Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT: ಬೆಂಗಳೂರಿನಲ್ಲಿ ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯ- ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಈ ಆವೃತ್ತಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಎರಡನೇ ಬಾರಿ ಟ್ರೋಫಿ ಎತ್ತುವತ್ತ ದಾಪುಗಾಲು ಇಟ್ಟಿದೆ. ಬೆಂಗಳೂರು ತಂಡ ತನ್ನ ತವರು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲು ಕಣಕ್ಕೆ ಇಳಿಯಲಿದೆ. ತವರಿನಲ್ಲಿ ಬೆಂಗಳೂರಿನ ಹುಡುಗ ಪ್ರಸಿದ್ಧ್ ಕೃಷ್ಣ ಗುಜರಾತ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.

ಆರ್‌ಸಿಬಿ ಆಡಿದ 6 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ ಟೈಟಾನ್ಸ್ ಆಡಿದ 6 ಪಂದ್ಯಗಳಲ್ಲಿ 3 ಜಯ, 3 ಸೋಲು ಕಂಡಿದ್ದು 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲು ಎರಡೂ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಆರ್‌ಸಿಬಿ ಬ್ಯಾಟಿಂಗ್ ಬಲಾಢ್ಯವಾಗಿದ್ದು, ಗುಜರಾತ್ ಟೈಟಾನ್ಸ್ ತಂಡದ ಬಲಿಷ್ಠ ಬೌಲಿಂಗ್‌ ದಾಳಿಯನ್ನು ಎದುರಿಸಲಿದೆ. ಶುಕ್ರವಾರ ನಡೆಯಲಿರುವ ಕಾದಾಟದಲ್ಲಿ ಬ್ಯಾಟರ್‌ಗಳ ಕೈ ಮೇಲಾಗುತ್ತದೋ, ಬೌಲರ್‌ಗಳ ಕೈ ಮೇಲಾಗುತ್ತದೋ ಕಾದು ನೋಡಬೇಕಿದೆ.

RCB vs GT

ಪಿಚ್‌ ಯಾರಿಗೆ ಸಹಾಯ ಮಾಡಲಿದೆ?

ಆರ್‌ಸಿಬಿ ಹಾಗೂ ಜಿಟಿ ನಡುವಣ ಪಂದ್ಯ, ಹಿಂದೆ ನಡೆದ (ಡೆಲ್ಲಿ ವಿರುದ್ಧ ಆರ್‌ಸಿಬಿ) ಪಿಚ್‌ನಲ್ಲೇ ನಡೆಯಲಿದೆ. ಈ ಪಿಚ್‌ನ ಮೇಲೆ ಸಿಎಸ್‌ಕೆ ವಿರುದ್ಧ ಸಂಜೆ ನಡೆದಾಗ ಆರ್‌ಸಿಬಿ 249 ರನ್ ಗಳಿಸಿತ್ತು. ಡೆಲ್ಲಿ ವಿರುದ್ಧ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತ ಹರಿದು ಬಂದಿತ್ತು. ಪಿಚ್ ಸಿದ್ಧಪಡಿಸಲು ಆರು ದಿನಗಳ ಕಾಲಾವಕಾಶ ಸಿಕ್ಕಿದ್ದು, ಪಿಚ್‌ಗೆ ನೀರು ಹಾಕಿ ಸಮಾನವಾಗಿ ಹುಲ್ಲು ಇರುವಂತೆ ನೋಡಿಕೊಳ್ಳಲಾಗಿದೆ. ಈ ಪಂದ್ಯದಲ್ಲೂ ರನ್‌ ಸುರಿಮಳೆ ಹರಿದು ಬರುವ ಸಾಧ್ಯತೆ ಇದೆ.

ಒಟ್ಟಾರೆ ಐಪಿಎಲ್‌ನಲ್ಲಿ ಉಭಯ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಿವೆ?

ಆರ್‌ಸಿಬಿ ಹಾಗೂ ಜಿಟಿ ತಂಡಗಳು ಒಟ್ಟಾರೆ ಐಪಿಎಲ್‌ನಲ್ಲಿ 6 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದಿವೆ.

ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್‌ ಹೇಗಿರಬಹುದು?

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್/ಜಾಕೋಬ್ ಬೆಥೆಲ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಖ್ ದಾರ್.

ಗುಜರಾತ್ ಟೈಟಾನ್ಸ್ ಯಾರಿಗೆಲ್ಲಾ ಅವಕಾಶ ನೀಡಬಹುದು?

ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್/ಕುಮಾರ್ ಕುಶಾಗ್ರ, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಶೋಕ್ ಶರ್ಮಾ.

ಆರ್‌ಸಿಬಿ ಹಾಗೂ ಗುಜರಾತ್ ನಡುವಣ ಪಂದ್ಯವನ್ನು ನೋಡುವುದು ಎಲ್ಲಿ?

19ನೇ ಆವೃತ್ತಿಯ ಐಪಿಎಲ್‌ನ 34ನೇ ಪಂದ್ಯದಲ್ಲಿ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜೊಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದು.

ಆರ್‌ಸಿಬಿ, ಜಿಟಿ ಪಂದ್ಯ ನಡೆಯುವುದು ಯಾವಾಗ?

ಆರ್‌ಸಿಬಿ ಹಾಗೂ ಜಿಟಿ ನಡುವಣ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಟಾಸ್ ಅರ್ಧ ಗಂಟೆ ಮುಂಚೆ ನಡೆಯಲಿದೆ.

Story first published: Friday, April 24, 2026, 8:05 [IST]
Other articles published on Apr 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+