Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT: ಅಗ್ರಸ್ಥಾನದ ಮೇಲೆ ಆರ್‌ಸಿಬಿ ಕಣ್ಣು- ಸಮಯ, ಪಿಚ್ ವರದಿ, ನೇರಪ್ರಸಾರ, ಪ್ಲೇಯಿಂಗ್ ಇಲೆವೆನ್ ಮಾಹಿತಿ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಘನತೆಗೆ ತಕ್ಕ ಆಟವನ್ನು 19ನೇ ಆವೃತ್ತಿ ಐಪಿಎಲ್‌ನಲ್ಲಿ ಆಡುತ್ತಿದೆ. ಈ ಲೀಗ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುರುವಾರ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆಯುವ ಆಸೆ ರಜತ್ ಪಾಟಿದಾರ್ ಪಡೆಯ ಗುರಿಯಾಗಿದೆ.

ಉಭಯ ತಂಡಗಳು ಈಗಾಗಲೇ ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು ಆರ್‌ಸಿಬಿ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಜಿಟಿ 3 ಪಂದ್ಯ ಗೆದ್ದಿದೆ. ಈ ಬಾರಿಯ ಲೀಗ್‌ನಲ್ಲಿ ಪ್ಲೇ ಆಫ್‌ ಪ್ರವೇಶ ಪಡೆಯಲು ಗುಜರಾತ್‌ಗೆ ಈ ಪಂದ್ಯದಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಇನ್ನು ತವರಿನಲ್ಲಿ ತನ್ನ ಅಂಕಿ ಅಂಶಗಳನ್ನು ಉತ್ತಮ ಪಡಿಸಿಕೊಳ್ಳುವ ಇರಾದೆ ಟೈಟಾನ್ಸ್ ತಂಡದ್ದಾಗಿದೆ.

RCB vs GT

ಪಿಚ್ ಹೇಗಿರಲಿದೆ?

ವಿಶ್ವದ ದೊಡ್ಡ ಮೈದಾನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟರ್‌ಗಳಿಗೆ ಸಹಾಯಕವಾಗಲಿದೆ. ಮೊದಲು ಬ್ಯಾಟ್ ಮಾಡುವ ತಂಡ 190 ಆಸು ಪಾಸಿನಲ್ಲಿ ರನ್‌ಗಳನ್ನು ಕಲೆ ಹಾಕಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಸಹ ಪಿಚ್‌ ಸಹಾಯ ಪಡೆಯಬಹುದಾಗಿದೆ. ಅಲ್ಲದೆ ಈ ಮೈದಾನದಲ್ಲಿ ಎರಡನೇ ಇನಿಂಗ್ಸ್‌ ವೇಳಿಗೆ ಇಬ್ಬನಿ ಬೀಳುವುದರಿಂದ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಅಂಕ ಪಟ್ಟಿಯಲ್ಲಿ ಉಭಯ ತಂಡಗಳು ಯಾವ ಸ್ಥಾನದಲ್ಲಿವೆ?

ಆರ್‌ಸಿಬಿ ಆಡಿರುವ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್‌ ಆಡಿದ 8 ಪಂದ್ಯಗಳಲ್ಲಿ 4 ಜಯ, 4 ಸೋಲು ಕಂಡಿದ್ದು 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಹೇಗಿರಲಿದೆ ಗುಜರಾತ್ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್?

ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್/ಫಿಲ್ ಸಾಲ್ಟ್‌, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ರಸಿಕ್ ಸಲಾಮ್ ದಾರ್.

ಆರ್‌ಸಿಬಿ ಪರ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿ

  • ವಿರಾಟ್ ಕೊಹ್ಲಿ, 8 ಪಂದ್ಯ, 351 ರನ್‌
  • ದೇವದತ್ ಪಡಿಕ್ಕಲ್, 8 ಪಂದ್ಯ, 242 ರನ್‌
  • ರಜತ್ ಪಾಟಿದಾರ್, 8 ಪಂದ್ಯ, 238 ರನ್‌

ಬೆಂಗಳೂರು ತಂಡದ ಪರ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

  • ಭುವನೇಶ್ವರ್ ಕುಮಾರ್, 8 ಪಂದ್ಯ, 14 ವಿಕೆಟ್‌
  • ಜೋಶ್‌ ಹ್ಯಾಜಲ್‌ವುಡ್‌, 5 ಪಂದ್ಯ, 8 ವಿಕೆಟ್‌
  • ರಸಿಕ್‌ ಸಲಾಂ ದಾರ್‌, 5 ಪಂದ್ಯ, 6 ವಿಕೆಟ್‌

ಗುಜರಾತ್ ಯಾವೆಲ್ಲಾ ಆಟಗಾರರಿಗೆ ಆಡಲು ಅವಕಾಶ ನೀಡಬಹುದು?

ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ನೂರ್ ಅಹ್ಮದ್.

ಪಂದ್ಯದ ನೇರ ಪ್ರಸಾರವನ್ನು ನೋಡುವುದು ಎಲ್ಲಿ?

ಗುಜರಾತ್ ಟೈಟಾನ್ಸ್ ಹಾಗೂ ಆರ್‌ಸಿಬಿ ನಡುವಣ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಹಾಗೂ ಆನ್‌ಲೈನ್‌ನಲ್ಲಿ ಜಿಯೋಹಾಟ್ ಸ್ಟಾರ್‌ನಲ್ಲಿ ನೋಡಬಹುದು.

ಆರ್‌ಸಿಬಿ, ಜಿಟಿ ನಡುವಣ ಪಂದ್ಯ ನಡೆಯುವುದು ಯಾವಾಗ?

19ನೇ ಆವೃತ್ತಿ ಐಪಿಎಲ್‌ನ 42ನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

Story first published: Thursday, April 30, 2026, 8:05 [IST]
Other articles published on Apr 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+