Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಯಕ ರಜತ್ ಸ್ಫೋಟಕ ಬ್ಯಾಟಿಂಗ್‌: ಜಿಟಿಗೆ 255 ರನ್‌ ಗುರಿ ನೀಡಿದ ಆರ್‌ಸಿಬಿ

ಧರ್ಮಶಾಲಾ: ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 255 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ವೆಂಕಟೇಶ್‌ ಅಯ್ಯರ್ ಹಾಗೂ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಮೊದಲ ವಿಕೆಟ್‌ಗೆ 2 ಓವರ್‌ಗಳಲ್ಲಿ 21 ರನ್‌ ಸೇರಿಸಿತು. ಫಿಲ್ ಸಾಲ್ಟ್ ಇನ್ನು ಫಿಟ್ ಆಗದೇ ಇರುವ ಕಾರಣ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಪಡೆದು ಇನಿಂಗ್ಸ್ ಆರಂಭಿಸಿದ ವೆಂಕಟೇಶ್‌ ಅಯ್ಯರ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 19 ರನ್‌ ಸಿಡಿಸಿ ಔಟ್ ಆದರು.

RCB vs GT

ಎರಡನೇ ವಿಕೆಟ್‌ಗೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡು ಕರ್ನಾಟಕದ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ದೇವದತ್ ಪಡಿಕ್ಕಲ್ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಅಬ್ಬರಿಸಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಮೊದಲ ಆರು ಓವರ್‌ಗಳಲ್ಲಿ ಆರ್‌ಸಿಬಿ 76 ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು.

ಅಮೋಘ ಬ್ಯಾಟಿಂಗ್ ಜೊತೆಯಾಟದ ಕಾಣಿಕೆ ನೀಡಿದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ ಎರಡನೇ ವಿಕೆಟ್‌ಗೆ 38 ಎಸೆತಗಳಲ್ಲಿ 72 ರನ್‌ ಸೇರಿಸಿತು. ಈ ಜೋಡಿಯ ಆಟಕ್ಕೆ ಜೇಸನ್‌ ಹೋಲ್ಡರ್‌ ಬ್ರೇಕ್ ಹಾಕುವಲ್ಲಿ ಸಫಲರಾದರು. 9ನೇ ಇನಿಂಗ್ಸ್‌ನ 2 ಎಸೆತದಲ್ಲಿ 43 ರನ್‌ ಬಾರಿಸಿದ್ದ ವಿರಾಟ್‌ಗೆ ಹೋಲ್ಡರ್‌ ಔಟ್ ಮಾಡಿದರು. ಇದೇ ಇನಿಂಗ್ಸ್‌ನ 4ನೇ ಎಸೆತದಲ್ಲಿ ದೇವದತ್ 30 ರನ್ ಬಾರಿಸಿ ಪೆವಿಲಿಯನ್‌ ಸೇರಿದರು.

5ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ

ಸಂಕಷ್ಟದಲ್ಲಿದ್ದ ತಂಡಕ್ಕೆ ಕೃನಾಲ್‌ ಪಾಂಡ್ಯ ಹಾಗೂ ನಾಯಕ ರಜತ್ ಪಾಟಿದಾರ್ ಜೋಡಿ ಸೊಗಸಾದ ಬ್ಯಾಟಿಂಗ್ ನಡಿಸಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ರನ್‌ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಸಫಲರಾದರು. ಈ ಜೋಡಿ 47 ಎಸೆತಗಳಲ್ಲಿ 95 ರನ್ ಬಾರಿಸಿತು. ಈ ಅವಧಿಯಲ್ಲಿ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ 28 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಮದ 43 ರನ್‌ ಬಾರಿಸಿ ಔಟ್ ಆದರು.

ನಾಯಕನ ಆಟವಾಡಿದ ರಜತ್ ಪಾಟಿದಾರ್

ಮಹತ್ವದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ರಜತ್ ಪಾಟಿದಾರ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಸಿಕ್ಕ ಜೀವದಾನದ ಲಾಭ ಪಡೆದು ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ ಸಹಾಯದಿಂದ ಅಜೇಯ 93 ರನ್ ಬಾರಿಸಿದರು. ಇವರು 281.81 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 254 ರನ್‌ ಸೇರಿಸಿತು. ಗುಜರಾತ್‌ ಟೈಟಾನ್ಸ್‌ ಪರ ಕಗಿಸೊ ರಬಾಡ, ಜೇಸನ್‌ ಹೋಲ್ಡರ್ ತಲಾ 2 ವಿಕೆಟ್‌ ಪಡೆದರು.

Story first published: Tuesday, May 26, 2026, 21:21 [IST]
Other articles published on May 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+