ಡೆತ್ ಓವರ್‌ಗಳಲ್ಲಿ ರೊಮಾರಿಯೊ ಶೆಫರ್ಡ್ ಬಾರಿಸಿದ ಅಮೋಘ ಸಿಕ್ಸರ್‌ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18ನೇ ಆವೃತ್ತಿಯ ಐಪಿಎಲ್‌ನ 52ನೇ ಪಂದ್ಯದಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 213 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 214 ರನ್ ಸವಾಲಿನ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಯುವ ಬ್ಯಾಟರ್ ಜಾಕಬ್ ಬೆತೆಲ್ ಹಾಗೂ ವಿರಾಟ್ ಕೊಹ್ಲಿ ಸೊಗಸಾದ ಆರಂಭವನ್ನು ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಸಿಎಸ್‌ಕೆ ಬೌಲರ್‌ಗಳು ಆರಂಭದಲ್ಲಿ ವಿಫಲರಾದರು. ಈ ಜೋಡಿ 4.3 ಓವರ್‌ಗಳಲ್ಲಿಅರ್ಧಶತಕದ ಜೊತೆಯಾಟವನ್ನು ನೀಡಿತು. ಹಿಂದಿನ ಪಂದ್ಯದಲ್ಲಿ ಟೀಸರ್ ತೋರಿಸಿದ ಬೆತೆಲ್ ಅಮೋಘ ಬ್ಯಾಟಿಂಗ್ ನಡೆಸಿದರು.

ಜಾಕಬ್ ಬೇತೆಲ್ ಮೊದಲ ಓವರ್‌ನಿಂದ ಆಕ್ರಮಣಕಾರಿ ಆಟವನ್ನು ನಡೆಸಿದರು. ಖಲೀಲ್ ಅಹ್ಮದ್ ಅವರ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿ ಅಬ್ಬರಿಸಿದರು. ಅಲ್ಲದೆ ತಮ್ಮ ಆಕ್ರಮಣಕಾರಿ ಆಟವನ್ನು ಪವರ್ ಪ್ಲೇನಲ್ಲಿ ಮುಂದುವರೆಸಿದರು. ಆರ್‌ಸಿಬಿ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭಭನ್ನು ಪಡೆಯುವಲ್ಲಿ ನೆರವಾದ್ರು. ಈ ಜೋಡಿ ಮೊದಲ ಆರು ಓವರ್‌ಗಳಲ್ಲಿ 71 ರನ್ ಸೇರಿಸಿದೆ.
ಇನ್ನು ವಿರಾಟ್ ಕೊಹ್ಲಿ ಸಹ ಆಕ್ರಮಣಕಾರಿ ಆಟವನ್ನು ಆಡಿ ಗಮನ ಸೆಳೆದರು. ಇನ್ನು 21 ವರ್ಷದ ಇಂಗ್ಲೆಂಡ್ ತಂಡದ ಯುವ ಆಟಗಾರ ಜಾಕಬ್ ಬೇತೆಲ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ ಆಟದ ಪ್ರದರ್ಶನ ನೀಡಿ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದರು. 33 ಎಸೆತಗಳಲ್ಲಿ 55 ರನ್ ಬಾರಿಸಿ ಡೇವಲ್ಡ್ ಬ್ರೇವಿಸ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದ್ರು. ಈ ವೇಳೆ 8 ಬೌಂಡರಿ, 2 ಸಿಕ್ಸರ್ ಬಾರಿಸಿ ಗಮನ ಸೆಳೆದರು.
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಕ್ಲಾಸಿಕ್ ಫಾರ್ಮ್ ಮುಂದುವರೆಸಿದರು. ಇವರು ಐಪಿಎಲ್‌ನಲ್ಲಿ 62ನೇ ಅರ್ಧಶತಕ ಬಾರಿಸಿದರು. ಇವರು 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇವರು 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿ ಸ್ಯಾಮ್ ಕರನ್ ಗೆ ಕ್ಯಾಚ್ ನೀಡಿದರು.
ದೇವದತ್ ಪಡಿಕ್ಕಲ್ (17), ರಜತ್ ಪಟಿದಾರ್ (11), ಜಿತೇಶ್ ಶರ್ಮಾ (7) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ರೊಮಾರಿಯೊ ಶೆಫರ್ಡ್ 19ನೇ ಓವರ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು ಈ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಖಲೀಲ್ ಅಹ್ಮದ್ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ 33 ರನ್ ಸಿಡಿಸಿ ಮಿಂಚಿದ್ರು. ಈ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ 4 ಸಿಕ್ಸರ್, 2 ಬೌಂಡರಿ ಬಾರಿಸಿದರು.
ಆರ್‌ಸಿಬಿ ತಂಡ: ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ಯಶ್ ದಯಾಲ್
ಚೆನ್ನೈ ತಂಡ: ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ದೀಪಕ್ ಹೂಡಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತೀಶ ಪತಿರಾನ