Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ: ನೇಥನ್ ಕೌಲ್ಟರ್ ನೇಲ್ ಬದಲಿಗೆ ಕೋರೆ ಆಂಡರ್ಸನ್‌ ಸೇರ್ಪಡೆ

RCB took Corey Anderson in the place of Injuired Nathan Coulter-Nile

ಬೆಂಗಳೂರು, ಮಾರ್ಚ್‌ 24: ಆರ್‌ಸಿಬಿ ತಂಡ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್‌ ನೇಥನ್ ಕೌಲ್ಟರ್ ನೇಲ್ ಗಾಯಕ್ಕೆ ತುತ್ತಾಗಿ ಇನ್ನೂ ಗುಣ ಹೊಂದದ ಕಾರಣ ಅವರ ಬದಲಿಯಾಗಿ ನ್ಯೂಜಿಲೆಂಡ್ ಆಲ್‌ರೌಂಡರ್ ಕೋರೆ ಆಂಡರ್ಸನ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ನೇಥನ್ ಕೌಲ್ಟರ್ ನೇಲ್ ಗಾಯದಿಂದ ಇನ್ನೂ ಗುಣ ಮುಖರಾಗಿಲ್ಲದ ಕಾರಣ ಆರ್‌ಸಿಬಿಯು ಐಪಿಎಲ್ ನಿಯಮಾವಳಿಗಳಿಗೆ ಅನುಸಾರವಾಗಿ (ಆರ್‌ಎಪಿಪಿ) ಹರಾಜಿಗೆ ನೊಂದಾಯಿಸಲ್ಪಟ್ಟ ಆದರೆ ಮಾರಾಟವಾಗದ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಹಾಗಾಗಿ ಆರ್‌ಸಿಬಿಯು ನ್ಯೂಜಿಲೆಂಡ್‌ನ ಆಲ್‌ರೌಂಡರ್‌ ಕೋರೆ ಆಂಡರ್ಸನ್‌ ಅವರನ್ನು ಅವರ ಮೂಲ ದರ 2 ಕೊಟಿಗೆ ಕೊಂಡುಕೊಂಡಿದೆ.

ಈ ಮುಂಚೆ ಮುಂಬೈ ಮತ್ತು ಡೆಲ್ಲಿ ತಂಡಕ್ಕೆ ಆಡಿರುವ ಕೋರಿ ಆಂಡರ್ಸನ್‌ ತಮ್ಮ ಬಿರು ಬೀಸಿನ ಬ್ಯಾಟಿಂಗ್ ಮತ್ತು ಸಮಯೋಚಿತ ಬೌಲಿಂಗ್‌ನಿಂದ ಪ್ರಖ್ಯಾತರು. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 36 ಬಾಲಿಗೆ ಸೆಂಚುರಿ ಬಾರಿಸಿರುವ ದಾಖಲೆ ಕೋರೆ ಆಂಡರ್ಸನ್‌ ಬೆನ್ನಿಗಿದೆ. ಆ ನಂತರ ಇವರ ದಾಖಲೆಯನ್ನು ಡಿವಿಲಿಯರ್ಸ್‌ ಮುರಿದರು. ಅವರು ಕೇವಲ 31 ಎಸೆತದಲ್ಲೇ ಸೆಂಚುರಿ ಭಾರಿಸಿದರು.

ಕೋರೆ ಆಂಡರ್ಸನ್‌ ಅವರನ್ನು ತಂಡಕ್ಕೆ ಸ್ವಾಗತಿಸಿರುವ ಆರ್‌ಸಿಬಿ ಕೋಚ್ ಮತ್ತು ಮೆಂಟರ್ ಡೇನಿಯಲ್ ವೆಟೊರಿ 'ಕೋರೆ ಆಂಡರ್ಸನ್ ಒಬ್ಬ ಅದ್ಬುತ ಆಲ್‌ರೌಡರ್, ಆತ ಅದ್ಬುತ ಸಾಮರ್ಥ್ಯದಿಂದ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರ' ಎಂದಿದ್ದಾರೆ.

ಆರ್‌ಸಿಬಿ ತಂಡವೂ ಸಹ ಕೋರೆ ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಜೊತೆಗೆ ಕೌಲ್ಟರ್ ನೇಲ್ ಅವರು ಬೇಗ ಗುಣಮುಖವಾಗಲಿ ಹಾಗೂ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲಿ ಎಂದು ಹಾರೈಸಿದೆ.

Story first published: Sunday, March 25, 2018, 11:42 [IST]
Other articles published on Mar 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+