For Quick Alerts
ALLOW NOTIFICATIONS  
For Daily Alerts
 

RCB vs CSK: ವಿರಾಟ್ ಕೊಹ್ಲಿಗೆ 'ಆಲ್ ದಿ ಬೆಸ್ಟ್' ಹೇಳಿದ ಸಿಎಸ್‌ಕೆ ಮಾಜಿ ಆಟಗಾರ ಸುರೇಶ್ ರೈನಾ!

ಶನಿವಾರ, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹೈ-ವೋಲ್ಟೇಜ್ ಕದನದಲ್ಲಿ ಸೌಥ್ ಡರ್ಬಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಸೆಣಸಾಡಲಿವೆ.

ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಿರಲಿದೆ. ಗೆದ್ದ ತಂಡ ಅಗ್ರ 4ರಲ್ಲಿ ಸ್ಥಾನ ಪಡೆಯಲಿದ್ದರೆ, ಸೋಲುವ ತಂಡ ಪಂದ್ಯಾವಳಿಯಿಂದ ಹೊರಬೀಳಲಿದೆ.

RCB vs CSK IPL 2024 CSK Former Player Suresh Raina Says Best Wishes Always to Virat Kohli

ಇನ್ನು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಕಂ ಕಾಮೆಂಟೇಟರ್ ಸುರೇಶ್ ರೈನಾ ಅವರು ತಮ್ಮ ಭಾರತ ತಂಡದ ಮಾಜಿ ಸಹ ಆಟಗಾರ ಮತ್ತು ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದರು. ಈ ವೇಳೆ ವಿರಾಟ್ ಕೊಹ್ಲಿ ಆಲ್ ದಿ ಬೆಸ್ಟ್ ಎಂದು ಶುಭಾಶಯ ತಿಳಿಸಿದ್ದಾರೆ.

2 ತಂಡಗಳ ಪ್ಲೇಆಫ್ ಅರ್ಹತಾ ಅವಕಾಶಗಳು ಅಪಾಯದಲ್ಲಿರುವುದರಿಂದ, ಆರ್‌ಸಿಬಿ ಮತ್ತು ಸಿಎಸ್‌ಕೆ ಫ್ರಾಂಚೈಸಿಗಳ ಡೈ-ಹಾರ್ಡ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಬಹು ನಿರೀಕ್ಷಿತ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.

ಗುರುವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ಅಭ್ಯಾಸ ಅವಧಿಯಲ್ಲಿದ್ದ ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಂಡ ಸುರೇಶ್ ರೈನಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಐಪಿಎಲ್ 2024ರ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್‌ನ ವೀಕ್ಷಕ ವಿವರಣೆಗಾರನಾಗಿರುವ ಸುರೇಶ್ ರೈನಾ ಕ್ರೀಡಾಂಗಣದಲ್ಲಿ ಹಾಜರಿದ್ದರು ಮತ್ತು ಸಾಮಾನ್ಯ ಉಡುಪಿನಲ್ಲಿ ಕಾಣಿಸಿಕೊಂಡರು. ಸಿಎಸ್‌ಕೆ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ 'ಸಹೋದರ' ವಿರಾಟ್ ಕೊಹ್ಲಿಯನ್ನು ಭೇಟಿಯಾದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

"ನಿಮ್ಮನ್ನು ನೋಡಲು ಸಂತೋಷವಾಗಿದೆ, ಸಹೋದರ ವಿರಾಟ್ ಕೊಹ್ಲಿ. ಯಾವಾಗಲೂ ನನ್ನ ಶುಭಾಶಯಗಳು!" ಎಂದು ಸುರೇಶ್ ರೈನಾ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಧೋನಿ vs ಕೊಹ್ಲಿ: ಕೊನೆಯ ಮುಖಾಮುಖಿ?

ಐಪಿಎಲ್ 2024ರ ಬ್ಲಾಕ್‌ಬಸ್ಟರ್ ರಿವರ್ಸ್ ಪಂದ್ಯದಲ್ಲಿ ಸುರೇಸ್ ರೈನಾ ಅವರ ಮಾಜಿ ಫ್ರಾಂಚೈಸಿ ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಸೆಣಸಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಕಾದಾಡಿದ್ದ ತಂಡಗಳು ಇದೀಗ ಮತ್ತೆ ಮುಖಾಮುಖಿಯಾಗುತ್ತಿವೆ.

ಪ್ರಸಕ್ತ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಭರ್ಜರಿ ಗೆಲುವು ಸಾಧಿಸಿದ ನಂತರ, ಉಭಯ ತಂಡಗಳು ಇದೀಗ ಪ್ಲೇಆಫ್ ಸ್ಥಾನಕ್ಕಾಗಿ ಕಾದಾಡಲಿವೆ.

ಒಂದು ವೇಳೆ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋತರೆ ಲೆಜೆಂಡ್ ಕ್ರಿಕೆಟಿಗ ಎಂಎಸ್ ಧೋನಿಗೆ ಕೊನೆಯ ಪಂದ್ಯವಾಗಿರಲಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಪ್ರಭಾವಶಾಲಿ ದಾಖಲೆಯ ಕಾರಣದಿಂದ ಬಹಳಷ್ಟು ಆತ್ಮವಿಶ್ವಾಸದಿಂದ ಪಂದ್ಯವನ್ನು ಎದುರಿಸಲಿದೆ.

ಎಂಎಸ್ ಧೋನಿ ಆರ್‌ಸಿಬಿ ತಂಡದ ವಿರುದ್ಧ ಆಡಿದ 35 ಪಂದ್ಯಗಳಲ್ಲಿ 140.77ರ ಸ್ಟ್ರೈಕ್ ರೇಟ್‌ನಲ್ಲಿ 839 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧ ಆಡಿದ 32 ಪಂದ್ಯಗಳಲ್ಲಿ 1006 ರನ್ ಗಳಿಸುವ ಮೂಲಕ ಸಿಎಸ್‌ಕೆ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಆದಾಗ್ಯೂ, ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

ಆರ್‌ಸಿಬಿ vs ಸಿಎಸ್‌ಕೆ: ಮಳೆಗೆ ರದ್ದಾಗುತ್ತಾ ಪ್ಲೇಆಫ್ ನಿರ್ಣಾಯಕ ಪಂದ್ಯ?

ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರು ನಗರದಲ್ಲಿ ದಿನವಿಡೀ ಭಾರೀ ಮಳೆಯಾಗುವ ನಿರೀಕ್ಷೆಯೊಂದಿಗೆ ಆರ್‌ಸಿಬಿ ಅಭಿಮಾನಿಗಳ ಪ್ಲೇಆಫ್ ನಿರೀಕ್ಷೆಯನ್ನು ಹುಸಿಗೊಳಿಸಬಹುದು.

weather.com ಪ್ರಕಾರ, ಮೇ 18ರಂದು ಹಗಲಿನ ವೇಳೆಯಲ್ಲಿ ಶೇ.73ರಷ್ಟು ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಇದು ಸಂಜೆ 6ರ ಸುಮಾರಿಗೆ ಶೇ.80 ರವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ನಿರಂತರವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಇದು ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ.

Story first published: Thursday, May 16, 2024, 19:58 [IST]
Other articles published on May 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+