Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs CSK: ಎಲ್ಲಿದೀರಪ್ಪಾ ಕ್ರಿಕೆಟ್ ಪಂಡಿತರೇ?; ಆರ್‌ಸಿಬಿ ಪ್ಲೇಆಫ್‌ಗೆ ಬರಲ್ಲ ಎಂದಿದ್ದ ಮಾಜಿಗಳು ಫುಲ್‌ ಟ್ರೋಲ್!

ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 68ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರೋಚಕ 27 ರನ್‌ಗಳ ಗೆಲುವು ಸಾಧಿಸಿತು.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ತಮ್ಮ ಅಂತಿಮ ಲೀಗ್-ಹಂತದ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದ ಬಳಿಕ, ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ಸಿಎಸ್‌ಕೆ ತಂಡ ಪ್ಲೇಆಫ್‌ನಿಂದ ಹೊರಬಿದ್ದಿತು.

RCB vs CSK Fans Trolled These Former Players who said that RCB would not make it to the playoffs

ಆರ್‌ಸಿಬಿ ಟಾಪ್ 4ರ ಸ್ಥಾನಕ್ಕೆ ಅರ್ಹತೆ ಪಡೆಯಲು 18 ರನ್‌ಗಳಿಂದ ಗೆಲ್ಲಬೇಕಾಗಿತ್ತು ಮತ್ತು ಯಶ್ ದಯಾಲ್ ಪಂದ್ಯದ ಅಂತಿಮ ಓವರ್‌ನಲ್ಲಿ 35 ರನ್‌ಗಳನ್ನು ಆರಾಮವಾಗಿ ರಕ್ಷಿಸಿದರು. ಕೇವಲ 7 ರನ್ ಮಾತ್ರ ಬಿಟ್ಟುಕೊಟ್ಟರು.

ಪ್ರಸಕ್ತ ಆವೃತ್ತಿಯ ದ್ವಿತೀಯಾರ್ಧದಲ್ಲಿ ಆರ್‌ಸಿಬಿ ಸತತವಾಗಿ 6 ​​ಪಂದ್ಯಗಳನ್ನು ಗೆದ್ದ ಕಾರಣದಿಂದ, ಐಪಿಎಲ್ 2024ರ ಆರ್‌ಸಿಬಿ ಪ್ಲೇಆಫ್‌ಗೆ ತಲುಪಲು ಯೋಚಿಸಲಾಗದ ಸಾಧನೆ ಸಾಧ್ಯವಾಯಿತು.

ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್‌ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್‌ಗಳನ್ನು ಕಲೆಹಾಕಿತು.

RCB vs CSK Fans Trolled These Former Players who said that RCB would not make it to the playoffs

ನಂತರ ಸಿಎಸ್‌ಕೆ ತಂಡ ರಚಿನ್ ರವೀಂದ್ರ ಅವರ ಸ್ಫೋಟಕದ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ಅಬ್ಬರದ ಹೊರತಾಗಿಯೂ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್‌ಗಳಿಗೆ ನಿಯಂತ್ರಣಗೊಂಡಿತು. ನಾಯಕನಾಗಿ ರುತುರಾಜ್ ಗಾಯಕ್ವಾಡ್ ತಮ್ಮ ಮೊದಲ ಆವೃತ್ತಿಯಲ್ಲೇ ಪ್ಲೇಆಫ್‌ನಿಂದ ವಂಚಿತವಾದರು.

ಪ್ಲೇಆಫ್ ಸ್ಥಾನಗಳಲ್ಲಿ ಆರ್‌ಸಿಬಿ ಹೊರಗಿಟ್ಟಿದ್ದ ಕ್ರಿಕೆಟ್ ಪಂಡಿತರು

ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕೆಲವು ಕ್ರಿಕೆಟ್ ತಜ್ಞರು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವ ತಂಡಗಳನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಒಬ್ಬರೂ ಆರ್‌ಸಿಬಿ ತಂಡದ ಹೆಸರು ಆಯ್ಕೆ ಮಾಡಿರಲಿಲ್ಲ. ಬದಲಾಗಿ ಸಿಎಸ್‌ಕೆ ತಂಡ ಪ್ಲೇಆಫ್ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದಿದ್ದರು.

ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಮೊಹಮ್ಮದ್ ಕೈಫ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್ ಮತ್ತು ಟಾಮ್ ಮೂಡಿ ಅವರು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿ ಹೇಳಿಕೆಯಲ್ಲಿ, ಪ್ಲೇಆಫ್ ತಲುಪುವ ತಂಡಗಳಲ್ಲಿ ಆರ್‌ಸಿಬಿ ಇರಲ್ಲ, ಸಿಎಸ್‌ಕೆ ಎಂದು ಹೆಸರಿಸಿದ್ದರು.

ಇದೀಗ ಶನಿವಾರದ ಪಂದ್ಯದ ನಂತರ ಆ ಎಲ್ಲಾ ಕ್ರಿಕೆಟ್ ಪಂಡಿತರನ್ನು ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಎಲ್ಲಿದೀರಪ್ಪಾ ಕ್ರಿಕೆಟ್ ಪಂಡಿತರೇ ಈಗ ಏನು ಹೇಳುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಋತುವಿನಲ್ಲಿ ಸತತ 6ನೇ ಪಂದ್ಯವನ್ನು ಗೆಲ್ಲುವ ಮೂಲಕ ರಾಜಾರೋಷವಾಗಿ ಆರ್‌ಸಿಬಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಗಮನಾರ್ಹವಾಗಿ, ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ, ತವರಿನ ಅಂಗಳದಲ್ಲಿ ಬಗ್ಗುಬಡಿದು ಸೇಡು ತೀರಿಸಿಕೊಂಡಿತು ಮತ್ತು ಸಿಎಸ್‌ಕೆ ಪ್ಲೇಆಫ್ ಕನಸನ್ನು ಚಿವುಟಿ ಹಾಕಿತು.

ಕಳೆದ 17 ವರ್ಷಗಳಿಂದ ಐಪಿಎಲ್ ಟ್ರೋಫಿಯಿಂದ ವಂಚಿತವಾಗಿರುವ ಆರ್‌ಸಿಬಿ ತಂಡ, ಈ ಬಾರಿ ಹೊಸ ಅಧ್ಯಾಯದೊಂದಿಗೆ ಪಂದ್ಯಾವಳಿ ಆರಂಭಿಸಿದ್ದರು. ಆದರೆ, ತಮ್ಮ ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದ್ದ ತಂಡ, ನಂತರ ಅದ್ಭುತವಾಗಿ ಪುನರಾಗಮನ ಮಾಡಿದೆ.

ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಒಂದೇ ಘೋಷ್ಯ ವಾಕ್ಯವಾಗಿರುವ "ಈ ಸಲ ಕಪ್ ನಮ್ದೇ' ಎನ್ನುವ ಮಾತಿಗೆ ಅರ್ಥ ಕಲ್ಪಸಲು ಮುಂದಿನ ಎಲ್ಲ ನಾಕೌಟ್ ಪಂದ್ಯಗಳನ್ನು ಗೆದ್ದು, ಆರ್‌ಸಿಬಿ ಮಹಿಳಾ ತಂಡದಂತೆ, ಪುರುಷರ ತಂಡವೂ ಟ್ರೋಫಿ ಎತ್ತಿ ಹಿಡಿಯಲಿ ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ.

Story first published: Sunday, May 19, 2024, 11:20 [IST]
Other articles published on May 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+