Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs CSK: ಚೆನ್ನೈ ವಿರುದ್ಧ ಹೇಗಿದೆ ವಿರಾಟ್‌ ಕೊಹ್ಲಿ ದಾಖಲೆ?

ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಯೋಜನೆ ಆರ್‌ಸಿಬಿ ತಂಡದ್ದಾಗಿದೆ. ಸಿಎಸ್‌ಕೆ ಹ್ಯಾಟ್ರಿಕ್‌ ಸೋಲಿನ ಭೀತಿ ಕಾಡುತ್ತಿದೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೇಲೆ ನೆಟ್ಟಿರಲಿವೆ.

ವಿರಾಟ್‌ ಕೊಹ್ಲಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಆರಂಭವನ್ನು ಕಂಡಿದ್ದಾರೆ. ಇವರು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಬ್ಬರಿಸಿದ್ದರು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್‌ 38 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 69 ರನ್‌ ಬಾರಿಸಿದ್ದರು. ಇವರು ಇದೇ ಭರ್ಜರಿ ಫಾರ್ಮ್‌ ಐಪಿಎಲ್‌ನಲ್ಲಿ ಮುಂದುವರಿಸುವ ಇರಾದೆಯನ್ನು ಹೊಂದಿದ್ದಾರೆ.

RCB vs CSK

ಚೆನ್ನೈ ಸುಪರ್ ಕಿಂಗ್ಸ್‌ ವಿರುದ್ಧವೂ ವಿರಾಟ್ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಇವರು ಸಿಎಸ್‌ಕೆ ವಿರುದ್ಧ ಆಡಿದ 35 ಪಂದ್ಯಗಳ 34 ಇನಿಂಗ್ಸ್‌ಗಳಲ್ಲಿ 38ರ ಸರಾಸರಿಯಲ್ಲಿ 1146 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 127 ಆಗಿದೆ. ಅಲ್ಲದೆ ಇವರು 10 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ವಿರಾಟ್‌ ಚೆನ್ನೈ ವಿರುದ್ಧ 83 ಬೌಂಡರಿ, 48 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

2 ಸಿಕ್ಸರ್‌

ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಇನ್ನು ಎರಡು ಸಿಕ್ಸರ್ ಬಾರಿಸುವಲ್ಲಿ ಸಫಲರಾದಲ್ಲಿ ಒಂದೇ ತಂಡದ ವಿರುದ್ಧ 50 ಸಿಕ್ಸರ್‌ಗಳನ್ನು ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇವರಿಗಿಂತ ಮೊದಲ ಕ್ರಿಸ್‌ ಗೇಲ್‌, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಒಂದೇ ತಂಡದ ವಿರುದ್ಧ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

RCB vs CSK

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ತಂಡ ಭರ್ಜರಿ ಜಯ ಸಾಧಿಸಿತ್ತು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಪಡೆ 50 ರನ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್‌ 31 ರನ್‌ ಬಾರಿಸಿದ್ದರು. ಇದೇ ಲೀಗ್‌ನ 52ನೇ ಪಂದ್ಯದಲ್ಲಿ ಆರ್‌ಸಿಬಿ 2 ವಿಕೆಟ್‌ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್‌ 62 ರನ್‌ ಸಿಡಿಸಿದ್ದರು. ಹೀಗಾಗಿ ಇವರ ಮೇಲೆ ವಿಶ್ವಾಸ ಹೆಚ್ಚಿದೆ.

Story first published: Saturday, April 4, 2026, 17:41 [IST]
Other articles published on Apr 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+