ಶನಿವಾರ, ಮೇ 18 ರಂದು ಎಂ ಚಿನ್ನಸ್ವಾಮಿಯಲ್ಲಿ ಮುಕ್ತಾಯಗೊಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಆರ್‌ಸಿಬಿ) 68ನೇ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ರೋಚಕ ಗೆಲುವು ಸಾಧಿಸಿ, ಪ್ಲೇಆಫ್‌ಗೆ ನಾಲ್ಕನೇ ತಂಡವಾಗಿ ಪ್ರವೇಶಿಸಿತು.
ಇನ್ನು ಆರ್‌ಸಿಬಿ ವಿರುದ್ಧ 27 ರನ್‌ಗಳ ಸೋಲಿನ ನಂತರ ಸಿಎಸ್‌ಕೆ ತಂಡ ಐಪಿಎಲ್ 2024ರ ಪ್ಲೇಆಫ್‌ನಿಂದ ಹೊರಬಿದ್ದಿದೆ. ಪಂದ್ಯ ಸೋಲುತ್ತಿದ್ದಂತೆಯೇ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಪಿಚ್ ತೊರೆದು ಡ್ರೆಸ್ಸಿಂಗ್ ರೂಮ್ ಸೇರಿದರು.

ಪಂದ್ಯ ಮುಕ್ತಾಯದ ನಂತರ, ಎಂಎಸ್ ಧೋನಿ ಅವರು ತನ್ನ ತಂಡದ ಆಟಗಾರರೊಂದಿಗೆ ಸರತಿಯಲ್ಲಿ ಸಾಗಿ ಆರ್‌ಸಿಬಿ ತಂಡದ ಆಟಗಾರರಿಗೆ ಹಸ್ತಲಾಘವ ಮಾಡದಿರಲು ನಿರ್ಧರಿಸಿದರು. ಇದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಉಭಯ ತಂಡದ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು.
ತಮ್ಮ ಅಂತಿಮ ಲೀಗ್-ಹಂತದ ಪಂದ್ಯದಲ್ಲಿ ಸಿಎಸ್‌ಕೆ ಸೋತ ನಂತರ, ಎಂಎಸ್ ಧೋನಿ ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಚಿನ್ನಸ್ವಾಮಿಯಲ್ಲಿ ಸಂಭವಿಸಲಿಲ್ಲ. ಹೀಗಾಗಿ ಈ ಚರ್ಚೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ಎಂಎಸ್ ಧೋನಿ ಪಂದ್ಯದ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಯಶ್ ದಯಾಳ್ ಬೌಲಿಂಗ್‌ನಲ್ಲಿ 110 ಮೀಟರ್ ಸಿಕ್ಸರ್ ಬಾರಿಸಿದ ನಂತರ, ಎರಡನೇ ಎಸೆತದಲ್ಲಿ ಔಟಾದರು.
ಕೇವಲ 12 ಎಸೆತಗಳಲ್ಲಿ 25 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್ ಧೋನಿ, ಆರ್‌ಸಿಬಿ ವೇಗಿಯ ನಿಧಾನಗತಿಯ ಎಸೆತವನ್ನು ಟಾಪ್-ಎಡ್ಜ್ ಮಾಡಿದ ನಂತರ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸ್ವಪ್ನಿಲ್ ಸಿಂಗ್‌ಗೆ ಕ್ಯಾಚ್ ನೀಡಿ ನಿರಾಸೆಯಲ್ಲಿ ಪೆವಿಲಿಯನ್ ಸೇರುತ್ತಿದ್ದಂತೆಯೇ ಸಿಎಸ್‌ಕೆ ಸೋಲಿನ ಕಡೆ ಮುಖ ಮಾಡಿತ್ತು.
ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಒಂದು ಸ್ಮರಣೀಯ ಹಾಗೂ ರೋಮಾಂಕಕಾರಿ ಮುಖಾಮುಖಿಯಾಗಿತ್ತು. ಏಕೆಂದರೆ, ಇದು ಉಭಯ ತಂಡಗಳಿಗೆ ಪ್ಲೇಆಫ್ ನಿರ್ಧಾರಕ ಪಂದ್ಯವಾಗಿತ್ತು.
ಪ್ಲೇಆಫ್‌ಗೆ ಅರ್ಹತೆ ಪಡೆಯಲು ಅಂತಿಮ ಓವರ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಕೇವಲ 17 ರನ್ ಬೇಕಿತ್ತು. ಆದರೂ, ಅದು ಪಂದ್ಯವನ್ನು ಸೋಲುವುದು ಖಚಿತವಾಗಿತ್ತು. ಏಕೆಂದರೆ, ಅಂತಿಮ 6 ಎಸೆತಗಳಲ್ಲಿ ಗುರಿ 35 ರನ್ ಆಗಿತ್ತು.
ಮೊದಲ ಎಸೆತದ ಸಿಕ್ಸ್ ಹೊರತುಪಡಿಸಿ, 6 ಎಸೆತಗಳನ್ನು ಎದುರಿಸಿದ ಎಂಎಸ್ ಧೋನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಮೂವರೂ ಯಶ್ ದಯಾಳ್ ಅವರ ಬೌಲಿಂಗ್‌ನಲ್ಲಿ ಗೆಲುವಿನ ರನ್ ಬಾರಿಸಲು ವಿಫಲರಾದರು.
ಅಂತಿಮ ಓವರ್‌ನಲ್ಲಿ ಯಶ್ ದಯಾಳ್ ಕೇವಲ 7 ರನ್ ನೀಡಿ ಆರ್‌ಸಿಬಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಅಂಕಗಳೊಂದಿಗೆ ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.