Nicholas Pooran: IPL ಇತಿಹಾಸದಲ್ಲಿ ಜಂಟಿ 2ನೇ ವೇಗದ ಅರ್ಧಶತಕ ಬಾರಿಸಿದ ನಿಕೋಲಸ್ ಪೂರನ್
ಸೋಮವಾರ, ಏಪ್ರಿಲ್ 10ರಂದು ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮತ್ತೊಂದು ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಕೇವಲ 1 ವಿಕೆಟ್‌ನಿಂದ ಗೆಲುವು ಸಾಧಿಸಿತು.
ಆರ್‌ಸಿಬಿ ನೀಡಿದ 213 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 5 ರನ್‌ಗಳು ಬೇಕಾಗಿದ್ದವು. ಆಗ ಬೌಲಿಂಗ್ ಮಾಡಿದ ಆರ್‌ಸಿಬಿ ತಂಡದ ಹರ್ಷಲ್ ಪಟೇಲ್ ಎರಡು ವಿಕೆಟ್ ಪಡೆದು ರೋಮಾಂಚನಕಾರಿ ತಿರುವು ಕೊಟ್ಟಿದ್ದರು. ಆದರೆ, ಅಂತಿಮ ಎಸೆತದಲ್ಲಿ ಬೈಸ್ ಮೂಲಕ ಒಂದು ರನ್ ಗಳಿಸುವ ಮೂಲಕ ಲಕ್ನೋ ಪಂದ್ಯವನ್ನು ಗೆದ್ದುಕೊಂಡಿತು.

ಇನ್ನು ಇದಕ್ಕೂ ಮುನ್ನ ಕಳೆದುಹೋಗಿದ್ದ ಪಂದ್ಯವನ್ನು ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ವಾಲಿಸಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್ ನಿಕೋಲಸ್ ಪೂರನ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಕ್ಷರಶಃ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 213 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನಿಕೋಲಸ್ ಪೂರನ್, ಆರ್‌ಸಿಬಿ ವಿರುದ್ಧ ತಮ್ಮ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತಂದು ನಿಲ್ಲಿಸಿದರು.
ನಿಕೋಲಸ್ ಪೂರನ್ ಕೇವಲ 15 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. 2023ರ ಐಪಿಎಲ್‌ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರನಾದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಅರ್ಧಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು.

ನಿಕೋಲಸ್ ಪೂರನ್ ಸದ್ಯ ಸುನಿಲ್ ನರೈನ್ ಮತ್ತು ಯೂಸುಫ್ ಪಠಾಣ್ ಅವರೊಂದಿಗೆ ಅತಿ ವೇಗದ ಅರ್ಧಶತಕಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ ತಮ್ಮ ಅರ್ಧಶತಕ ಬಾರಿಸುವ ಮೂಲಕ ಮೊದಲೆರಡು ಸ್ಥಾನದಲ್ಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದವರು
1. ಕೆಎಲ್ ರಾಹುಲ್ - 14 ಎಸೆತ - ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ - 2018, ಮೊಹಾಲಿ
2. ಪ್ಯಾಟ್ ಕಮ್ಮಿನ್ಸ್ - 14 ಎಸೆತ - ಮುಂಬೈ ಇಂಡಿಯನ್ಸ್ ವಿರುದ್ಧ - 2022, ಪುಣೆ
3. ಯೂಸುಫ್ ಪಠಾಣ್ - 15 ಎಸೆತ- ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ - 2014, ಕೋಲ್ಕತ್ತಾ
4. ಸುನಿಲ್ ನರೈನ್ - 15 ಎಸೆತ - ಆರ್‌ಸಿಬಿ ವಿರುದ್ಧ - 2017, ಬೆಂಗಳೂರು
5. ನಿಕೋಲಸ್ ಪೂರನ್ - 15 ಎಸೆತ - ಆರ್‌ಸಿಬಿ ವಿರುದ್ಧ - 2023, ಬೆಂಗಳೂರು
ಮಾರ್ಕಸ್ ಸ್ಟೊಯಿನಿಸ್ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್ ಬಿದ್ದ ನಂತರ ಪಂದ್ಯವು ಎಲ್‌ಎಸ್‌ಜಿಯಿಂದ ಸಂಪೂರ್ಣ ದೂರ ಸರಿದಿದೆ ಎಂದು ಎಲ್ಲರೂ ಭಾವಿಸಿದ್ದ ಸಮಯದಲ್ಲಿ ನಿಕೋಲಸ್ ಪೂರನ್ ಪ್ರತಿದಾಳಿ ನಡೆಸಿ, ಪಂದ್ಯದ ಗತಿಯನ್ನೇ ಬದಲಿಸಿದರು.

ಆರ್‌ಸಿಬಿ ತಂಡದ ವೇಗಿಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ದೊಡ್ಡ ಶಾಟ್‌ಗಳಿಗೆ ಮುಂದಾದ ನಿಕೋಲಸ್ ಪೂರನ್, 17ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 19 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡಿರಿಗಳ ಸಮೇತ 62 ರನ್ ಬಾರಿಸಿದರು.
ಇದಕ್ಕೂ ಮುನ್ನ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೃಹತ್ ಮೊತ್ತವನ್ನು ಕಲೆಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications