IPL 2023 RCB Vs CSK: ಧೋನಿ-ವಿರಾಟ್ ಕೊನೆ ಮುಖಾಮುಖಿ? ಭಾವುಕರಾದ ಅಭಿಮಾನಿಗಳು
ಐಪಿಎಲ್ 2023ರ 24ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಈ ಪಂದ್ಯ ನಡೆಯಲಿದ್ದು, ಬಲಿಷ್ಠ ತಂಡಗಳ ಕಾದಾಟವನ್ನು ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಕೊಹ್ಲಿ ಧೋನಿಯನ್ನು ಒಟ್ಟಿಗೆ ನೋಡುವುದು ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರ. ಇವರಿಬ್ಬರನ್ನು ಮೈದಾನದಲ್ಲಿ ಜೊತೆಯಲ್ಲಿ ನೋಡುವುದು ಇದೇ ಕೊನೆಯ ಬಾರಿಯಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಸಿಎಸ್‌ಕೆ ನಾಯಕ ಧೋನಿಗೆ ಇದೇ ಕೊನೆಯ ಐಪಿಎಲ್ ಎಂದು ಹೇಳಲಾಗಿದೆ. ಅವರು ನಿವೃತ್ತಿಯಾಗುವುದು ಖಚಿತ ಎನ್ನಲಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಸಿಎಸ್‌ಕೆ ಆರ್ ಸಿಬಿ ಒಮ್ಮೆ ಮಾತ್ರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಫ್ಲೇ ಆಫ್ ಪ್ರವೇಶಿಸಿದರೆ ಮಾತ್ರ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಆದರೂ, ಚಿನ್ನಸ್ವಾಮಿ ಅಂಗಳದಲ್ಲಿ ಇಬ್ಬರನ್ನು ಒಟ್ಟಿಗೆ ನೋಡುವುದು ಇದೇ ಕೊನೆ ಬಾರಿಯಾಗಬಹುದು.

ಕ್ರಿಕೆಟ್ ಜಗತ್ತಿನಲ್ಲಿ ಇಬ್ಬರೂ ಶ್ರೇಷ್ಠ ಆಟಗಾರರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡುವುದೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ, ಎರಡೂ ತಂಡದ ಅಭಿಮಾನಿಗಳ ನಡುವೆ ಪೈಪೋಟಿ ಇದ್ದರೂ, ಇವರಿಬ್ಬರ ನಡುವೆ ಮಾತ್ರ ಅತ್ಯುತ್ತಮ ಬಾಂಧವ್ಯವಿದೆ. ವಿರಾಟ್ ಕೊಹ್ಲಿ ಕೂಡ ಧೋನಿ ತಮ್ಮ ಕೆಟ್ಟ ದಿನಗಳಲ್ಲಿ ಬೆಂಬಲ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಮಹಿರಾಟ್ ಕೊನೆಯ ದರ್ಶನ?
ಆರ್ ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಮನೆ ಮಗ ಎನ್ನುವಂತೆ ನೋಡಿದರೆ, ಸಿಎಸ್‌ಕೆ ತಂಡದಲ್ಲಿ ಧೋನಿ ಕೂಡ ಮನೆ ಮಗನಂತೆ ಇದ್ದಾರೆ. ಇಬ್ಬರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಗೌರವ. ಸಿಎಸ್‌ಕೆ ವಿರುದ್ಧ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಆರ್ ಸಿಬಿ ವಿರುದ್ಧ ಧೋನಿ ಅಬ್ಬರಿಸಿದ್ದಾರೆ. ಸೋಲು ಗೆಲುವು ಏನೇ ಇದ್ದರೂ ಅಭಿಮಾನಿಗಳು ಮಾತ್ರ ಇವರಿಬ್ಬರ ಆಟವನ್ನು ಆನಂದಿಸಲು ಕಾಯುತ್ತಿದ್ದಾರೆ.
ಇದೇ ಇವರಿಬ್ಬರ ಕೊನೆಯ ಪಂದ್ಯವಾಗುವ ಸಾಧ್ಯತೆ ಎನ್ನುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರನ್ನೂ ಮೈದಾನದಲ್ಲಿ ಒಟ್ಟಿಗೆ ನೋಡುವುದು ಇನ್ನು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮೂರು ತಿಂಗಳಿನಲ್ಲಿ ಧೋನಿ 42ನೇ ವಯಸ್ಸಿಗೆ ಕಾಲಿಡಲಿದ್ದಾರೆ, ಈ ಆವೃತ್ತಿಯಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿದ್ದರೂ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ಫಿಟ್‌ನೆಸ್ಸ ಹೊಂದಿದ್ದರೂ ಅವರು ಮುಂದಿನ ಆವೃತ್ತಿಯಲ್ಲಿ ಆಡುವುದು ಅನುಮಾನವಾಗಿದೆ. ತವರಿನಲ್ಲಿ ಅಭಿಮಾನಿಗಳ ಮುಂದೆ ನಿವೃತ್ತಿಯಾಗುವ ಬಯಕೆ ಹೊಂದಿದ್ದಾರೆ, ಈ ಬಾರಿ ತಂಡಕ್ಕೆ ಮತ್ತೊಂದು ಕಪ್ ತಂದುಕೊಟ್ಟು ಕೊನೆಯ ಆವೃತ್ತಿಯನ್ನು ಸ್ಮರಣೀಯವಾಗಿಸುವ ವಿಶ್ವಾಸದಲ್ಲಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗಿದ್ದ ಟಿಕೆಟ್
ಸಿಎಸ್‌ಕೆ ಮತ್ತು ಆರ್ ಸಿಬಿ ನಡುವಿನ ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗಿದ್ದವು. 40000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣ ಕಿಕ್ಕಿರಿದು ತುಂಬಲಿದೆ. ಎರಡೂ ತಂಡಗಳಿಗೆ ಅಪಾರ ಅಭಿಮಾನಿಗಳ ಬೆಂಬಲವಿದ್ದು, ಗೆಲುವಿಗಾಗಿ ರೋಚಕ ಹಣಾಹಣಿ ನಡೆಯಲಿದೆ.
ಸಿಎಸ್‌ಕೆ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ 30 ಪಂದ್ಯಗಳನ್ನಾಡಿದೆ, ಇದರಲ್ಲಿ ಸಿಎಸ್‌ಕೆ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್ ಸಿಬಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೆ ಕೊನೆಯಾಗಿದೆ. 2019ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು, ಇದರಲ್ಲಿ ಆರ್ ಸಿಬಿ ಕೊನೆಯ ಎಸೆತದಲ್ಲಿ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications