Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT: ಕಿಂಗ್ಸ್‌ vs ಪ್ರಿನ್ಸ್‌- ಒತ್ತಡದಲ್ಲಿ ಟೈಟಾನ್ಸ್‌, ಜೋಶ್‌ನಲ್ಲಿ ಬೆಂಗಳೂರು

ಅಹಮದಾಬಾದ್: 19ನೇ ಆವೃತ್ತಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುವಾರ ಮತ್ತೆ ಕಣಕ್ಕೆ ಇಳಿಯಲಿದೆ. ಈ ವೇಳೆ ಎಲ್ಲರ ಚಿತ್ತ ಹಾಲಿ ಚಾಂಪಿಯನ್ ತಂಡದ ಮೇಲೆ ನೆಟ್ಟಿರಲಿದೆ. ಪ್ರಸಕ್ತ ಲೀಗ್‌ನ 42ನೇ ಪಂದ್ಯದಲ್ಲಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡದ ಸವಾಲು ಎದುರಿಸಲಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ವೇಗದ ಬೌಲರ್‌ಗಳಾದ ಜೋಶ್‌ ಹ್ಯಾಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ನೀಡಿರುವ ಪ್ರದರ್ಶನ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ಹೇಗೆ ಬೌಲಿಂಗ್‌ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿರುವ ಆರ್‌ಸಿಬಿ ವೇಗದ ಜೋಡಿ ಮತ್ತೊಮ್ಮೆ ಕಮಾಲ್ ಮಾಡಲು ಸಿದ್ಧವಾಗಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಒಂದು ಕಾಲು ಇಡುವ ಇರಾದೆ ಆರ್‌ಸಿಬಿ ತಂಡದ್ದಾಗಿದೆ.

RCB vs GT

ಈಗಾಗಲೇ ಉಭಯ ತಂಡಗಳು ಲೀಗ್‌ ಹಂತದಲ್ಲಿ ಒಮ್ಮೆ ಮುಖಾಮುಖಿಯಾಗಿವೆ. ಈ ವೇಳೆ ಆರ್‌ಸಿಬಿ ಪ್ರಾಬಲ್ಯ ಮರೆದಿದೆ. ಈಗ ಗುಜರಾತ್‌ ತವರಿನಲ್ಲಿ ಅಬ್ಬರಿಸುವ ಇರಾದೆ ಬೆಂಗಳೂರು ತಂಡದ್ದಾಗಿದೆ. ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು ವಿಶ್ವಾಸ ಮೂಡಿಸಿದ್ದಾರೆ. ಆರ್‌ಸಿಬಿ ತಂಡದ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್‌ ಟೈಟಾನ್ಸ್ ವಿರುದ್ಧ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

1
4-2026

ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ (351 ರನ್) ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ದೇವದತ್ ಪಡಿಕ್ಕಲ್‌ ಸಹ (242 ರನ್‌) ರನ್‌ ಮಹಲ್ ಏರುತ್ತಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ನಾಯಕ ರಜತ್ ಪಾಟಿದಾರ್ ಸಹ ಮಧ್ಯದ ಓವರ್‌ಗಳಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ. ಇನ್ನು ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜಿತೇಶ್‌ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್‌ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ.

ವೇಗದ ಬೌಲರ್‌ಗಳೇ ಆಕರ್ಷಣೆ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪರ್ಫೆಕ್ಟ್ ಲೈನ್ ಹಾಗೂ ಲೆಂತ್‌ನಲ್ಲಿ ದಾಳಿ ಸಂಘಟಿಸಿರುವ ಭುವನೇಶ್ವರ್ ಕುಮಾರ್ ಹಾಗೂ ಜೋಶ್‌ ಹ್ಯಾಜಲ್‌ವುಡ್‌ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಆಟಗಾರರು ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಆರಂಭವನ್ನು ನೀಡಬಹುದು. ರಸಿಕ್ ಸಲಾಂ ದಾರ್ ಸಹ ರನ್‌ ವೇಗಕ್ಕೆ ಕಡಿವಾಣ ಹಾಕಬೇಕಿದೆ. ಇನ್ನು ಸ್ಪಿನ್ ಬೌಲರ್‌ಗಳಾದ ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ ತಮ್ಮ ನೈಜ ಬೌಲಿಂಗ್ ಮುಂದುವರೆಸಬೇಕಿದೆ. ಅಂದಾಗ ಮತ್ತೊಂದು ಗೆಲುವಿನ ಕನಸು ನನಸಾಗುತ್ತದೆ.

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ

ಸಿಎಸ್‌ಕೆ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಗುಜರಾತ್ ಟೈಟಾನ್ಸ್‌, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರಿಸುವ ಇರಾದೆಯನ್ನು ಹಾಕಿಕೊಂಡಿದೆ. ಗುಜರಾತ್ ಈ ಬಾರಿಯ ಲೀಗ್‌ನಲ್ಲಿ ಅಹಮದಾಬಾದ್‌ ಮೈದಾನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಗಿಲ್ ಪಡೆ ಒತ್ತಡದಲ್ಲಿದೆ.

RCB vs GT

ಟೈಟಾನ್ಸ್ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳಾದ ಸಾಯಿ ಸುದರ್ಶನ್ (330 ರನ್), ಶುಭಮನ್‌ ಗಿಲ್ (322 ರನ್‌), ಜೋಸ್ ಬಟ್ಲರ್ (270 ರನ್‌) ಕಲೆ ಹಾಕಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಅಗತ್ಯತೆ ಇದೆ. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರು ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕಿದೆ. ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಜೇಸನ್ ಹೋಲ್ಡರ್‌ ಸರಿಯಾದ ಯೋಜನೆಯಿಂದ ಬೌಲಿಂಗ್ ನಡೆಸಬೇಕಿದೆ. ಸ್ಪಿನ್ ಮಾಂತ್ರಿಕ ರಶೀದ್ ಖಾನ್‌ ಕಮಾಲ್ ಮಾಡಿದರೆ ಮಾತ್ರ 2 ಅಂಕದ ಕನಸು ಫಲಿಸುತ್ತದೆ.

Story first published: Wednesday, April 29, 2026, 18:55 [IST]
Other articles published on Apr 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+