RCB Unbox Event: ಆರ್‌ಸಿಬಿ ತಂಡದ ಅದ್ಧೂರಿ ಸಮಾರಂಭ, ಅಭ್ಯಾಸ ಪಂದ್ಯದ ಲೈವ್ ವೀಕ್ಷಣೆ ಎಲ್ಲಿ? ಹೇಗೆ?

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಅಹಮದಾಬಾದ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಭಾನುವಾರ, ಮಾರ್ಚ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಆರ್‌ಸಿಬಿ ಅನ್‌ಬಾಕ್ಸ್' ಎಂಬ ಅದ್ಧೂರಿ ಸಮಾರಂಭ ಆಯೋಜಿಸುತ್ತಿದೆ.
ಆರ್‌ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳ ಖುಷಿಯನ್ನು ಹಿಮ್ಮಡಿಗೊಳಿಸಿದೆ.
ಮೂವರು ಸ್ಟಾರ್ ಆಟಗಾರರು ತಂಡದ ತವರಿನ ಮೈದಾನದಲ್ಲಿ ಮತ್ತೊಮ್ಮೆ ಒಂದಾಗುವುದರೊಂದಿಗೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಮುನ್ನ ಅಭಿಮಾನಿಗಳಿಂದ ಭಾರೀ ಬೆಂಬಲ ಪಡೆಯಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲೈಟಿಂಗ್ಸ್ ಮತ್ತು ಆಸನ ವ್ಯವಸ್ಥೆಗಳಿಗೆ ನವೀಕರಣ ಮಾಡಲಾಗಿದೆ.
ಆರ್‌ಸಿಬಿ ಫ್ರಾಂಚೈಸಿಯು ಅನ್‌ಬಾಕ್ಸ್ ಈವೆಂಟ್ ಯಶಸ್ವಿಗೊಳಿಸಲು ಅಂತಾರಾಷ್ಟ್ರೀಯ ಗಾಯಕ ಮತ್ತು ಪಾಪ್ ತಾರೆ ಜೇಸನ್ ಡೆರುಲೋ, ಸೋನು ನಿಗಮ್, ತುಳಸಿ ಕುಮಾರ್ ಮತ್ತು ಅದಿತಿ ಸಿಂಗ್ ಶರ್ಮಾ ಅವರಿಂದ ಕಲಾ ಪ್ರದರ್ಶನ ಏರ್ಪಡಿಸಿದೆ.

ಇದರ ಜೊತೆಗೆ ಆರ್‌ಸಿಬಿ ಪೂರ್ಣ ತಂಡದ ಅಭ್ಯಾಸ ಪಂದ್ಯವನ್ನು ಆಡಲಾಗುತ್ತದೆ. ಇದನ್ನು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ವೀಕ್ಷಿಸಲು ಅವಕಾಶವನ್ನು ನೀಡಿದ್ದು, ಈಗಾಗಲೇ ಅಭಿಮಾನಿಗಳು ಟಿಕೆಟ್ ಪಡೆದು ಮೈದಾನ ಪ್ರವೇಶಿಸಲು ಸಜ್ಜಾಗಿದ್ದಾರೆ.
ಮಾಜಿ ಸ್ಟಾರ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಇಬ್ಬರೂ ಅಧಿಕೃತವಾಗಿ ಆರ್‌ಸಿಬಿ 'ಹಾಲ್ ಆಫ್ ಫೇಮ್'ಗೆ ಸೇರ್ಪಡೆಯಾಗಲಿದ್ದಾರೆ ಎಂಬುದು ವಿಶೇಷ. ಇಬ್ಬರು ಲೆಜೆಂಡ್ ಆಟಗಾರರನ್ನು ಗೌರವಿಸಲು ಆರ್‌ಸಿಬಿ ಫ್ರಾಂಚೈಸಿ ತಮ್ಮ ಜೆರ್ಸಿ ಸಂಖ್ಯೆಗಳಾದ '17' ಮತ್ತು '333' ಅನ್ನು ನಿವೃತ್ತಿ ಘೋಷಿಸಲಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಆರ್‌ಸಿಬಿ ಮಹಿಳಾ ತಂಡದ ಕೆಲವು ಸದಸ್ಯರು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎನ್ನಲಾಗಿದೆ. ಇದೇ ವೇಳೆ ಮುಂಬರುವ ಆವೃತ್ತಿಗೆ ಅಧಿಕೃತವಾಗಿ ತಮ್ಮ ಕಿಟ್ ಅನ್ನು ಅನಾವರಣಗೊಳಿಸಿ, ಹಂಚಲಾಗುತ್ತದೆ.
ಆರ್‌ಸಿಬಿ ತಂಡ ಭಾನುವಾರ, ಏಪ್ರಿಲ್ 2ರಂದು ಐದು ಬಾರಿ ಐಪಿಎಲ್ ವಿಜೇತ ತಂಡವಾದ ಮುಂಬೈ ಇಂಡಿಯನ್ಸ್ ವಿರುದ್ಧ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಬಾರಿ ಆರ್‌ಸಿಬಿ ತಂಡ ತಮ್ಮ ಏಳು ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಇದು ಆರ್‌ಸಿಬಿ ಅಭಿಮಾನಗಳಿಗೆ ಇನ್ನುಷ್ಟು ಖುಷಿ ನೀಡಿದ್ದು, ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಕಾತರರಾಗಿದ್ದಾರೆ.
ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ವೇಳಾಪಟ್ಟಿ ಮತ್ತು ವಿವರಗಳು
* ದಿನಾಂಕ ಮತ್ತು ಸಮಯ: ಆರ್‌ಸಿಬಿ ಅನ್‌ಬಾಕ್ಸ್ ಭಾನುವಾರ, ಮಾರ್ಚ್ 26ರ ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 10ರವರೆಗೆ ನಡೆಯಲಿದೆ.
* ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್ ಗೌರವ
* ಜೇಸನ್ ಡೆರುಲೋ, ಸೋನು ನಿಗಮ್ ಮತ್ತು ಇತರರಿಂದ ಲೈವ್ ಸಂಗೀತ ಕಾರ್ಯಗಳು
* ಆರ್‌ಸಿಬಿ ತಂಡದ ಹೊಸ ಜೆರ್ಸಿ ಅನಾವರಣ
* ಪೂರ್ಣ ತಂಡದ ಅಭ್ಯಾಸ ಪಂದ್ಯ
* ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಯಾವುದೇ ಟಿವಿಯಲ್ಲಿ ನೇರಪ್ರಸಾರ ಇರುವುದಿಲ್ಲ.
* ಲೈವ್ ಸ್ಟ್ರೀಮಿಂಗ್- ಆರ್‌ಸಿಬಿಯ YouTube ಚಾನಲ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications