Vinay Kumar: ಗೇಲ್, ಎಬಿಡಿ ಪಟ್ಟಿಗೆ ಸೇರಿದ ದಾವಣಗೆರೆ ಎಕ್ಸ್‌ಪ್ರೆಸ್; ವಿನಯ್ ಕುಮಾರ್‌ಗೆ ಆರ್‌ಸಿಬಿ ಗೌರವ
ಮಂಗಳವಾರ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2024ರ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ Royal Challengers Bangalore ಹೆಸರನ್ನು ಅಧಿಕೃತವಾಗಿ Royal Challengers Bengaluru ಎಂದು ಮರುನಾಮಕರಣ ಮಾಡಲಾಯಿತು.
ತನ್ನ ಹೆಸರನ್ನು ರಾಯಲ್ ಚಾಲೆಂಜರ್ಸ್ 'ಬೆಂಗಳೂರು' ಎಂದು ಬದಲಾಯಿಸುವ ಕೆಲವೇ ಕ್ಷಣಗಳ ಮೊದಲು, ಆರ್‌ಸಿಬಿ ಫ್ರಾಂಚೈಸಿಯ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ತನ್ನ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಂಡಿತು.

ಕರ್ನಾಟಕದ ಲೆಜೆಂಡ್ ಕ್ರಿಕೆಟಿಗ ಪ್ರತಿಷ್ಠಿತ ಪಟ್ಟಿಗೆ ಸೇರ್ಪಡೆಗೊಂಡ ಮೂರನೇ ಆರ್‌ಸಿಬಿ ಆಟಗಾರ ಎನಿಸಿದರು. ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಆರ್‌ಸಿಬಿ ಫ್ರಾಂಚೈಸಿ ಪರ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.
"ಅಸಾಧಾರಣ ಕ್ರಿಕೆಟಿಗ, ನಮ್ಮ ಮೂರನೇ ಅತಿ ಹೆಚ್ಚು ವಿಕೆಟ್ ಟೇಕರ್. ನಾವು ನಮ್ಮ ವಿನಯ್ ಕುಮಾರ್ ಅವರ ಹೆಸರನ್ನು ಆರ್‌ಸಿಬಿ ಹಾಲ್ ಆಫ್ ಫೇಮ್ ಗಣ್ಯರ ಪಟ್ಟಿಯಲ್ಲಿ ಸೇರಿಸುತ್ತಿರುವುದರಿಂದ ನಾವು ಅವರನ್ನು ಸಂಭ್ರಮಿಸುತ್ತಿದ್ದೇವೆ," ಎಂದು ಆರ್‌ಸಿಬಿ ಫ್ರಾಂಚೈಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿನಯ್ ಕುಮಾರ್ ಅವರು ಆರ್‌ಸಿಬಿ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಗೊಂಡ ಮೂರನೇ ಆಟಗಾರನಾದರು. ಇದಕ್ಕೂ ಮೊದಲು ಅಂದರೆ, ಕಳೆದ ವರ್ಷದ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಈ ಗಣ್ಯರ ಪಟ್ಟಿಯಲ್ಲಿರುವ ಇತರ ಇಬ್ಬರು ಆಟಗಾರರಾಗಿ ಸೇರಿಸಿದ್ದರು.

ಕರ್ನಾಟಕದ ಮಾಜಿ ವೇಗಿ ವಿನಯ್ ಕುಮಾರ್ ಆರ್‌ಸಿಬಿ ತಂಡದ ಪರ ಐದು ಋತುಗಳಲ್ಲಿ ಆಡಿದ್ದಾರೆ. ಅವರು 2008ರಿಂದ 2010ರವರೆಗೆ ಮತ್ತು ನಂತರ 2012ರಿಂದ 2013ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.
ಆರ್‌ಸಿಬಿ ತಂಡಕ್ಕಾಗಿ ಆಡಿದ 70 ಟಿ20 ಪಂದ್ಯಗಳಲ್ಲಿ 80 ವಿಕೆಟ್‌ಗಳನ್ನು ಕಬಳಿಸಿದರು. 2013 ಅವರ ಬ್ರೇಕ್‌ಔಟ್ ಋತುವಾಗಿದ್ದು, ಆ ವರ್ಷದಲ್ಲಿ ಅವರು 23 ವಿಕೆಟ್‌ಗಳನ್ನು ಪಡೆದಿದ್ದರು.
ಐಪಿಎಲ್ 2024ಕ್ಕೂ ಮುನ್ನ ಆರ್‌ಸಿಬಿ ಹೆಸರು, ಜೆರ್ಸಿ ಬಣ್ಣ ಬದಲಾವಣೆ
2024ರ ಐಪಿಎಲ್ ಪಂದ್ಯಾವಳಿಯ ಹೊಸ ಅವೃತ್ತಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಸಹ ತನ್ನ ಹೆಸರನ್ನು ಬದಲಾಯಿಸಿದೆ. ರಾಯಲ್ ಚಾಲೆಂಜರ್ಸ್ Bangaloreನಿಂದ, ಫ್ರಾಂಚೈಸಿ ಇದೀಗ ರಾಯಲ್ ಚಾಲೆಂಜರ್ಸ್ Bengaluru ಎಂದು ಕರೆಯಲ್ಪಡುತ್ತದೆ.
ಪಂದ್ಯಾವಳಿಯ ಹೊಸ ಋತುವಿನ ಮೂರು ದಿನಗಳ ಮೊದಲು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಪ್ರಮುಖ ಬೆಳವಣಿಗೆಗಳು ಕಂಡುಬಂದವು.
ಹೊಸ ಐಪಿಎಲ್ ಋತುವಿಗೂ ಮುನ್ನ ಆರ್‌ಸಿಬಿ ತನ್ನ ಜೆರ್ಸಿ ಬಣ್ಣವನ್ನು ಸಹ ಬದಲಾಯಿಸಿತು. ಕಪ್ಪು, ಕೆಂಪು ಮತ್ತು ಬಂಗಾರದ ಬಣ್ಣದ ಬದಲಾಗಿ, ಇದೀಗ ನೀಲಿ ಮತ್ತು ಕೆಂಪು ಬಣ್ಣಕ್ಕೆ ಬದಲಾಯಿಸಿದೆ.
ಆರ್‌ಸಿಬಿ ಫ್ರಾಂಚೈಸಿಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಅನ್‌ಬಾಕ್ಸ್ ಈವೆಂಟ್ ಸಂಭ್ರಮಾಚರಣೆಯು ಮುಗಿಲು ಮುಟ್ಟಿತ್ತು.
ಇತ್ತೀಚೆಗಷ್ಟೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಆರ್‌ಸಿಬಿ ಮಹಿಳಾ ತಂಡ ಈ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಸ್ಮೃತಿ ಮಂಧಾನ ಪಡೆ ತಮ್ಮ ಚೊಚ್ಚಲ ಪ್ರಶಸ್ತಿ ಗೆಲುವಿಗಾಗಿ ಪುರುಷರ ತಂಡದಿಂದ ಗೌರವ ರಕ್ಷೆ ಸ್ವೀಕರಿಸಿದರು.
ಸಾವಿರಾರು ಪ್ರೇಕ್ಷಕರು ಸೇರಿದ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಬ್ಯಾಂಡ್‌ಗಳು ಮತ್ತು ಹೆಸರಾಂತ ಸಂಗೀತಗಾರರನ್ನು ಒಳಗೊಂಡ ಈವೆಂಟ್‌ನಲ್ಲಿ ಹಲವಾರು ಪ್ರದರ್ಶನಗಳು ಸಹ ಇದ್ದವು. ಲೆಜೆಂಡರಿ ಡಿಜೆ ಮತ್ತು ಸಂಗೀತ ಸಂಯೋಜಕ ಅಲನ್ ವಾಕರ್ ಅವರು ಕೂಡ ಕಾರ್ಯಕ್ರಮ ಪ್ರದರ್ಶಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications