For Quick Alerts
ALLOW NOTIFICATIONS  
For Daily Alerts
 

RCB vs CSK: ಎಂಎಸ್ ಧೋನಿಯ ನಿವೃತ್ತಿ ಸುಳಿವು ನೀಡಿದ ವಿರಾಟ್ ಕೊಹ್ಲಿ

ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಹೈ-ವೋಲ್ಟೇಜ್ ಪಂದ್ಯದ ವೇಳೆ ಐಪಿಎಲ್ 2024ರ ಅಂತಿಮ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಲಿವೆ.

ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತಂಡ 13 ಪಂದ್ಯಗಳಿಂದ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

RCB vs CSK IPL 2024 Virat Kohli Hints For MS Dhoni s Retirement From IPL

ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿರುವಾಗ, ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ಎಂಎಸ್ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯದಲ್ಲಿ ಆಡುವುದನ್ನು ನೋಡಲು ಅಭಿಮಾನಿಗಳು ಕೊನೆಯ ಬಾರಿಗೆ ಸಾಕ್ಷಿಯಾಗಬಹುದು.

ಸಿಎಸ್‌ಕೆ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ, ಇದು ಲೆಜೆಂಡ್ ಕ್ರಿಕೆಟಿಗ ಎಂಎಸ್ ಧೋನಿಯ ಕೊನೆಯ ಐಪಿಎಲ್ ಪಂದ್ಯವಾಗಿರಬಹುದು ಎಂಬ ಸಾಧ್ಯತೆಯನ್ನು ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸುಳಿವು ನೀಡಿದರು.

RCB vs CSK IPL 2024 Virat Kohli Hints For MS Dhoni s Retirement From IPL

"ಮಾಹಿ ಭಾಯ್ ಮತ್ತು ನಾನು ಮತ್ತೆ ಆಡುತ್ತಿದ್ದೇವೆ. ಬಹುಶಃ ಕೊನೆಯ ಬಾರಿಗೆ ಆಗಬಹುದು, ಯಾರಿಗೆ ಗೊತ್ತು? ಇದು ಅಭಿಮಾನಿಗಳಿಗೆ ಉತ್ತಮ ಕ್ಷಣವಾಗಿದೆ, ನಾವು ಹಲವಯ ವರ್ಷಗಳಿಂದ ಭಾರತಕ್ಕಾಗಿ ಉತ್ತಮ ಪಾಲುದಾರಿಕೆಯನ್ನು ಹೊಂದಿದ್ದೇವೆ. ಅವರು ಎಷ್ಟು ಪಂದ್ಯಗಳನ್ನು ಮುಗಿಸಿದ್ದಾರೆ ಮತ್ತು ಎಷ್ಟು ಪಂದ್ಯಗಳನ್ನು ತಂಡಕ್ಕಾಗಿ ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ," ಎಂದು ಜಿಯೋ ಸಿನಿಮಾದ ಇನ್‌ಸೈಡ್ ಔಟ್ ಶೋನಲ್ಲಿ ವಿರಾಟ್ ಕೊಹ್ಲಿ ಕೊಹ್ಲಿ ಹೇಳಿದರು.

ಕಳೆದ ಕೆಲವು ಆವೃತ್ತಿಗಳಲ್ಲಿ ಎಂಎಸ್ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಇದಕ್ಕೆ ಕಾರಣ ಮೊಣಕಾಲಿನ ಗಾಯಗಳು ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಿವೆ.

RCB vs CSK IPL 2024 Virat Kohli Hints For MS Dhoni s Retirement From IPL

ಆದಾಗ್ಯೂ, 42 ವರ್ಷದ ಅನುಭವಿ ಕ್ರಿಕೆಟಿಗ ಮೈದಾನದಲ್ಲಿ ತಮ್ಮ ಉಪಸ್ಥಿತಿಯಿಂದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದಾರೆ. ಕಳೆದ ವರ್ಷ ಸಿಎಸ್‌ಕೆ ತಂಡವನ್ನು ತನ್ನ ಐದನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು.

2024ರ ಐಪಿಎಲ್ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಅಂತಿಮ ತವರಿನ ಪಂದ್ಯದ ನಂತರ, ಎಂಎಸ್ ಧೋನಿ ಮತ್ತು ಉಳಿದ ಆಟಗಾರರು ಚೆಪಾಕ್ ಮೈದಾನ ಸುತ್ತು ಹಾಕಿ ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಈ ಋತುವಿನಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಎಂಎಸ್ ಧೋನಿ ತಮ್ಮ ಕೊನೆಯ ಐಪಿಎಲ್ ಪಂದ್ಯ ಆಡುವ ಸಾಧ್ಯತೆ ಇದೆ.

ಆದಾಗ್ಯೂ, ಸಿಎಸ್‌ಕೆ ತಂಡ ಪ್ಲೇಆಫ್‌ಗೆ ಪ್ರವೇಶಿಸಿದರೆ, ಎಂಎಸ್ ಧೋನಿ ಇನ್ನೂ ಎರಡು ಪಂದ್ಯಗಳನ್ನು ಆಡುವ ಅವಕಾಶವನ್ನು ಹೊಂದಿರುತ್ತಾರೆ. ಅದು ಕ್ವಾಲಿಫೈಯರ್ 2 ಮತ್ತು ಫೈನಲ್.

ಮತ್ತೊಂದೆಡೆ, ಅನಿರೀಕ್ಷಿತವಾಗಿ ಪ್ಲೇ-ಆಫ್ ರೇಸ್‌ನಲ್ಲಿರುವ ಆರ್‌ಸಿಬಿ ತಂಡ ಸತತ ಆರು ಪಂದ್ಯಗಳ ಸೋಲಿನ ಸರಣಿ ನಂತರ, ಸತತ ಐದು ಪಂದ್ಯಗಳ ಗೆಲುವಿನ ಸರಣಿಯನ್ನು ಹೊಂದಿ ಗಮನಾರ್ಹ ಪುನರಾಗಮನ ಮಾಡಿದೆ.

ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡದ ದಿಢೀರ್ ಏರಿಕೆಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪ್ರದರ್ಶನಕಾರ ಆಗಿದ್ದಾರೆ. 2024ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಈವರೆಗೆ ಆಡಿದ 13 ಪಂದ್ಯಗಳಿಂದ 155.16ರ ಸ್ಟ್ರೈಕ್ ರೇಟ್‌ನಲ್ಲಿ 661 ರನ್ ಗಳಿಸುವ ಮೂಲಕ ಅತಿ ಹೆಚ್ಚು ಸ್ಕೋರರ್ ಆಗಿ ಮುಂದುವರಿದಿದ್ದಾರೆ.

Story first published: Saturday, May 18, 2024, 14:13 [IST]
Other articles published on May 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+