗಳಲ್ಲಿ ಏಳು ಪಂದ್ಯ ಜಯಿಸಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರು ಆರ್‌ಸಿಬಿಗೆ ಪ್ಲೇ ಆಫ್ ಸ್ಥಾನ ಖಚಿತ.
ಆರ್‌ಸಿಬಿ ಪರ ಪ್ರತಿ ಬಾರಿ ಕೈ ಕೊಡುತ್ತಿದ್ದ ಬೌಲರ್ಸ್ ಈ ಬಾರಿ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಯುವ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ನಾಯಕ ಕೊಹ್ಲಿ ಜೊತೆಗೆ ಎಂದಿನಂತೆ ಎಬಿಡಿ ತಮ್ಮ ವಿಂಟೇಜ್ ಆಟ ಪ್ರದರ್ಶಿಸುತ್ತಿದ್ದಾರೆ.
ಪ್ರತಿ ಬಾರಿ ಐಪಿಎಲ್ ಸೀಸನ್‌ಗಳಲ್ಲಿ ಬಹುತೇಕ ಆಟಗಾರರು ಕುಟುಂಬ ಸಮೇತ ಆಗಮಿಸುತ್ತಾರೆ. ಈ ಬಾರಿ ಕೋವಿಡ್-19 ಕಾರಣ ಅನೇಕ ಆಟಗಾರರು ತಮ್ಮ ಪತ್ನಿ ಮಕ್ಕಳನ್ನು ಯುಎಇಗೆ ಕರೆತಂದಿಲ್ಲ. ಆರ್‌ಸಿಬಿ ಸೂಪರ್‌ಸ್ಟಾರ್ ಎಬಿ ಡಿ ವಿಲಿಯರ್ಸ್ ಕೂಡ ಇದರಲ್ಲಿ ಒಬ್ಬರು.
ತಮ್ಮ ಮನೆ, ಪತ್ನಿ ಹಾಗೂ ಮಗನನ್ನು ಬಿಟ್ಟು ಯುಎಇಗೆ ಬಂದು ಹಲವು ದಿನಗಳು ಆಗಿರುವುದರಿಂದ ಸಹಜವಾಗಿ ಎಬಿ ಡಿ ವಿಲಿಯರ್ಸ್ ತಮ್ಮ ಪತ್ನಿ ಮತ್ತು ಮಗನನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸ್ಟೇಟಸ್‌ನಲ್ಲಿ ಪತ್ನಿಯೊಂದಿಗಿನ ಫೋಟೋವನ್ನು ಶೇರ್ ಮಾಡಿರುವ ಎಬಿಡಿ ಪತ್ನಿ ಡೇನಿಯಲ್‌ರನ್ನ ಮಿಸ್ ಮಾಡಿಕೊಳ್ಳುತ್ತಿರುವುದಾಗಿ, ಆದಷ್ಟು ಬೇಗನೆ ಮನೆಗೆ ಹಿಂತಿರುಗುವುದಾಗಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications