RCB vs LSG: ಲಕ್ನೋ ತಂಡದ ಆ ನಿರ್ಧಾರವನ್ನು ಪ್ರಶ್ನಿಸಿದ ಆಕಾಶ್ ಚೋಪ್ರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಪ್ಲೇಆಫ್ ಹಂತದಿಂದ ಲಕ್ನೋ ಸೂಪರ್ ಜೈಂಟ್ಸ್ ಹೊರಬಿದ್ದಂತಾಗಿದೆ. ಚೊಚ್ಚಲ ಅವೃತ್ತಿಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಮಿಂಚುಹರಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ ಹಂತದಲ್ಲಿ ಮಾಡಿದ ಕೆಲ ಎಡವಟ್ಟುಗಳಿಂದಾಗಿ ಟೂರ್ನಿಯಿಂದಲೇ ಹೊರಬೀಳುವಂತಾಯಿತು.
ಈ ಸೋಲಿನ ಬಳಿಕ ತಂಡದ ಜೊತೆಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಕೂಡ ಪರಾಮರ್ಶೆಯಲ್ಲಿ ತೊಡಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿಗೆ ಕಾರಣವೇನು ಎಂಬ ಬಗ್ಗೆ ಚರ್ಚೆಗಳು ಈಗ ಜೋರಾಗಿ ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಕೂಡ ಎಲ್‌ಎಸ್‌ಜಿ ತಂಡದ ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದು ತಂಡ ತೆಗೆದುಕೊಂಡ ಒಂದು ನಿರ್ಧಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೋಹ್ರಾ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಶೀಘ್ರದಲಲ್ಇ ವಿಕೆಟ್ ಒಪ್ಪಿಸಿದ್ದರು. ಐದು ಎಸೆತಗಳಲ್ಲಿ 6 ರನ್‌ಗಳನ್ನು ಗಳಿಸಿದ ಡಿಕಾಕ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ದರು. ನಂತರ ಮನನ್ ವೋಹ್ರಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಈ ನಿರ್ಧಾರ ಸರಿಯಾದದ್ದಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. "ಮನನ್ ವೋಹ್ತಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು ನನಗೆ ಬಹಳ ಅಚ್ಚರಿಯಾಯಿತು. ವೈಯಕ್ತಿಕವಾಗಿ ನನಗೆ ಆ ರಣತಂತ್ರ ಸ್ವಲ್ಪವೂ ಇಷ್ಟವಾಗಲಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

"ಎವಿನ್ ಲೂಯಿಸ್‌ರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಲಕ್ನೋ"
ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಲಕ್ನೋ ಸೂಪರ್ ಜೈಂಟ್ಸ್ ತಂಡ ಎವಿನ್ ಲೂಯಿಸ್ ಅವರನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ವಿಫಲವಾಯಿತು ಎಂದಿದ್ದಾರೆ. ಮೇಲಿನ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಲೂಯಿಸ್ ಅವರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎಲ್‌ಎಸ್‌ಜಿ ತಂಡ ಬಳಸಿಕೊಳ್ಳಬಹುದಾಗಿತ್ತು ಎಂದಿದ್ದಾರೆ ಆಕಾಶ್ ಚೋಪ್ರ. "ಯಾಕೆ ಎವಿನ್ ಲೂಯಿಸ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಿಲ್ಲ ಎಂದು ನಾನು ಬಹಳಷ್ಟು ಯೋಚಿಸುತ್ತಿದ್ದೇನೆ. ಮ್ಯಾಕ್ಸ್‌ವೆಲ್ಗ ಬೌಲಿಂಗ್ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಲೂಯಿಸ್ ಅವರನ್ನು ಕಳುಹಿಸದಿರುವ ನಿರ್ಧಾರ ತೆಗೆದುಕೊಂಡಿದ್ದರೆ ಮತ್ತೊಂದು ತುದಿಯಲ್ಲಿ ರಾಹುಲ್ ಆಡುತ್ತಿದ್ದರು. ರಾಹುಲ್ ಅವರಿಗೆ ಬಾರಿಸುತ್ತಿದ್ದರು. ಹಾಗಿದ್ದರೂ ವೋಹ್ರಾ 19 ರನ್‌ಗಳ ಕೊಡುಗೆ ನೀಡಿದ್ದಾರೆ. ಆದರೆ ವೋಹ್ರಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರಣದಿಂದಾಗಿ ಲೂಯಿಸ್ ಕೆಳ ಕ್ರಮಾಂಕದಲ್ಲಿ ಆಡುವಂತಾಯಿ" ಎಂದಿದ್ದಾರೆ ಆಕಾಶ್ ಚೋಪ್ರ.

ಕೆಳ ಕ್ರಮಾಂಕದಲ್ಲಿ ಪರಿಣಾಮಕಾರಿಯಾಗದ ಲೂಯಿಸ್
ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಕಳೆದುಕೊಂಡ ಬಳಿಕ ಎವಿನ್ ಲೂಯಿಸ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಈ ಸಂದರ್ಭದಲ್ಲಿ ಎಲ್‌ಎಸ್‌ಜಿ 15 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸುವ ಸವಾಲು ಹೊಂದಿತ್ತು. ಆದರೆ ಬಿಗ್ ಹಿಟ್ಟರ್ ಎನಿಸಿಕೊಂಡ ಲೂಯಿಸ್ ಈ ಹಂತದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಲು ವಿಫಲವಾದರು. ಆರು ಎಸೆತಗಳನ್ನು ಎದುರಿಸಿದ ಲೂಯಿಸ್ ಕೇವಲ ಎರಡು ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 14 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಲಕ್ನೋ
ಈ ಬಾರಿಯ ಐಪಿಎಲ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಒಂದು. ಲೀಗ್ ಹಂತದುದ್ದಕ್ಕೂ ಅದ್ಭುತ ಪ್ರದರ್ಶಣ ನೀಡಿದ್ದ ಲಕ್ನೋ ಸೂಒರ್ ಜೈಂಟ್ಸ್ ತಂಡ ಎರಡನೇ ತಂಡವಾಗಿ ಫ್ಲೇಆಫ್‌ಗೆ ಸೇರ್ಪಡೆಯಾಗಲಿದೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ ನೆಟ್ ರನ್‌ರೇಟ್‌ನಲ್ಲಿ ಹಿಂದುಳಿದ ಕಾರಣದಿಂದಾಗಿ ಮೂರನೇ ಸ್ಥಾನಿಯಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications