Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT IPL 2026 Final: ಪ್ಲೇಯಿಂಗ್ ಇಲೆವೆನ್‌, ಪಿಚ್‌ ವರದಿ, ಸಮಯ, ನೇರಪ್ರಸಾರದ ಮಾಹಿತಿ

ಹಾಲಿ ಚಾಂಪಿಯನ್ ಪಟ್ಟವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ಹಾಗೂ ಗುಜರಾತ್‌ ಟೈಟಾನ್ಸ್ ತಂಡಗಳು 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು, ಪಂದ್ಯ ರೋಚಕತೆ ಹೆಚ್ಚಿಸಿದೆ. ಬೆಸ್ಟ್‌ ಬೌಲಿಂಗ್‌ ಲೈನ್‌ ಅಪ್‌ ಹೊಂದಿರುವ ಎರಡೂ ತಂಡಗಳ ನಡುವಣ ಕಾದಾಟ ಎಲ್ಲರ ಚಿತ್ತ ಕದ್ದಿದೆ. 19ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ.

ಈಗಾಗಲೇ ಆರ್‌ಸಿಬಿ ಹಾಗೂ ಜಿಟಿ ತಂಡಗಳು ತಲಾ ಒಂದು ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಈ ಬಾರಿ ಯಾರೇ ಗೆದ್ದರೂ ಎರಡನೇ ಬಾರಿ ಟ್ರೋಫಿಗೆ ಮುತ್ತಿಡಲಿದೆ. ಇನ್ನು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್‌ ದಾಖಲೆ ಅಮೋಘವಾಗಿದೆ. ಆರ್‌ಸಿಬಿ ಸಹ ತನ್ನ ಸಂಘಟಿತ ಆಟದ ಮೇಲೆ ನಂಬಿಕೆ ಇಟ್ಟಿದೆ. ಫೈನಲ್‌ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಲ್ಲುವ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.

RCB vs GT IPL 2026 Final

ಫೈನಲ್‌ ತಲುಪಿದ್ದು ಹೇಗೆ?

ಆರ್‌ಸಿಬಿ ಹಾಗೂ ಜಿಟಿ ತಂಡಗಳು ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳನ್ನು ಪಡೆದು ಪ್ಲೇ ಆಫ್‌ ಪ್ರವೇಶಿಸಿದವು. ಆರ್‌ಸಿಬಿ ಮೊದಲ ಸ್ಥಾನ, ಜಿಟಿ ಎರಡನೇ ಸ್ಥಾನ ಪಡೆದಿದ್ದರಿಂದ ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿ, ನೇರವಾಗಿ ಫೈನಲ್‌ ಪ್ರವೇಶಿಸಿತು. ಸೋತ ಜಿಟಿ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು.

RCB vs GT IPL Final: ಪ್ರಶಸ್ತಿಗಾಗಿ ಆರ್‌ಸಿಬಿ, ಜಿಟಿ ಫೈಟ್‌: ಎರಡನೇ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು

RCB vs GT IPL Final: ಪ್ರಶಸ್ತಿಗಾಗಿ ಆರ್‌ಸಿಬಿ, ಜಿಟಿ ಫೈಟ್‌: ಎರಡನೇ ಪ್ರಶಸ್ತಿ ಕನಸಿನಲ್ಲಿ ಬೆಂಗಳೂರು

ಪಿಚ್ ಯಾರಿಗೆಲ್ಲಾ ಅವಕಾಶ ನೀಡಬಹುದು?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ನಂಬರ್ 6ರಲ್ಲಿ ಈ ಫೈನಲ್ ಪಂದ್ಯ ನಡೆಯಲಿದೆ. ಇದು ಲೀಗ್ ಹಂತದಲ್ಲಿ ಇದೇ ತಂಡಗಳು ಮುಖಾಮುಖಿಯಾಗಿದ್ದಾಗ ಬಳಸಿದ ಅದೇ ಪಿಚ್ ಆಗಿದೆ. ಅಲ್ಲದೆ ಈ ಪಿಚ್‌ ಮಿಶ್ರ ಮಣ್ಣಿನ ಪಿಚ್ ಆಗಿದೆ. ಈ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ ಮತ್ತು ಔಟ್‌ಫೀಲ್ಡ್ ತುಂಬಾ ವೇಗವಾಗಿದೆ. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಪಿಚ್‌ನಿಂದ ಸ್ವಲ್ಪ ನೆರವು ಸಿಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ?

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್/ ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಮತ್ತು ಸುಯಾಶ್ ಶರ್ಮಾ, ರಾಸಿಖ್ ಸಲಾಮ್

IPL 2026: ಪ್ರಶಸ್ತಿಯನ್ನು ಡಿಫೆಂಡ್‌ ಮಾಡಿಕೊಳ್ಳಲು ಆರ್‌ಸಿಬಿ ಫೈನಲ್‌ವರೆಗೆ ನಡೆದು ಬಂದ ಹಾದಿ

IPL 2026: ಪ್ರಶಸ್ತಿಯನ್ನು ಡಿಫೆಂಡ್‌ ಮಾಡಿಕೊಳ್ಳಲು ಆರ್‌ಸಿಬಿ ಫೈನಲ್‌ವರೆಗೆ ನಡೆದು ಬಂದ ಹಾದಿ

ಗುಜರಾತ್ ಟೈಟಾನ್ಸ್ ಯಾವ ಆಟಗಾರರಿಗೆ ಅವಕಾಶ ನೀಡಬಹುದು?

ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾಹರುಖ್ ಖಾನ್, ಜಾನ್ಸನ್ ಚಾರ್ಲ್ಸ್/ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ, ಮತ್ತು ಮೊಹಮ್ಮದ್ ಸಿರಾಜ್.

ಆರ್‌ಸಿಬಿ ಹಾಗೂ ಜಿಟಿ ನಡುವಣ ಫೈನಲ್‌ ಪಂದ್ಯವನ್ನು ನೋಡುವುದು ಎಲ್ಲಿ?

19ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದಾಗಿದೆ.

19ನೇ ಆವೃತ್ತಿ ಐಪಿಎಲ್‌ ಫೈನಲ್‌ ಪಂದ್ಯ ಎಷ್ಟು ಗಂಟೆಗೆ ಆರಂಭವಾಗುತ್ತದೆ?

ಆರ್‌ಸಿಬಿ ಹಾಗೂ ಜಿಟಿ ನಡುವಣ ಫೈನಲ್‌ ಪಂದ್ಯ 7.30ಕ್ಕೆ ಆರಂಭವಾಗುತ್ತದೆ. ಪಂದ್ಯಕ್ಕೂ ಅರ್ಧಗಂಟೆಗೂ ಮುನ್ನ ಟಾಸ್‌ ನಡೆಯಲಿದೆ.

Story first published: Sunday, May 31, 2026, 8:05 [IST]
Other articles published on May 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+