Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025, RCB vs CSK: ಆರ್‌ಸಿಬಿ vs ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದ ಡ್ರೀಮ್ ಇಲೆವೆನ್

ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ 2025 ರ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 28, ಶುಕ್ರವಾರದಂದು ನಡೆಯಲಿರುವ ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ರೋಚಕತೆ ಹುಟ್ಟು ಹಾಕಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದಿಯುವಲ್ಲಿ ಯಶಸ್ವಿಯಾಗಿವೆ. ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಮೈದಾನದ ಒಳಗೆ ಮತ್ತು ಹೊರಗೆ ತೀವ್ರ ಪೈಪೋಟಿ ಇದೆ.

ಐಪಿಎಲ್ 2025 ರ ಆರಂಭಿಕ ಪಂದ್ಯಗಳನ್ನು ಸಿಎಸ್‌ಕೆ ಮತ್ತು ಆರ್‌ಸಿಬಿ ಎರಡೂ ತಂಡಗಳು ಗೆದ್ದಿವೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆರ್‍‌ಸಿಬಿ ಸೋಲಿಸಿದರೆ, ಮುಂಬೈ ಇಂಡಿಯನ್ಸ್ ತಂಡವನ್ನು ಸಿಎಸ್‌ಕೆ ತವರಿನಲ್ಲಿ ಸೋಲಿಸಿದೆ.

rcb vs csk ipl 2025 dream11prediction playing11fantasy tips high voltage match

ಬೆಂಗಳೂರಿನಲ್ಲಿ ನಡೆದ ಐಪಿಎಲ್ 2024 ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಸಿಎಸ್‌ಕೆಯನ್ನು ಆರ್‌ಸಿಬಿ 21 ರನ್‌ಗಳಿಂದ ಸೋಲಿಸಿ ಪ್ಲೇಆಫ್ ರೇಸ್‌ನಿಂದ ಹೊರದಬ್ಬಿತ್ತು. ಈ ಸೋಲು ಸಿಎಸ್‌ಕೆ ತಂಡಕ್ಕೆ ಮುಜುಗರ ತಂದಿತ್ತು. ಈಗ ಐಪಿಎಲ್ 2025 ರಲ್ಲಿ ಮತ್ತೊಮ್ಮೆ ಸಿಎಸ್‌ಕೆ ತಂಡಕ್ಕೆ ಟಕ್ಕರ್ ಕೊಡಲು ಆರ್‍‌ಸಿಬಿ ತಂಡದ ಸಜ್ಜಾಗಿದೆ. ಹೀಗಾಗಿ ಉಭಯ ತಂಡಗಳ ಪ್ಲೇಯಿಂಗ್-11 ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಡೇವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಆರ್‍‌ಸಿಬಿ ಬೌಲರ್‍‌ಗಳು ಮಿಂಚಿದರು. ಅದ್ಭುತ ಬೌಲಿಂಗ್ ನೀಡಿದ ಆರ್‍‌ಸಿಬಿ ಬೌಲರ್‍‌ಗಳು ಕೆಕೆಆರ್ ತಂಡವನ್ನು ಕಟ್ಟಿ ಹಾಕಿದ್ದರು. ಇದರೊಂದಿಗೆ ಆರ್‍‌ಸಿಬಿ ಎಲ್ಲರ ಮೆಚ್ಚುಗೆ ಗಳಿಸಿದೆ. ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‍‌ಸಿಬಿ ತಂಡದ ಬೌಲರ್‍‌ಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಆರ್‍‌ಸಿಬಿ ಬಲ

ಆರ್‍‌ಸಿಬಿ ವೇಗದ ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಕುಮಾರ್ ಮರಳಿರುವುದು ಆನೆ ಬಲ ತಂದಿದೆ. ಜೋಶ್ ಹೇಜಲ್‌ವುಡ್‌ ಜೊತೆಗೆ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ದಾಳಿ ನಡೆಸಲು ಸಜ್ಜಾಗಿದೆ. ಜೊತೆಗೆ ಯಶ್ ದಯಾಳ್ ಕೂಡ ಈ ಸ್ಟಾರ್ ವೇಗಿಗಳಿಗೆ ತಮ್ಮ ಬೆಂಬಲ ನೀಡಲಿದ್ದಾರೆ. ಇನ್ನೂ ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಮಿಂಚಲು ರೆಡಿಯಾಗಿದ್ದಾರೆ.

ಸ್ಪೋಟಕ ಬ್ಯಾಟಿಂಗ್ ಲೈನ್ ಆಫ್ ಹೊಂದಿರುವ ಆರ್‍‌ಸಿಬಿ ಈ ಬಾರಿ ಅಪಾಯಕಾರಿ ತಂಡ ಎನಿಸಿಕೊಂಡಿದೆ. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್ ಅವರಂತ ಸ್ಪೋಟಕ ಬ್ಯಾಟರ್ ದಂಡೆಯಿದೆ. ಕೆಕೆಆರ್ ವಿರುದ್ಧ ಕಣಕ್ಕಿಳಿದಿದ್ದ ಪ್ಲೇಯಿಂಗ್- 11 ಅನ್ನು ಆರ್‌ಸಿಬಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಇದರಲ್ಲಿ ಒಂದು ಬದಲಾವಣೆಯಾಗಲಿದೆ. ಭುವನೇಶ್ವರ್ ಬದಲಿಗೆ ಯಾವ ಆಟಗಾರರ ಹೊರಗುಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಸಿಎಸ್‌ಕೆ ಸಾಮರ್ಥ್ಯ

ಆರ್‍‌ಸಿಬಿ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಸಿಎಸ್‌ಕೆ ಭರ್ಜರಿ ತಯಾರಿ ನಡೆಸಿದೆ. ಕಳೆದ ಸೀಸನ್ ಸೋಲಿಗೆ ಆರ್‍‌ಸಿಬಿ ವಿರುದ್ಧ ಸೇಡಿಗೆ ಸಿಎಸ್‌ಕೆ ಸಜ್ಜಾಗಿದೆ. ಸಿಎಸ್‌ಕೆ ತನ್ನ ಆರಂಭಿಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 44 ರನ್‌ಗಳಿಂದ ಮಣಿಸಿತು. ನಾಯಕ ರುತುರಾಜ್ ಗಾಯಕ್ವಾಡ್ 53 ರನ್ ಗಳಿಸಿದರೆ, ರಚಿನ್ ರವೀಂದ್ರ 65 ರನ್ ಕಲೆ ಹಾಕಿದ ಸಿಎಸ್‌ಕೆ ತಂಡದ ಗೆಲುವಿಗೆ ಮುಖ್ಯ ಪಾತ್ರವಹಿಸಿದ್ದರು. ಇನ್ನೂ ಬೌಲಿಂಗ್‌ನಲ್ಲಿ ನೂರ್ ಅಹ್ಮದ್ ತಮ್ಮ ಸ್ಪಿನ್ ಮೋಡಿ ತೋರಿಸಿದ್ದರು. ಪರಿಣಾಮ ರಾಜಸ್ಥಾನ ರಾಯಲ್ಸ್ ತಂಡವನ್ನು ನೂರ್ ಅಹ್ಮದ್ ಕಟ್ಟಿ ಹಾಕಿದ್ದರು.

ಆರ್‍‌ಸಿಬಿ ತಂಡಕ್ಕೂ ನೂರ್ ಅಹ್ಮದ್ ಕಾಟ ನೀಡುವ ಸಾಧ್ಯತೆಯಿದೆ. ಚೆಪಾಕ್ ಸ್ಪಿನ್ ಸ್ನೇಹಿ ಪಿಚ್ ಆಗಿದ್ದು, ಇಲ್ಲಿ ಸ್ಪಿನ್ನರ್ಸ್ ಪ್ರಾಬಲ್ಯ ಸಾಧಿಸಿಬಹುದು. ಸಿಎಸ್‌ಕೆ ಪರ ಪ್ರಮುಖ ಮೂರು ಸ್ಪಿನ್ ಅಸ್ತ್ರಗಳಿವೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ನೂರ್ ಅಹ್ಮದ್ ಸಿಎಸ್‌ಕೆ ತಂಡದ ಬಲವಾಗಿದ್ದಾರೆ.

ಡ್ರೀಮ್ ಇಲೆವೆನ್

ಚೆನ್ನೈ ಸೂಪರ್ ಕಿಂಗ್ಸ್ : ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರ್ರಾನ್, ಎಂಎಸ್ ಧೋನಿ(ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್, ರಾಹುಲ್ ತ್ರಿಪಾಠಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಾಸಿಖ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ದೇವದತ್ ಪಡಿಕ್ಕಲ್.

Story first published: Thursday, March 27, 2025, 13:37 [IST]
Other articles published on Mar 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+