ಆರ್‌ಸಿಬಿ ವಿರುದ್ಧ ಬ್ಯಾಟ್ ಜಾರಿ ಹಿಟ್ ವಿಕೆಟ್‌ಗೆ ಬಲಿಯಾದ ಸಾಯಿ ಸುದರ್ಶನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕೆ ಇಳಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಭರ್ಜರಿ ಬ್ಯಾಟಿಂಗ್ ನಡೆಸಿ ಗುಜರಾತ್ ಟೈಟಾನ್ಸ್ ತಂಡಕ್ಕೆ 255 ರನ್‌ಗಳ ಗುರಿಯನ್ನು ನೀಡಿತು. ಈ ವೇಳೆ ನಾಯಕ ರಜತ್ ಪಾಟೀದಾರ್ ಸೊಗಸಾದ ಬ್ಯಾಟಿಂಗ್ ನಡೆಸಿ 93 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಅಬ್ಬರದ ಜೊತೆಯಾಟವನ್ನು ನೀಡುವ ಸೂಚನೆಯನ್ನು ನೀಡಿದರು. ಅಲ್ಲದೆ ಇದೇ ನಿಟ್ಟಿನಲ್ಲಿ ಬ್ಯಾಟಿಂಗ್ ಸಹ ನಡೆಸಿದರು. ಆದರೆ ಸಾಯಿ ಸುದರ್ಶನ್ ಇಲ್ಲದ ರೀತಿಯಲ್ಲಿ ಈ ಪಂದ್ಯದಲ್ಲಿ ಔಟ್ ಆಗಿ ನಿರಾಸೆ ಅನುಭವಿಸಿದರು.

ಸಾಯಿ ಸುದರ್ಶನ್ ಅವರು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜಾಕೋಬ್ ಡಫಿ ಅವರನ್ನು ಎದುರಿಸಲು ಸಿದ್ಧರಾದರು. ಈ ಓವರ್‌ನ ಮೂರನೇ ಎಸೆತದಲ್ಲಿ ಡಫಿ ಎಸೆತವನ್ನು ಸಾಯಿ ಸುದರ್ಶನ್ ಪಾಯಿಂಟ್ ಕ್ಷೇತ್ರದಲ್ಲಿ ಬೌಂಡರಿ ಬಾರಿಸಲು ಮುಂದಾದರು. ಈ ವೇಳೆ ಇವರ ಬ್ಯಾಟ್‌ನ ಗ್ರಿಪ್ ಕಳೆದುಕೊಂಡರು. ಪರಿಣಾಮ ಬ್ಯಾಟ್ ಕೈಯಿಂದ ಜಾರಿ ಸ್ಟಂಪ್‌ಗೆ ಬಡಿಯಿತು. ಪರಿಣಾಮ ಬೇಲ್ಸ್ ಬಿದ್ದವು. ಸಾಯಿ ಸುದರ್ಶನ್ ಭಾರವಾದ ಮನಸ್ಸಿನಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications