RCB vs MI: ಆರ್‌ಸಿಬಿಗೆ ಗೆಲುವಿನ ಮಾಲೆ ತೊಡಿಸಿದ್ದು ಕೃನಾಲ್ ಅಲ್ಲ, ಆ ಒಂದು ಸಿಕ್ಸರ್ ಬಾರಿಸಿದ ಪ್ಲೇಯರ್
ರಾಯ್‌ಪುರ್: 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಕಾದಾಟ ನಡೆಸಿದವು. ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿತ್ತು. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ರಯಾನ್ ರಿಕಲ್ಟನ್ (2) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ರೋಹಿತ್ ಶರ್ಮಾ (22) ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಇವರಿಗೆ ಭುವಿ ಪೆವಿಲಿಯನ್ ಹಾದಿ ತೋರಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಪರಿಣಾಮ ಮುಂಬೈ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ನಮನ್ ಧೀರ್ (47) ಹಾಗೂ ತಿಲಕ್ ವರ್ಮಾ (57) ರನ್ ಕಲೆ ಹಾಕಿ ತಂಡದ ಮೊತ್ತ ಹಿಗ್ಗಿಸಿದರು. ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ (0), ದೇವದತ್ ಪಡಿಕ್ಕಲ್ (12), ರಜತ್ ಪಾಟಿದಾರ್ (8) ಪವರ್ ಪ್ಲೇನ ಲಾಭ ಪಡೆಯುವಲ್ಲಿ ವಿಫಲರಾದರು. ಈ ಹಂತದಲ್ಲಿ ಜಾಕೊಬ್ ಬೆಥೆಲ್ (26) ಹಾಗೂ ಕೃನಾಲ್ ಪಾಂಡ್ಯ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಕೃನಾಲ್ ಪಾಂಡ್ಯ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಇವರ ಜವಾಬ್ದಾರಿಯುತ ಆಟ, ಗಾಯದ ನಡುವೆ ಇನಿಂಗ್ಸ್ ಕಟ್ಟಿದ್ದು ಈ ಪಂದ್ಯ ಟರ್ನಿಂಗ್ ಪಾಯಿಂಟ್ ಅಲ್ಲ.
ಆ ಒಂದು ಸಿಕ್ಸರ್ ಗೆಲುವಿಗೆ ಕಾರಣ
ಆರ್‌ಸಿಬಿ ತಂಡದ ರೊಮಾರಿಯೋ ಶೆಫರ್ಡ್ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಔಟ್ ಆದರು. ಈ ವೇಳೆ ಆರ್‌ಸಿಬಿ ಪಂದ್ಯ ಗೆಲ್ಲಲು ಮೂರು ಎಸೆತಗಳಲ್ಲಿ 9 ರನ್ ಅವಶ್ಯಕತೆ ಇತ್ತು. ಆಗ ಬ್ಯಾಟಿಂಗ್ ಬಂದ ಸ್ವಿಂಗ್ ಕ್ವಿಂಗ್ ಭುವನೇಶ್ವರ್ ಕುಮಾರ್ ಎದುರಿಸಿದ ಮೊದಲ ಎಸೆತ ವೈಡ್ ಆಯಿತು. ಆದರೆ ನಂತರದ ಎಸೆತದಲ್ಲಿ ಓವರ್ ದಿ ಕವರ್ ಮೇಲೆ ಸಿಕ್ಸರ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ನಂತರದ ಎಸೆತದಲ್ಲಿ ಒಂದು ರನ್ ಪಡೆದ ಭುವಿ, ಇನ್ನೊಂದು ತುದಿಗೆ ನಿಂತರು. ಕೊನೆಯ ಎಸೆತದಲ್ಲಿ ರಸಿಕ್ ಸಲಾಂ ದಾರ್ 2 ರನ್ ಪಡೆದು ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 166; ತಿಲಕ್ ವರ್ಮಾ 57, ನಮನ್ ಧೀರ್ 47, ಭುವನೇಶ್ವರ್ ಕುಮಾರ್ (ಆರ್‌ಸಿಬಿ) 23ಕ್ಕೆ 4
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167; ಕೃನಾಲ್ ಪಾಂಡ್ಯ 73, ಜಾಕೊಬ್ ಬೆಥೆಲ್ 27, ಕಾರ್ಬಿನ್ ಬೋಷ್ (ಎಂಐ) 26ಕ್ಕೆ 4
ಪಂದ್ಯದ ಫಲಿತಾಂಶ: ಆರ್‌ಸಿಬಿಗೆ 2 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications