Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆವಾಲ್ಡ್ ಬ್ರೆವಿಸ್‌ಗೆ ಡಿಆರ್‌ಎಸ್‌ ಪಡೆಯಲು ನಿರಾಕರಿಸಿದ್ದು ಏಕೆ?

ಈ ಬಾರಿಯ ಐಪಿಎಲ್‌ನಲ್ಲಿ ಅಂಪೈರ್‍‌ ನಿರ್ಣಯಗಳು ಬಹು ಚರ್ಚೆಗೆ ಗ್ರಾಸವಾಗಿವೆ. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವಣ ಪಂದ್ಯವೂ ವಿವಾದಕ್ಕೆ ಈಡು ಮಾಡಿಕೊಟ್ಟಿದೆ. ಹಾಗಿದ್ದರೆ ಈ ಬಾರಿ ಅಂಪೈರ್‌ ಮಾಡಿದ ಎಡವಟ್ಟು ಏನು? ಇದರಿಂದ ಯಾವ ಆಟಗಾರರಿಗೆ ಹಾನಿ ಯಾಗಿದ್ದು ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್‌ಸಿಬಿ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದಾಗ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 16.2 ಓವರ್‌ನಲ್ಲಿ ಆಯುಷ್‌ ಮಾತ್ರೆ (94) ಔಟ್ ಆಗುತ್ತಿದ್ದಂತೆ, ಕ್ರೀಸ್‌ಗೆ ಡೆವಾಲ್ಡ್ ಬ್ರೆವಿಸ್ ಮೈದಾನಕ್ಕೆ ಬಂದರು. ಇವರು ಲುಂಗಿ ಎನ್‌ಗಿಡಿ ಅವರ ಎಸೆತದಲ್ಲಿ ಔಟ್ ಆದರು. ಆದರೆ ಇವರಿಗೆ ಡಿಆರ್‌ಎಸ್‌ ತೆಗೆದುಕೊಳ್ಳಲು ಆಗಲಿಲ್ಲ. ಕಾರಣ ಏನು ಎಂಬ ಬಗ್ಗೆ ವಿವರ ಇಲ್ಲಿದೆ.

RCB vs CSK Umpiring Controversy No DRS for Brevis Sparks Debate After Ngidi s Full Toss Wicket

ಲುಗಿಂ ಎನ್‌ಗಿಡಿ ಎಸೆದ 17ನೇ ಓವರ್‌ನ ಮೂರನೇ ಎಸೆತದಲ್ಲಿ ಡೆವಾಲ್ಡ್‌ ಬ್ರಾವಿಸ್‌ ಫುಲ್‌ ಟಾಸ್‌ ಎದುರಿಸುವಲ್ಲಿ ವಿಫಲರಾಗಿ ಎಲ್‌ಬಿಡಬ್ಲ್ಯೂ ಬಲಗೆ ಬಿದ್ದರು. ಆನ್‌ ಫೀಲ್ಡ್‌ ಅಂಪೈರ್‌ ಔಟ್ ಎಂದು ನೀಡಿದರು. ಆದರೆ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಯಿತು. ಆದರೆ ಅಂಪೈರ್ ಮಾತ್ರ ಇವರ ನಿರ್ಧಾರವನ್ನು ತಿರಸ್ಕರಿಸಿ ಮೈದಾನದಿಂದ ಹೊರ ಕಳುಹಿಸಿದರು. ಹಾಗಿದ್ದರೆ ಹೀಗೆ ಆಗಿದ್ದು ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.

ಅಂಪೈರ್‌ ಎಡವಟ್ಟು

ಡೆವಾಲ್ಡ್‌ ಬ್ರಾವಿಸ್‌ ಎಲ್‌ಬಿ ಔಟ್‌ ಆದಾಗ ದೊಡ್ಡ ಪರದೆಯ ಮೇಲೆ ಟೈಮರ್ ಕಾಣಿಸಿಕೊಳ್ಳದೇ ಸಮಸ್ಯೆಯನ್ನು ಸೃಷ್ಟಿಸಿತು. ಡೆವಾಲ್ಡ್‌ ಬ್ರಾವಿಸ್‌ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಅದಕ್ಕೂ ತಲೆ ಕಡಿಸಿಕೊಳ್ಳದೆ ರನ್ ಓಡಲು ಮುಂದಾದರು. ಬಳಿಕ ರವೀಂದ್ರ ಜಡೇಜಾ ಅವರನ್ನುಸಂಪರ್ಕಿಸಿ ಡಿಆರ್‌ಎಸ್‌ ಮೇಲ್ಮನವಿ ಸಲ್ಲಿಸಿದರು. ಆಗಲೇ ವಿವಾದ ಹುಟ್ಟಿಕೊಂಡಿತು.

ಅಸಲಿಗೆ ಡೇವಾಲ್ಡ್‌ ಬ್ರೇವಿಸ್‌ ಡಿಆರ್‌ಎಸ್‌ ತೆಗೆದುಕೊಂಡಾಗ ಸಮಯ ಮೀರಿತ್ತು. ಅಂದಹಾಗೆ ಫೀಲ್ಡ್ ಅಂಪೈರ್‌ ಔಟ್ ಎಂದು ತೀರ್ಪು ನೀಡಿದ ಬಳಿಕ ಸಮಯ ಆರಂಭಾಗುತ್ತದೆ. ಆದರೆ ಬಿಗ್‌ ಸ್ಕ್ರಿನ್‌ ಮೇಲೆ ಕಾಣದೆ ಎಡವಟ್ಟು ಸೃಷ್ಟಿಯಾಯಿತು. ಈ ಒಂದೇ ಓವರ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಎರಡು ವಿಕೆಟ್‌ಗಳನ್ನು ಪಡೆದ ಲುಂಗಿ ಎನ್‌ಗಿಡಿ ಅಬ್ಬರಿಸಿದರು. ಅಲ್ಲದೆ ಆರ್‌ಸಿಬಿ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್‌ ಮಾಡುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದರು.

ಪಂದ್ಯ ಫಲಿತಾಂಶ

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್‌ ಸೇರಿಸಿ ಸೋಲು ಕಂಡಿತು. ಈ ಪಂದ್ಯದಲ್ಲಿ ಮಹತ್ವದ 2 ಅಂಕ ಕಲೆ ಹಾಕುತ್ತಿದ್ದಂತೆ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿತು.

Story first published: Sunday, May 4, 2025, 9:47 [IST]
Other articles published on May 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+