RCB vs CSK IPL 2025: ಬೆಂಗಳೂರಿನಲ್ಲಿ ಐಪಿಎಲ್‌ನ ಬಿಗ್ ಫೈಟ್, ಧೋನಿ vs ವಿರಾಟ್; ಅಗ್ರ ಸ್ಥಾನದ ಮೇಲೆ ಆರ್‌ಸಿಬಿ ಕಣ್ಣು
ಭರ್ಜರಿ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈಗಾಗಲೇ ಚೆನ್ನೈನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ತಂಡವನ್ನು ಮಣಿಸಿರುವ ಆರ್‌ಸಿಬಿ, ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದೆ. ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಭರವಸೆ ಮೂಡಿಸಿದ್ದಾರೆ. ಲೀಗ್ ಹಂತದಲ್ಲಿ ಆರ್‌ಸಿಬಿ ಸೊಗಸಾದ ಪ್ರದರ್ಶನ ನೀಡಿದ್ದು, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದೆ.
ಉಭಯ ತಂಡಗಳುಈಗಾಗಲೇ ಐಪಿಎಲ್‌ನಲ್ಲಿ 34 ಪಂದ್ಯಗಳಲ್ಲಿ ಫೈಟ್ ನಡೆಸಿದ್ದು, ಆರ್‌ಸಿಬಿ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಚೆನ್ನೈ 21 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ತಂಡಗಳು ಅಂಗಳಕ್ಕೆ ಇಳಿದಾಗ 226 ರನ್‌ಗಳ ಗರಿಷ್ಠ ರನ್ ದಾಖಲಾಗಿದೆ. ಇನ್ನು 70 ರನ್ ಕನಿಷ್ಠ ಮೊತ್ತವಾಗಿದೆ. ಈ ಬಾರಿ ಆರ್‌ಸಿಬಿ ಅಮೋಘ ಫಾರ್ಮ್‌ನಲ್ಲಿದ್ದು ಮತ್ತೊಂದು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಕೆಂಪು ಹಾಗೂ ಹಳದಿ ಜೆರ್ಸಿಗಳು ಚಿನ್ನಸ್ವಾಮಿ ಅಂಗಳದ ಅಂದವನ್ನು ಹೆಚ್ಚಿಸಲಿವೆ.

ಹೇಗಿದೆ ಪಿಚ್?
ಈಗಾಗಲೇ ಬೆಂಗಳೂರಿನಲ್ಲಿ ನಡೆದ ಒಂದು ಪಂದ್ಯ ಮಳೆಗೆ ಬಾಧಿತವಾಗಿ ಓವರ್‌ಗಳಗೆ ಕತ್ತರಿ ಬಿದ್ದಿತ್ತು. ಶನಿವಾರ ಸಹ ಪಂದ್ಯ ನಡೆಯುವ ಸಮಯದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮಳೆ ಬೀಳುವ ಸಂಭವವಿದೆ. ಮಳೆಯ ಭೀತಿಯಿಂದಾಗ ಕಳೆದ ಮೂರು ದಿನಗಳಿಂದ ಪಿಚ್ ಮೇಲೆ ಕವರ್ಸ್ ಹಾಕಲಾಗಿದೆ. ಈಗಾಗಲೇ ಈ ಮೈದಾನದಲ್ಲಿ 99 ಪಂದ್ಯಗಳನ್ನು ಆಡಲಾಗಿದ್ದು, ಮೊದಲ ಬ್ಯಾಟ್ ತಂಡ 42 ಬಾರಿ ಗೆಲುವು ದಾಖಲಿಸಿದರೆ, ಎರಡನೇ ಬಾರಿ ಬ್ಯಾಟ್ ಮಾಡಿದ ತಂಡ 53 ಬಾರಿ ಜಯ ಸಾಧಿಸಿದೆ.
ಇತಿಹಾಸದ ಕನಸು
ಈಗಾಗಲೇ 17 ಆವೃತ್ತಿಯ ಐಪಿಎಲ್‌ಗಳು ಮುಗಿದಿವೆ. ಈ ವೇಳೆ ಎಂದು ನಿರ್ಮಿಸಲು ಅಸಾಧ್ಯವಾಗದ ದಾಖಲೆಯೊಂದನ್ನು ಈ ಬಾರಿ ಆರ್‌ಸಿಬಿ ಮಾಡುವ ಇರಾದೆಯನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದಲ್ಲಿ ಎರಡೂ ಬಾರಿ ಚೆನ್ನೈ ತಂಡವನ್ನು ಮಣಿಸಿಲ್ಲ. ಈ ಬಾರಿ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ.

ಲಯದಲ್ಲಿರುವ ಆರ್‌ಸಿಬಿ ಬ್ಯಾಟರ್ಸ್
ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ಸ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ವೇಳೆ ಟಾಪ್ ಆರ್ಡರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಎದುರಾಳಿಗಳನ್ನು ಕಾಡಬಲ್ಲರು. ಇವರಿಬ್ಬರು ಪ್ಲೇ ಆಫ್ ವೇಳೆ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡಬಹುದಾಗಿದೆ. ಕಳೆದ ಪಂದ್ಯದಲ್ಲಿ ತೋರಿದ ಫಾರ್ಮ್‌ನ್ನು ಮುಂದುವರಿಸುವ ಪ್ಲ್ಯಾನ್‌ನಲ್ಲಿ ವಿರಾಟ್ ಇದ್ದಾರೆ. ಇನ್ನು ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಲು ದೇವದತ್ ಪಡಿಕ್ಕಲ್ ಸಹ ಸಜ್ಜಾಗಿದ್ದಾರೆ.
ಸ್ಪಿನ್ ಬೌಲರ್‌ಗಳನ್ನು ಕಾಡಬಲ್ಲ ಕ್ಷಮತೆಯನ್ನು ಹೊಂದಿರುವ ರಜತ್ ಪಟಿದಾರ್ ಮಧ್ಯಮ ಕ್ರಮಾಂಕದಲ್ಲಿ ಮಿಂಚಬಲ್ಲ ಪ್ಲೇಯರ್. ಇವರು ತಮ್ಮ ಲಯವನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆ. ಇನ್ನು ಕಳೆದ ಪಂದ್ಯದ ಕೃನಾಲ್ ಪಾಂಡ್ಯ ತಮ್ಮಲ್ಲಿ ಬ್ಯಾಟಿಂಗ್ ಕ್ಷಮತೆ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ಟೀಮ್ ಡೇವಿಡ್ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು.

ಆರ್‌ಸಿಬಿ ಬ್ಯಾಟರ್‌ಗಳಿಂದ ಹೆಚ್ಚು ರನ್
ವಿರಾಟ್ ಕೊಹ್ಲಿ, 10 ಪಂದ್ಯ, 443 ರನ್
ಫಿಲ್ ಸಾಲ್ಟ್, 10 ಪಂದ್ಯ, 239 ರನ್
ದೇವದತ್ ಪಡಿಕ್ಕಲ್, 10 ಪಂದ್ಯ, 230 ರನ್
ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಯಶ್ ದಯಾಳ್ ಹೊಸ ಚೆಂಡಿನೊಂದಿಗೆ ಬ್ಯಾಟರ್‌ಗಳಿಗೆ ಕಾಡಬಲ್ಲರು. ಇವರು ಪವರ್ ಪ್ಲೇನಲ್ಲಿ ವಿಕೆಟ್ ಬೇಟೆ ನಡೆಸಿ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲರು. ಇನ್ನು ಜೋಶ್ ಹ್ಯಾಜಲ್‌ವುಡ್ ಡಾಟ್ ಬೌಲ್‌ಗಳನ್ನು ಎಸೆಯುವಲ್ಲಿ ಹೆಸರುವಾಸಿ. ಸ್ಪಿನ್ ಬೌಲಿಂಗ್ ದಾಳಿಯನ್ನು ಕೃನಾಲ್ ಪಾಂಡ್ಯ ಹಾಗೂ ಸುಯೇಶ್ ಶರ್ಮಾ ತಮ್ಮ ಸ್ಪಿನ್ ಮೋಡಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಸುಯೇಶ್ ಪ್ರಸಕ್ತ ಆವೃತ್ತಿಯಲ್ಲಿ ಮಿಡ್ಲ್ ಓವರ್‌ಗಳಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ.
ಬೆಂಗಳೂರು ತಂಡದ ಪರ ಹೆಚ್ಚು ವಿಕೆಟ್ ಸಾಧನೆ
ಜೋಶ್ ಹ್ಯಾಜಲ್‌ವುಡ್, 10 ಪಂದ್ಯ, 18 ವಿಕೆಟ್
ಕೃನಾಲ್ ಪಾಂಡ್ಯ, 10 ಪಂದ್ಯ, 13 ವಿಕೆಟ್
ಭುವನೇಶ್ವರ್ ಕುಮಾರ್, 9 ಪಂದ್ಯ, 12 ವಿಕೆಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ : ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಸುಯಾಶ್ ಶರ್ಮಾ
ಯುವ ಆಟಗಾರರು ಆಕರ್ಷಣೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಯುವ ಆಟಗಾರರಾದ ಶೇಕ್ ರಶೀದ್, ಆಯುಷ್ ಮಾತ್ರೆ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇನ್ನು ಮಿಡ್ಲ್ ಆರ್ಡರ್‌ನಲ್ಲಿ ಸ್ಯಾಮ್ ಕರನ್ ಹಾಗೂ ರವೀಂದ್ರ ಜಡೇಜಾ, ಡೇವಾಲ್ಡ್ ಬ್ರೇವಿಸ್ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬ ಬಲ್ಲ ಆಟಗಾರ. ಈ ಆಟಗಾರರು ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಬೇಕಿದೆ. ಅಂದಾಗ ದೊಡ್ಡ ಗೆಲುವಿನ ಕನಸು ನನಸಾಗುತ್ತದೆ.
ಚೆನ್ನೈ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಖಲೀಲ್ ಅಹ್ಮದ್, ಮತೀಶ ಪತಿರಾನ ಮುನ್ನಡೆಸಲಿದ್ದಾರೆ. ಇವರು ಬಿಗುವಿನ ದಾಳಿ ನಡೆಸಿ ಎದುರಾಳಿಗಳನ್ನು ಕಾಡಬೇಕಿದೆ. ಅಲ್ಲದೆ ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಬೌಲಿಂಗ್ ಪ್ರದರ್ಶನ ನೀಡಬೇಕಿದೆ. ಇನ್ನು ರವೀಂದ್ರ ಜಡೇಜಾ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರಿಗೆ ನೂರ್ ಅಹ್ಮದ್ ಸಹ ಉತ್ತಮ ಸಾಥ್ ನೀಡುತ್ತಿದ್ದಾರೆ. ಇವರು ಮಿಡ್ಲ್ ಓವರ್‌ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು.
ಚೆನ್ನೈ ಪರ ಅತಿ ಹೆಚ್ಚು ರನ್ ಸಾಧಕರು
ಶಿವಂ ದುಬೆ, 10 ಪಂದ್ಯ, 248 ರನ್
ರಚಿನ್ ರವೀಂದ್ರ, 8 ಪಂದ್ಯ, 191 ರನ್
ರವೀಂದ್ರ ಜಡೇಜಾ, 10 ಪಂದ್ಯ, 183 ರನ್
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ : ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ / ವಿಜಯ್ ಶಂಕರ್ / ವಂಶ್ ಬೇಡಿ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶ ಪತಿರಾನ.
ಅಂಕಿ ಅಂಶಗಳು
ಸಿಎಸ್‌ಕೆ ಸ್ಪಿನ್ ಬೌಲಿಂಗ್ ವಿರುದ್ಧ ಅತಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದೆ. ಇದೇ ವೇಳೆ ಈ ತಂಡ ಸ್ಪಿನ್ ವಿರುದ್ಧ 31 ವಿಕೆಟ್ ಕಬಳಿಸಿದ್ದರು. ಇನ್ನು ಚೆನ್ನೈ ಈ ಆವೃತ್ತಿಯಲ್ಲಿ ಅತಿ ಕಡಿಮೆ ಪವರ್ ಪ್ಲೇ ರನ್ ಸರಾಸರಿಯನ್ನು ಹೊಂದಿರುವ ತಂಡವಾಗಿದೆ.
ವಿರಾಟ್ ಕೊಹ್ಲಿ ಎಂಟು ಇನಿಂಗ್ಸ್‌ಗಳಲ್ಲಿ ಎರಡು ಬಾರಿ ಔಟ್ ಆಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 40.6ರ ಸರಾಸರಿಯಲ್ಲಿ ಆರ್‌ಸಿಬಿ ವಿರುದ್ಧ ರನ್ ಕಲೆ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications