For Quick Alerts
ALLOW NOTIFICATIONS  
For Daily Alerts
 

RCB vs CSK: ಐಪಿಎಲ್‌ನಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

ಶನಿವಾರ, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ ವಿರುದ್ಧ ಐಪಿಎಲ್ 2024ರ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೆಲವು ದೊಡ್ಡ ಶಾಟ್‌ಗಳನ್ನು ಬಾರಿಸುವ ಉತ್ಸಾಹದಲ್ಲಿ ಕಂಡುಬಂದರು.

ಸೂಪರ್‌ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 98 ಮೀಟರ್ ಸಿಕ್ಸರ್ ಒಂದನ್ನು ಬಾರಿಸಿದರು, ಅದು ಐಕಾನಿಕ್ ಸ್ಟೇಡಿಯಂನ ಛಾವಣಿಗೆ ಬಡಿಯಿತು. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಸಂತೋಷದಿಂದ ಘರ್ಜಿಸಿದರು.

ಎರಡೂ ತಂಡಗಳಿಗೆ ಆವೃತ್ತಿಯ ಬಹು ನಿರೀಕ್ಷಿತ ಅಂತಿಮ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದ ನಂತರ ಬೌಲಿಂಗ್ ಮಾಡಲು ನಿರ್ಧರಿಸಿದರು. ಬಳಿಕ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಆರ್‌ಸಿಬಿ ತಂಡಕ್ಕೆ ಹೆಚ್ಚು ಅಗತ್ಯವಿರುವ ಆಕ್ರಮಣಕಾರಿ ಆವೇಗವನ್ನು ಒದಗಿಸಿದರು.

RCB vs CSK Virat Kohli Became the First Player to Score 3 000 Runs At a Single Venue In IPL

ಮಳೆಯ ಬೆದರಿಕೆಯೊಂದಿಗೆ, ವಿರಾಟ್ ಕೊಹ್ಲಿ ಅವರು ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಸಿಎಸ್‌ಕೆ ಬೌಲರ್ ತುಷಾರ್ ದೇಶಪಾಂಡೆ ಅವರ ಬೌಲಿಂಗ್‌ನಲ್ಲಿ ಡೀಪ್ ಸ್ಕ್ವೇರ್-ಲೆಗ್ ಕಡೆಗೆ ಹೊಡೆದ ವಿರಾಟ್ ಕೊಹ್ಲಿ, ಅದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ ಒಂದರ ಛಾವಣಿಗೆ ಚೆಂಡು ಬಡಿಯಿತು.

ಆದಾಗ್ಯೂ, ಆರ್‌ಸಿಬಿ 0 ವಿಕೆಟ್‌ಗೆ 31 ರನ್ ಗಳಿಸಿದ್ದಾಗ ಮೂರನೇ ಓವರ್‌ನ ನಂತರ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆಟ ಮುಂದುವರೆಸಿದ ಬಳಿಕ ಕೊಹ್ಲಿ ಮತ್ತು ಡು ಪ್ಲೆಸಿಸ್ ಇಬ್ಬರಿಗೂ ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು.

ಇದೇ ವೇಳೆ ವಿರಾಟ್ ಕೊಹ್ಲಿಗೆ ಇದು ಮತ್ತೊಂದು ದಾಖಲೆಯ ಪಂದ್ಯವಾಗಿತ್ತು. ಏಕೆಂದರೆ, ಐಪಿಎಲ್‌ನಲ್ಲಿ ಒಂದೇ ಮೈದಾನದಲ್ಲಿ 3,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿರಾಟ್ ಕೊಹ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಆಡಿದ 89 ಪಂದ್ಯಗಳಲ್ಲಿ 3005 ರನ್ ಗಳಿಸಿದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 80 ಪಂದ್ಯಗಳಲ್ಲಿ 2295 ರನ್ ಗಳಿಸಿರುವ ರೋಹಿತ್ ಶರ್ಮಾ ಅವರಿಗಿಂತ ಕೊಹ್ಲಿ ಸಾಕಷ್ಟು ಮುಂದಿದ್ದಾರೆ.

RCB vs CSK Virat Kohli Became the First Player to Score 3 000 Runs At a Single Venue In IPL

ಐಪಿಎಲ್‌ನಲ್ಲಿ ಒಂದೇ ಸ್ಥಳದಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

1. ವಿರಾಟ್ ಕೊಹ್ಲಿ - ಬೆಂಗಳೂರಿನಲ್ಲಿ 89 ಪಂದ್ಯಗಳಲ್ಲಿ 3005* ರನ್

2. ರೋಹಿತ್ ಶರ್ಮಾ - ಮುಂಬೈನಲ್ಲಿ 80 ಪಂದ್ಯಗಳಲ್ಲಿ 2295 ರನ್

3. ಎಬಿ ಡಿವಿಲಿಯರ್ಸ್ - ಬೆಂಗಳೂರಿನಲ್ಲಿ 61 ಪಂದ್ಯಗಳಲ್ಲಿ 1960 ರನ್

4. ಡೇವಿಡ್ ವಾರ್ನರ್ - ಹೈದರಾಬಾದ್‌ನಲ್ಲಿ 32 ಪಂದ್ಯಗಳಲ್ಲಿ 1623 ರನ್

5. ಕ್ರಿಸ್ ಗೇಲ್ - ಬೆಂಗಳೂರಿನಲ್ಲಿ 45 ಪಂದ್ಯಗಳಲ್ಲಿ 1561 ರನ್

ಶನಿವಾರದ ಮಳೆಯ ಬೆದರಿಕೆಯ ನಡುವೆಯೂ ವಿರಾಟ್ ಕೊಹ್ಲಿ ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಉದ್ದೇಶದಿಂದ ಬ್ಯಾಟಿಂಗ್ ಪ್ರಾರಂಭಿಸಿದರು ಮತ್ತು ಅಂತಿಮವಾಗಿ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಸಿಎಸ್‌ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಆಡಿದ 14 ಪಂದ್ಯಗಳಲ್ಲಿ 64.36ರ ಸರಾಸರಿ ಮತ್ತು 155.60ರ ಸ್ಟ್ರೈಕ್ ರೇಟ್‌ನಲ್ಲಿ 708 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆರೆಂಜ್ ಕ್ಯಾಪ್ ಹೊಂದಿದ್ದಾರೆ.

ಅಲ್ಲದೆ, ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ 35 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದು ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಿಕೋಲಸ್ ಪೂರನ್ (36) ಅವರಿಗಿಂತ ಒಂದು ಕಡಿಮೆ ಆಗಿದೆ.

Story first published: Sunday, May 19, 2024, 6:32 [IST]
Other articles published on May 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+