RCB Unbox Event 2023: ಎಂ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪೂರ್ಣ ತಂಡದ ಅಭ್ಯಾಸ ಪಂದ್ಯದ ದಿನಾಂಕ, ಸಮಯ

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಗುರಿಯನ್ನು ಹೊಂದಿದ್ದು, ಈ ಬಾರಿ ಅದೃಷ್ಟದ ಬದಲಾವಣೆಯ ನಿರೀಕ್ಷೆಯಲ್ಲಿದೆ.
2019ರ ನಂತರ ಮೊದಲ ಬಾರಿಗೆ ಐಪಿಎಲ್ ಪಂದ್ಯಾವಳಿಯನ್ನು ತವರು ಹಾಗೂ ಎದುರಾಳಿ ನೆಲದಲ್ಲಿ ಆಡುತ್ತಿದ್ದು, ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ತವರಿನ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.
ಇದೇ ವೇಳೆ ಆರ್‌ಸಿಬಿ ತಂಡದ ಅಭಿಮಾನಿಗಳು ಪಂದ್ಯಾವಳಿ ಆರಂಭಕ್ಕೆ ಒಂದು ವಾರ ಮುಂಚಿತವಾಗಿ ಅಂದರೆ, ಮಾರ್ಚ್ 26ರಂದು ತಮ್ಮ ನೆಚ್ಚಿನ ತಂಡದ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿಯು RCB Unbox ಎಂಬ ಸಮಾರಂಭವನ್ನು ಘೋಷಿಸಿದ್ದು, ಇದರಲ್ಲಿ ಹಾಲ್ ಆಫ್ ಫೇಮ್ ಇಂಡಕ್ಷನ್ ಮತ್ತು ಆರ್‌ಸಿಬಿ ಪೂರ್ಣ ತಂಡದ ಅಭ್ಯಾಸ ಪಂದ್ಯವನ್ನು ಒಳಗೊಂಡಿದೆ. ಇದಕ್ಕೂ ಮುನ್ನ ಇದನ್ನು ಮಾರ್ಚ್ 25ರಿಂದ ನಿಗದಿಪಡಿಸಲಾಗಿತ್ತು. ಇದೀಗ ಭಾನುವಾರ, ಮಾರ್ಚ್ 26ರಂದು ನಿಗದಿಪಡಿಸಲಾಗಿದೆ.
ಏನಿದು ಆರ್‌ಸಿಬಿ ಅನ್‌ಬಾಕ್ಸ್ ಸಮಾರಂಭ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮಾರ್ಚ್ 26ರಂದು ಸಂಜೆ 4 ಗಂಟೆಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ಟನ್ ರೈಸರ್ ಕಾರ್ಯಕ್ರಮವನ್ನು ಆಯೋಜಿಸಲಿದೆ. ಇದರಲ್ಲಿ ಸೋನು ನಿಗಮ್ ಅವರಿಂದ ಸಂಗೀತ ಸಂಜೆ ಇರಲಿದೆ. ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಿಂದ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಅಭಿಮಾನಿಗಳು ಅಭ್ಯಾಸ ಪಂದ್ಯ ಮತ್ತು ಸಮಾರಂಭದಲ್ಲಿ ಹಾಜರಾಗಬಹುದು.
ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಭಾಗಿ
ಆರ್‌ಸಿಬಿ ತಂಡದ ಇಬ್ಬರು ಮಾಜಿ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ 2023ರ ಐಪಿಎಲ್‌ಗೂ ಮುನ್ನ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಪ್ರವೇಶ ಪಡೆಯುಲಿದ್ದಾರೆ.
ಆರ್‌ಸಿಬಿ ತಂಡದ ಲೆಜೆಂಡ್‌ಗಳಾಗಿರುವ ಈ ಇಬ್ಬರಿಗೆ ಫ್ರಾಂಚೈಸಿ ಕಡೆಯಿಂದ ನೀಡುವ ಅತ್ಯುನ್ನತ ಗೌರವವಾಗಿದೆ. ಭಾನುವಾರ, ಮಾರ್ಚ್ 26ರಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಮತ್ತು ಮಿ. 360 ಎಬಿ ಡಿವಿಲಿಯರ್ಸ್ ಭಾಗವಹಿಸಲಿದ್ದಾರೆ.

ಪೂರ್ಣ ಸ್ಕ್ವಾಡ್ ಅಭ್ಯಾಸ ಪಂದ್ಯ
ಭಾನುವಾರ, ಮಾರ್ಚ್ 26ರ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್ ದಿನದಂದು ಸಂಪೂರ್ಣ ತಂಡದ ಅಭ್ಯಾಸದ ಪಂದ್ಯವನ್ನು ಆಡಲಿದೆ. ಇದು ಹೊಸ ಸೀಸನ್‌ಗೆ ತಯಾರಾಗುತ್ತಿರುವ ಪಂದ್ಯಾವಳಿಯ ಮೊದಲ ತಂಡವಾಗಿದೆ.
ಸೋನು ನಿಗಮ್ ಸೇರಿದಂತೆ ಹಲವರಿಂದ ಲೈವ್ ಶೋ
ಇದರ ಜೊತೆಗೆ ಆರ್‌ಸಿಬಿ ಅಭಿಮಾನಿಗಳಿಗೆ ವಿವಿಧ ಮನರಂಜನೆಯ ಕಾರ್ಯಕ್ರಮಗಳು ಇರಲಿವೆ. ಜೇಸನ್ ದೇರುಲೋ, ಸೋನು ನಿಗಮ್, ತುಳಸಿ ಕುಮಾರ್ ಮತ್ತು ಅದಿತಿ ಸಿಂಗ್ ಶರ್ಮಾ ಅವರಿಂದ ಲೈವ್ ಶೋ ಕಾರ್ಯಕ್ರಮವಿರಲಿದೆ.
IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications