Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಿಂಗ್ಸ್‌ vs ಪ್ರಿನ್ಸ್‌: ಎರಡನೇ ಪ್ರಶಶಸ್ತಿಗೆ ಎರಡೇ ಹೆಜ್ಜೆ, ಆರ್‌ಸಿಬಿ-ಜಿಟಿ ಫೈನಲ್‌ಗಾಗಿ ಹೋರಾಟ

19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಂಕಪಟ್ಟಿಯಲ್ಲಿ ಮೊದಲಸ್ಥಾನ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್‌ (ಜಿಟಿ) ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಫೈಟ್‌ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸುವ ಆಸೆ ಆರ್‌ಸಿಬಿ ತಂಡದ್ದಾಗಿದೆ.

ಆರ್‌ಸಿಬಿ ಹಾಗೂ ಜಿಟಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ಎಂದೇ ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ ಹಾಗೂ ಪ್ರಿನ್ಸ್‌ ಎಂದು ಖ್ಯಾತಿ ಪಡೆದ ಶುಭಮನ್‌ ಗಿಲ್‌ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಉಭಯ ಆಟಗಾರರ ನಡುವಿನ ಕಾದಾಟ ರೋಚಕತೆ ಹುಟ್ಟಿಸಿದೆ. ಎರಡೂ ತಂಡಗಳು ಲೀಗ್‌ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿವೆ.

RCB vs GT

ಈಗಾಗಲೇ ಲೀಗ್‌ ಹಂತದಲ್ಲಿ ಎರಡೂ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ ಒಂದು ಬಾರಿ, ಗುಜರಾತ್ ಒಂದು ಗೆಲುವು ದಾಖಲಿಸಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಉಭಯ ತಂಡಗಳು ತಾವಾಡಿದ ತವರು ಪಂದ್ಯಗಳಲ್ಲಿ ಜಯ ಸಾಧಿಸಿವೆ. ಮಂಗಳವಾರ ಪಂದ್ಯ ತಟಸ್ಥ ಸ್ಥಳದಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ಕದ್ದಿದೆ.

IPL 2026: ಪ್ಲೇ-ಆಫ್‌ ರೇಸ್ ಪಕ್ಕಾ; ಆರ್‌ಸಿಬಿ vs ಜಿಟಿ, ಎಸ್‌ಆರ್‌ಎಚ್‌ vs ಆರ್‌ಆರ್‌ ಇಲ್ಲಿದೆ ಪೂರ್ಣ ವೇಳಾಪಟ್ಟಿ

IPL 2026: ಪ್ಲೇ-ಆಫ್‌ ರೇಸ್ ಪಕ್ಕಾ; ಆರ್‌ಸಿಬಿ vs ಜಿಟಿ, ಎಸ್‌ಆರ್‌ಎಚ್‌ vs ಆರ್‌ಆರ್‌ ಇಲ್ಲಿದೆ ಪೂರ್ಣ ವೇಳಾಪಟ್ಟಿ

ವಿರಾಟ್‌ ಜೊತೆ ಇನಿಂಗ್ಸ್ ಆರಂಭಿಸುವುದು ಯಾರು?

ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ಇಳಿಯುವುದು ಯಾರು ಇಳಿಯುತ್ತಾರೆ? ಎಂಬ ಪ್ರಶ್ನೆ ಉದ್ಭವಿಸಿದೆ. ಜಾಕೊಬ್‌ ಬೆಥೆಲ್‌ ಗಾಯದ ಕಾರಣದಿಂದ ತವರಿಗೆ ಮರಳಿದ್ದಾರೆ. ಇನ್ನು ಫಿಲ್ ಸಾಲ್ಟ್‌ ಉಪಸ್ಥಿತಿಯ ಬಗ್ಗೆ ಇನ್ನು ಯಾವುದೇ ಅಪ್‌ಡೇಟ್‌ ಇಲ್ಲ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರಂಭಿಕರಾಗಿ ಬಡ್ತಿ ಪಡೆದ ವೆಂಕಟೇಶ್‌ ಅಯ್ಯರ್ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರನ್ನೇ ಆರ್‌ಸಿಬಿ ಕಣಕ್ಕೆ ಇಳಿಸುತ್ತಾ ಎಂಬ ಪ್ರಶ್ನೆ ಸಹ ಮೂಡಿದೆ.

ಕೊಹ್ಲಿ-ಹೆಡ್‌ ಹ್ಯಾಂಡ್‌ಶೇಕ್‌ ವಿವಾದ: ಟ್ರಾವಿಸ್‌ ಕುಟುಂಬಕ್ಕೆ ದ್ವೇಷ ಸಂದೇಶ

ಕೊಹ್ಲಿ-ಹೆಡ್‌ ಹ್ಯಾಂಡ್‌ಶೇಕ್‌ ವಿವಾದ: ಟ್ರಾವಿಸ್‌ ಕುಟುಂಬಕ್ಕೆ ದ್ವೇಷ ಸಂದೇಶ

ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟಿದಾರ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಅಂದಾಗ ಆರ್‌ಸಿಬಿ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದರೆ ಅಹಮದಾಬಾದ್ ಫ್ಲೈಟ್ ಸುಲಭಾವಗಿ ಏರಬಹುದಾಗಿದೆ.

RCB vs GT

ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರು ವಿಕೆಟ್‌ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಜೋಶ್‌ ಹ್ಯಾಜಲ್‌ವುಡ್‌, ರಸಿಕ್ ಸಲಾಂ ದರ್, ಮಧ್ಯದ ಓವರ್‌ಗಳಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸಬಲ್ಲರು. ಸ್ಪಿನ್ ಬೌಲರ್‌ಗಳಾಗಿ ಕೃನಾಲ್ ಪಾಂಡ್ಯ ಹಾಗೂ ಸುಯಶ್ ಶರ್ಮಾ ಮೋಡಿ ಮಾಡಿದರೆ ಜಯದ ಆಸೆ ಫಲಿಸುತ್ತದೆ.

ಟಾಪ್‌ ಆರ್ಡರ್‌ ಬ್ಯಾಟರ್‌ಗಳ ಬಲ

ಗುಜರಾತ್‌ ಟೈಟಾನ್ಸ್ ತಂಡ ಬ್ಯಾಟಿಂಗ್‌ನಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಆರಂಭಿಕರಾದ ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌, ಜೋಸ್ ಬಟ್ಲರ್‌ ರನ್‌ ಕಲೆ ಹಾಕುತ್ತಿರುವುದು ತಂಡಕ್ಕೆ ಆನೆ ಬಲವನ್ನು ನೀಡಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಕಗಿಸೋ ರಬಾಡ, ಮೊಹಮ್ಮದ್‌ ಸಿರಾಜ್‌ ರನ್‌ ದಾಹಕ್ಕೆ ಕಡಿವಾಣ ಹಾಕಿ ವಿಕೆಟ್‌ ಕಬಳಿಸುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲ್ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಸಂಘಟಿತ ಆಟ ಆಡುವುದು ಅನಿವಾರ್ಯವಾಗಿದೆ.

Story first published: Monday, May 25, 2026, 17:25 [IST]
Other articles published on May 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+