RCB vs GT Qualifier 1: ಪ್ಲೇಯಿಂಗ್ ಇಲೆವೆನ್, ಪಂದ್ಯದ ಸಮಯ, ನೇರಪ್ರಸಾರ, ಪಿಚ್ ವರದಿ ಮಾಹಿತಿ
ಧರ್ಮಶಾಲಾ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯುವ ಕನಸು ಎರಡೂ ತಂಡಗಳದ್ದಾಗಿದೆ.
ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಆರ್‌ಸಿಬಿ ಹಾಗೂ ಎರಡನೇ ಸ್ಥಾನದಲ್ಲಿರುವ ಜಿಟಿ ಕ್ವಾಲಿಫೈಯರ್‌ನಲ್ಲಿ ಹೋರಾಡಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದೆ. ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡದ ವಿರುದ್ಧ ಕಾದಾಟ ನಡೆಸಲಿದೆ.

ಆರ್‌ಸಿಬಿ ಹಾಗೂ ಜಿಟಿ ತಂಡಗಳಲ್ಲಿ ಸ್ಟಾರ್ ಆಟಗಾರರ ಬಲ ಇದೆ. ಉಭಯ ತಂಡಗಳಲ್ಲಿ ಉತ್ತಮ ಬೌಲರ್‌ಗಳು ಇದ್ದು, ಪಂದ್ಯ ರೋಚಕತೆ ಹೆಚ್ಚಿಸಿದೆ. ಅಲ್ಲದೆ ಸ್ಟಾರ್ ಬ್ಯಾಟರ್‌ಗಳು ಎರಡೂ ತಂಡಗಳಲ್ಲಿದ್ದು, ಬಿಗ್ ಫೈಟ್ ನಿರೀಕ್ಷಿಸಲಾಗಿದೆ.
ಪಿಚ್ ಯಾರಿಗೆ ಸಹಾಯಕ?
ಧರ್ಮಶಾಲಾದ ಪಿಚ್ ಪ್ರಮುಖವಾಗಿ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ. ಮೈದಾನದ ಸಣ್ಣ ಬೌಂಡರಿಗಳು ಮತ್ತು ವೇಗದ ಔಟ್‌ಫೀಲ್ಡ್‌ನಿಂದಾಗಿ ಇಲ್ಲಿ ರನ್ ಗಳಿಸುವುದು ಸುಲಭ. ಈ ಪಿಚ್ ಮೇಲೆ ದೊಡ್ಡ ಸ್ಕೋರ್ ನಿರೀಕ್ಷಿಸಬಹುದಾಗಿದೆ. ಆದಾಗ್ಯೂ, ಆರಂಭಿಕ ಓವರ್‌ಗಳಲ್ಲಿ ಇಲ್ಲಿನ ತಂಪಾದ ಹವಾಮಾನದಿಂದಾಗಿ ವೇಗದ ಬೌಲರ್‌ಗಳಿಗೆ ಉತ್ತಮ ಸ್ವಿಂಗ್ ಮತ್ತು ಹೆಚ್ಚುವರಿ ಬೌನ್ಸ್ ಲಭ್ಯವಿರುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವೆಲ್ಲಾ ಆಟಗಾರರಿಗೆ ಅವಕಾಶ ನೀಡಬಹುದು?
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್/ ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್/ಸುಯಾಶ್ ಶರ್ಮಾ.
ಆರ್‌ಸಿಬಿ ತಂಡದ ಪರ ಗರಿಷ್ಠ ರನ್ ಸಾಧಕರು
- ವಿರಾಟ್ ಕೊಹ್ಲಿ, 14 ಪಂದ್ಯ, 557 ರನ್
- ದೇವದತ್ ಪಡಿಕ್ಕಲ್, 14 ಪಂದ್ಯ, 393 ರನ್
- ರಜತ್ ಪಾಟಿದಾರ್, 13 ಪಂದ್ಯ, 393 ರನ್
ಬೆಂಗಳೂರು ತಂಡದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
- ಭುವನೇಶ್ವರ್ ಕುಮಾರ್, 14 ಪಂದ್ಯ, 24 ವಿಕೆಟ್
- ರಸಿಕ್ ಸಲಾಂ ದಾರ್, 10 ಪಂದ್ಯ, 14 ವಿಕೆಟ್
- ಜೋಶ್ ಹ್ಯಾಜಲ್‌ವುಡ್, 11 ಪಂದ್ಯ, 12 ವಿಕೆಟ್
ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?
ಶುಭಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಜೇಸನ್ ಹೋಲ್ಡರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅರ್ಶದ್ ಖಾನ್/ಮಾನವ್ ಸುತಾರ್ (ಇಂಪ್ಯಾಕ್ಟ್ ಪ್ಲೇಯರ್).
ಟೈಟಾನ್ಸ್ ಪರ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್
- ಸಾಯಿ ಸುದರ್ಶನ್, 14 ಪಂದ್ಯ, 638 ರನ್
- ಶುಭಮನ್ ಗಿಲ್, 13 ಪಂದ್ಯ, 616 ರನ್
- ಜೋಸ್ ಬಟ್ಲರ್, 14 ಪಂದ್ಯ, 469 ರನ್
ಗುಜರಾತ್ ಪರ ಗರಿಷ್ಠ ವಿಕೆಟ್ ಸಾಧಕರು
- ಕಗಿಸೋ ರಬಾಡ, 14 ಪಂದ್ಯ, 24 ವಿಕೆಟ್
- ರಶೀದ್ ಖಾನ್, 14 ಪಂದ್ಯ, 19 ವಿಕೆಟ್
- ಮೊಹಮ್ಮದ್ ಸಿರಾಜ್, 14 ಪಂದ್ಯ, 17 ವಿಕೆಟ್
ಗುಜರಾತ್ ವಿರುದ್ಧ ಆಡುವುದು ಕಿಂಗ್ ಕೊಹ್ಲಿಗೆ ಬಲು ಪ್ರೀತಿ: ಇಲ್ಲಿದೆ ಕಂಪ್ಲೀಟ್ ರಿಪೋರ್ಟ್ ಕಾರ್ಡ್
ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಎಲ್ಲಿ ನೋಡಬಹುದು?
ಆರ್‌ಸಿಬಿ ಹಾಗೂ ಜಿಟಿ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಆರ್‌ಸಿಬಿ, ಜಿಟಿ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುವುದು ಯಾವಾಗ?
19ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾದಲ್ಲಿ 7.30ಕ್ಕೆ ನಡೆಯಲಿದ್ದು, ಟಾಸ್ ಪಂದ್ಯಕ್ಕೂ ಅರ್ಧಗಂಟೆಗೂ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
