Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಹೊಸ ಅಧ್ಯಾಯದಲ್ಲಿ ಸತತ 5ನೇ ಗೆಲುವು ಕಂಡ ಆರ್‌ಸಿಬಿ; ಪ್ಲೇ ಆಫ್‌ ರೇಸ್‌ನಿಂದ ಡೆಲ್ಲಿ ಔಟ್‌!

ಮೇ 12 ಭಾನುವಾರ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಜಯ ಸಾಧಿಸಿದೆ. ಈ ಮೂಲಕ ಪ್ರಸ್ತುತ ಐಪಿಎಲ್‌ನಲ್ಲಿ ಸತತ 5ನೇ ಗೆಲುವು ಸಾಧಿಸಿದೆ.

ಆರ್‌ಸಿಬಿ ಸಾಂಘಿಕ ಬೌಲಿಂಗ್‌ ದಾಳಿಗೆ ತಲೆ ಬಾಗಿದ ಡೆಲ್ಲಿ ಆಲೌಟ್‌ ಆಗುವ ಮೂಲಕ ಸೋಲಿಗೆ ಶರಣಾಯಿತು. ಮತ್ತೊಂದೆಡೆ ಡೆಲ್ಲಿ ನಾಯಕ ಅಕ್ಸರ್ ಪಟೇಲ್‌ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. 19.1 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ 140 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಆರ್‌ಸಿಬಿ 47 ರನ್‌ಗಳ ಭರ್ಜರಿ ಜಯ ಕಂಡಿದೆ.

RCB vs DC IPL 2024 Royal Challengers Bengaluru win against Delhi Capitals

ಆರ್‌ಸಿಬಿ ನೀಡಿದ 188 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಡೆಲ್ಲಿ 30 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೇವಿಡ್‌ ವಾರ್ನರ್‌ (1), ಅಭಿಷೇಕ್ ಪೊರೆಲ್ (2), ಕುಮಾರ್ ಕುಶಾಗ್ರಾ (2) ಹಾಗು ಜೇಕ್ ಫ್ರೇಸರ್-ಮೆಕ್‌ಗುರ್ಕ್ (21) ಬಹು ಬೇಗ ಔಟ್‌ ಆಗಿ ನಿರಾಸೆ ಮೂಡಿಸಿದರು.

ಬಳಿಕ ಒಂದಾದ ನಾಯಕ ಅಕ್ಸರ್‌ ಪಟೇಲ್‌ ಮತ್ತು ಶಾಯ್ ಹೋಪ್ ಚೇತರಿಕೆ ಆಟವಾಟಡಿದರು. ಆದರೆ ಶಾಯ್ ಹೋಪ್ 29 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ನಂತರ ಬಂದ ಯಾವುದೇ ಬಂದ ಡೆಲ್ಲಿ ಬ್ಯಾಟರ್‌ಗಳು ಯಾರೊಬ್ಬರು ಸ್ಥಿರ ಪ್ರದರ್ಶನ ನೀಡಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ (3) ರಸಿಖ್ ದಾರ್ ಸಲಾಂ (10), ಕುಲದೀಪ್ ಯಾದವ್ (6) ಮತ್ತು ಮುಕೇಶ್ ಕುಮಾರ್ (3) ಡೆಲ್ಲಿ ಗೆಲುವಿಗೆ ಶ್ರಮಿಸಲಿಲ್ಲ. ಇಶಾಂತ್‌ ಶರ್ಮಾ ಅಜೇಯರಾಗುಳಿದರು.

ಡೆಲ್ಲಿ ನಾಯಕನ ಏಕಾಂಗಿ ಹೋರಾಟ ವ್ಯರ್ಥ

ಡೆಲ್ಲಿ ತಂಡದ ವಿಕೆಟ್‌ಗಳು ಒಂದು ಕಡೆ ಬೀಳುತ್ತಿದರೆ, ನಾಯಕ ಅಕ್ಸರ್‌ ಪಟೇಲ್‌ ಅಬ್ಬರ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಅಕ್ಸರ್‌ ಎದುರಿಸಿದ 39 ಎಸೆತಗಳಲ್ಲಿ 3 ಸಿಕ್ಸರ್‌ ಹಾಗು 5 ಬೌಂಡರಿ ಮೂಲಕ 57 ರನ್‌ ಬಾರಿಸಿ ಡೆಲ್ಲಿ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಆದರೆ ಅಕ್ಸರ್‌ ಹೋರಾಟಕ್ಕೆ ಉಳಿದ ಬ್ಯಾಟರ್‌ಗಳು ಸಾಥ್‌ ನೀಡಲಿಲ್ಲ. ಹೀಗಾಗಿ ಡೆಲ್ಲಿ ಆಲೌಟ್‌ ಆಯಿತು.

ಆರ್‌ಸಿಬಿ ಪರ ಬೊಂಬಾಟ್‌ ಬೌಲಿಂಗ್‌ ಪ್ರದರ್ಶನ ಕಂಡು ಬಂತು. ಯಶ್ ದಯಾಳ್ 3 ವಿಕೆಟ್‌ ಕಬಳಿಸಿ ಮಿಂಚಿದರು. ಲಾಕಿ ಫರ್ಗುಸನ್ 2 ವಿಕೆಟ್‌ ಉರುಳಿಸದರೆ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಕ್ಯಾಮೆರಾನ್ ಗ್ರೀನ್ 1 ವಿಕೆಟ್‌ ಪಡೆದುಕೊಂಡರು.

Story first published: Sunday, May 12, 2024, 23:23 [IST]
Other articles published on May 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+